ಮಂಜೇಶ್ವರ: ಮಂಜೇಶ್ವರದಲ್ಲಿ ಪಕ್ಷ ವಿರೋಧಿ ಶಕ್ತಿಗಳಿಂದ ಸಂಕಷ್ಟಕ್ಕೊಳಗಾಗಿದ್ದ ಕಾಂಗ್ರೆಸ್ಸ್‌ನ ಕಾರ್ಯಕರ್ತರನ್ನು ಒಗ್ಗೂಡಿಸಿ ಮಂಡಲ ಸಮಿತಿಗೆ ನವಚೈತನ್ಯ ತುಂಬುವ ಹೊಣೆಗಾರಿಕೆಯನನು ಜಿಲ್ಲಾ ಕಾಂಗ್ರೆಸ್ಸ್ ಸಮಿತಿಯು ಹಿರಿಯ ಕಾರ್ಯಕರ್ತರಾದ ಎಂ.ಜೆ ಕಿಣಿಯವರಿಗೆ ನೀಡಿದೆ. ಬಿಜೆಪಿಯ ಕೋಮುವಾದ ಹಾಗೂ ಕೇಂದ್ರ ಸರಕಾರದ ಸುಳ್ಳು ಪ್ರಚಾರಗಳನ್ನು ಎದುರಿಸಿ ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿಯವರ ಜನಪರ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ಕರೆ ನೀಡಿದರು.
ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ನೂತನ ಅಧ್ಯಕ್ಷರಾಗಿ ನಿಯೋಜಿತರಾದ ಎಂ.ಜೆ ಕಿಣಿಯವರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಮಾತನಾಡಿ,ಹಿರಿಯ ಕಾರ್ಯಕರ್ತರಾಗಿರುವ ಎಂ.ಜೆ.ಕಿಣಿಯವರ ಮಾರ್ಗದರ್ಶನ ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ಗೆ ಬಲತುಂಬಲಿದೆ.ಕಾರ್ಯಕರ್ತರು ಉತ್ಸಾಹಿತರಾಗಿ ಪಕ್ಷದ ಬಲರ್ಧನೆಗೆ ನಿಷ್ಠರಾಗಬೇಕೆಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಉಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು.ಯುವ ಕಾಂಗ್ರೆಸ್ಸ್ ಮುಖಂಡ ಐಆರ್‌ಡಿಪಿ ಇಬ್ರಾಹಿಂ,ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್,ಮೀಂಜ ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ,ವರ್ಕಾಡಿ ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಮಜಾಲ್ ಮೊಹಮ್ಮದ್,ಯುವ ಕಾಂಗ್ರೆಸ್ಸ್ ಬ್ಲಾಕ್ ಕಾರ್ಯದರ್ಶಿ ಇರ್ಷಾದ್,ಮೈನಾರಿಟಿ ಸೆಲ್ ರಾಜ್ಯ ಸಮಿತಿ ಸದಸ್ಯ ಹಮೀದ್ ಕೋಳಿಯಡ್ಕ ಮೊದಲಾದವರು ಶುಭಹಾರೈಸಿದರು.ಅಬ್ದುಲ್ ಖಾದರ್ ಸ್ವಾಗತಿಸಿ,ನಾಗೇಶ್ ಮಂಜೇಶ್ವರ ವಂದಿಸಿದರು.
Click this button or press Ctrl+G to toggle between Kannada and English