ಯುವ ಜನಾಂಗ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಅಗತ್ಯವಿದೆ : ಡಾ.ಹರಿಕೃಷ್ಣ ಭರಣ್ಯ

11:29 PM, Friday, December 25th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Nirchal Aradhana Sangeetha school

ಬದಿಯಡ್ಕ: ಸಂಸ್ಕೃತಿ ಮತ್ತು ನಾಗರಿಕತೆಗಳು ಮಾನವನು ಬೆಳೆದು ಬಂದ ಹಿರಿಮೆಯನ್ನು ತೋರಿಸುವ ಕೈಗನ್ನಡಿಗಳಾಗಿವೆ.ಸಂಗೀತವು ಕಲೆಯ ನೆಲೆಯಾಗಿದೆ.ಸಂಗೀತ ಕಲಿಕೆಯಿಂದ ಮನಸ್ಸು ಮತ್ತು ದೈಹಿಕ ಆರೋಗ್ಯ ಹೆಚ್ಚುವುದು.ಈ ನಿಟ್ಟಿನಲ್ಲಿ ಯುವ ಜನಾಂಗ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಅಗತ್ಯವಿದೆಯೆಂದು ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಪ್ರಾಂಶುಪಾಲ ಡಾ.ಹರಿಕೃಷ್ಣ ಭರಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನೀರ್ಚಾಲಿನ ಆರಾಧನಾ ಸಂಗೀತ ಶಾಲೆಯ ವಾರ್ಷಿಕೋತ್ಸವವನ್ನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಶಿಕ್ಷಣ ತಜ್ಞ,ಸಾಹಿತಿ ವಿ.ಬಿ.ಕುಳಮರ್ವ,ನಿವೃತ್ತ ಮುಖ್ಯ ಶಿಕ್ಷಕ ಕಾಕುಂಜೆ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ,ರೂಪಾ ಪ್ರಿಯದರ್ಶಿನಿ ಕಾವೇರಿಕಾನ ವಂದಿಸಿದರು.ಸರ್ವಾಣಿ ಕೆ,ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಂಚರತ್ನ ಕೀರ್ತನೆಗಳೊಂದಿಗೆ ಸಂಗೀತಾರಾಧನೆ ನಡೆಯಿತು.ಸಂಜೆಯ ಇಳಿಹೊತ್ತಿನವರೆಗೆ ನಡೆದ ವೈವಿಧ್ಯಮಯ ಸಂಗೀತ ಕಾರ್ಯಕ್ರಮದಲ್ಲಿ ಮಕ್ಕಳು ಗುಂಪಾಗಿ ಹಾಗೂ ವೈಯುಕ್ತಿಕವಾಗಿ ಹಾಡುವ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಹಿಮ್ಮೇಳನ ವಯಲಿನ್ ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು,ರೇಷ್ಮಾ,ಅನನ್ಯ ಕೆ.ಎಚ್,ಅನಘಾ ರಾಮನ್ ಸಹಕರಿಸಿದರು.ಮೃದಂಗದಲ್ಲಿ ವಿದ್ವಾನ್ ಶ್ರೀಧರ ರೈ ಮತ್ತು.ಮಾ.ಅಕ್ಷರ ಕೆ.ಎಚ್ ಸಹಕರಿಸಿದರು.ಸಂಗೀತ ಶಾಲೆಯ ನಿರ್ದೇಶಕರಾದ ವಿಜಯಾ ಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಕಾರ್ಯಕ್ರಮ ನಿರ್ದೇಶಿಸಿದರು.ಶ್ಯಾಮ ಪ್ರಸಾದ್ ಕುಳಮರ್ವ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English