ಮುಳಿಯಾರು : ಷಷ್ಠಿ ಉತ್ಸವ ಸಂಪನ್ನ

12:01 AM, Saturday, December 19th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
shashti

ಮುಳ್ಳೇರಿಯಾ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠೀ ಉತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಸಂಪನ್ನವಾಯಿತು.

ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರಗಿತು. ಕಾರ್ಯಕ್ರಮದಂಗವಾಗಿ ಅಭಿಷೇಕ, ಗಣಹೋಮ, ನವಕಾಭಿಷೇಕ ಜರಗಿತು. ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಸಂಘದವರಿಂದ ಭಜನಾ ಉಪಾಸನೆ ಜರಗಿತು. ಭಕ್ತರಿಂದ ತುಲಾಭಾರ ಸೇವೆ ನಡೆಯಿತು.
ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ಜರಗಿತು. ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ರಂಗೇರಿತು.

ರಾತ್ರಿ ಪ್ರತಿ ವರ್ಷದಂತೆ ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಕ ರಾಜಾಂಗಣದಲ್ಲಿ ನೃತ್ಯ ಶ್ರೀ ಭೂತಬಲಿ, ಶಯನ ಜರಗಿತು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಕ್ಷೇತ್ರ ಪಾರಂಪರ್ಯ ಮತ್ತು ಆಡಳಿತ ಮೊಕ್ತೇಸರರಾಗಿರುವ ಎನ್.ಸುಬ್ರಾಯ ಬಳ್ಳುಳ್ಳಾಯ ಉಪಸ್ಥಿತರಿದ್ದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭವನ್ನು ಸಂಯೋಜಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English