ಬೇಳ ಸೈಂಟ್ ಮೇರೀಸ್ ಹೈಸ್ಕೂಲ್‌ನಲ್ಲಿ ಕ್ರಿಸ್‌ಮಸ್ ಆಚರಣೆ

7:04 PM, Monday, December 21st, 2015
Share
1 Star2 Stars3 Stars4 Stars5 Stars
(4 rating, 5 votes)
Loading...
Bela high school

ಬದಿಯಡ್ಕ: ಕ್ರಿಸ್‌ಮಸ್ ಹಬ್ಬವು ಲೋಕಕ್ಕೆ ಶಾಂತಿ,ಸಮಾಧಾನ, ಪ್ರೀತಿಯ ಸಂದೇಶ ತಂದ ಪ್ರಭು ಕ್ರಿಸ್ತರ ಜನ್ಮದಿನವಾಗಿದ್ದು, ಇಂದು ಇಡೀ ವಿಶ್ವವೇ ಇದನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಜಾತಿ ಮತ ಭೇದವಿಲ್ಲದೆ ಒಬ್ಬರನ್ನೊಬ್ಬರು ಅರಿತು ಐಕ್ಯತೆ ಸಹೋದರತೆಯ ಭಾವದಿಂದ ಬಾಳಬೇಕು. ಪ್ರತಿಯೊಬ್ಬರಿಗೂ ಒಳಿತನ್ನು ಬಯಸಬೇಕು ಎಂದು ಬೇಳ ಸೈಂಟ್ ಮೇರೀಸ್ ಹೈಸ್ಕೂಲ್ ಪ್ರಬಂಧಕ ಅತೀ.ವಂದನೀಯ ಸ್ವಾಮಿ ವಿನ್ಸೆಂಟ್ ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.

ಬೇಳ ಸೈಂಟ್ ಮೇರೀಸ್ ಹೈಸ್ಕೂಲ್ ಆಶ್ರಯದಲ್ಲಿ ಶಾಲಾ ಪರಿಸರದಲ್ಲಿ ನಡೆದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಎಲ್ಲಾ ಮತದಲ್ಲಿಯೂ ಶಾಂತಿ ಸಮಾಧಾನ ಮತ್ತು ಪ್ರೀತಿಯ ಸಂದೇಶವನ್ನು ಮಾತ್ರವೇ ಸಾರಲಾಗಿದೆಯಲ್ಲದೆ ಹಿಂಸೆ, ಕ್ರೌರ್ಯ, ಅಸಾಮಾಧಾನ ಅಶಾಂತಿಯ ಸಂದೇಶವನ್ನು ನೀಡಿರುವುದಿಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸಹೋದರ ಮನೋಭಾವದಿಂದ ಬಾಳಿದರೆ ನಮ್ಮ ನಾಡು, ದೇಶ ಸುಭದ್ರವಾಗಿ ಉಳಿಯಲು ಸಾಧ್ಯ. ಇದಕ್ಕಾಗಿ ನಾವು ಶುದ್ದ ಅಂತಃಕರಣಗಳಿಂದ ಕಂಕಣಬದ್ಧರಾಗಬೇಕು.ಇದರಿಂದ ನಿಜವಾದ ಕ್ರಿಸ್‌ಮಸ್ ಹಬ್ಬದ ಸವಿಯನ್ನು ನಾವು ಪಡೆಯಲು ಸಾಧ್ಯವೆಂದು ಅವರು ತಿಳಿಸಿದರು.

ಬಳಿಕ ಗುರುಗಳಿಗೆ ಅವರ 61ನೇ ಹುಟ್ಟುಹಬ್ಬದ ಶುಭಾಶಯವನ್ನು ಶಾಲಾ ವತಿಯಿಂದ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಈ ಅಧ್ಯಯನ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಜೀನಾರವರು ಸಮ್ಮಾನಿಸಿದರು. ಶಾಲಾ ಮಕ್ಕಳಿಂದ ಭಕ್ತಿಗೀತೆಗಳನ್ನು ಹಾಡಲಾಯಿತು. ಪುಟಾಣಿ ಮಕ್ಕಳಿಂದ ವಿವಿಧ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಜೀನಾ ಕಲ್ಲರಕ್ಕಲ್ ಸ್ವಾಗತಿಸಿ,ಶಿಕ್ಷಕಿ ಸಿ.ಟ್ರೀಸಾ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಿಕ್ಷಕರಾದ ಜೋನ್ ಕ್ರಾಸ್ತ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English