ಬಂಟ್ವಾಳ: ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ‍್ಯನಿರ್ವಾಹಕ ಅಭಿಯಂತರರು ದಿಡೀರ್ ಬೇಟಿ ನೀಡಿ ಅಲ್ಲಿನ ಜನರ ಬೇಡಿಕೆಗಳನ್ನು ಅವಲೋಕಿಸಿದರು. ಬಳಿಕ ಮೆಲ್ಕಾರ್ ರಸ್ತೆ ಅಗಲೀಕರಣದ ರೂವಾರಿ ಟ್ರಾಫಿಕ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ಅಯ್ಯ ಅವರು ಮೆಲ್ಕಾರ್ ಅಗಲೀಕರಣವಾದ ಸ್ಥಳಕ್ಕೆ ಧೂಳಿನಿಂದ ಮುಕ್ತಿ ಸಿಗಲು ಡಾಮರೀಕರಣ ಮಾಡಿಕೊಡುವಂತೆ ಮತ್ತು ಜನರು ರಸ್ತೆ ದಾಟಲು ತೀರಾ ಕಷ್ಟವಾಗುತ್ತಿದ್ದು ಜೀಬ್ರಾ ಲೈನ್ ಅಳವಡಿಸಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿಯನ್ನು ನೀಡಿದರು.
ಈ ಸಂದರ್ಭ ಮನವಿಯನ್ನು ಸ್ವೀಕರಸಿದ ಎಕ್ಷಿಕ್ಯೂಟಿವ್ ಇಂಜೀನಿಯರ್ ರಮೇಶ್, ಎ.ಇ ಅನ್ಸರ್, ಎ.ಇ.ಇ. ರಹೀಮಾನ್ ಅವರು ಒಂದು ವಾರದೊಳಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಕಾಮಗಾರಿಗೆ ಅಡ್ಡಿಯಾಗುತ್ತಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಈಗಾಗಲೇ ಮೆಸ್ಕಾಂ ಇಲಾಖೆಗೆ ಮನವಿ ನೀಡಿದೆ. ಮತ್ತು ಸುಸಜ್ಜಿತ ಬಸ್ ನಿಲ್ದಾಣದ ಜೊತೆ ಮೂರು ಸಾರ್ವಜನಿಕ ಶೌಚಾಲಯವನ್ನು ಜೊತೆಗೆ ಶುಚಿತ್ವದ ಹಿನ್ನಲೆಯಲ್ಲಿ ಕಸದ ತೊಟ್ಟಿಯನ್ನು ನೀಡಬೇಕೆಂದು ಪುರಸಭೆಗೂ ಮನವಿ ನೀಡಲಾಗಿದೆ ಎಂದು ತಿಳಿಸಿದರು.
ಸಿಬಂದಿಗಳಾದ ಕೃಷ್ಣ ನ್ಯಾಕ್, ಕುಟ್ಟಿ, ಮನೋಹರ, ಹರೀಶ್ ಭಟ್, ಗನೇಶ್ ಮತ್ತಿರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English