ಅಮೈ ಈಶ್ವರ ಭಟ್ ಸಂಸ್ಮರಣೆ:ಗಮಕ-ವ್ಯಾಖ್ಯಾನ ಕಾರ್ಯಕ್ರಮ

11:38 PM, Friday, December 25th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Gamaka-Vachana

ಉಪ್ಪಳ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರನ್ನು ಸುಮಾರು 40 ವರ್ಷಗಳಿಂದಲೂ ಅನನ್ಯವಾಗಿ ಆರಾಧಿಸುತ್ತಿದ್ದು, ಸಂಗೀತದ ಗುರುಗಳೂ, ಗಮಕಿಗಳೂ, ಸಜ್ಜನರೂ ಆಗಿದ್ದು ಇತ್ತೀಚೆಗೆ ನಿಧನರಾದ ಅಮೈ ಈಶ್ವರ ಭಟ್ಟರ ಸಂಸ್ಮರಣೆಯೊಂದಿಗೆ ಗಮಕ-ವ್ಯಾಖ್ಯಾನ ಕಾರ್ಯಕ್ರಮವು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಗಮಕಿ, ಕವಿ ದಿ| ಕೈಂತಜೆ ನರಸಿಂಹ ಭಟ್ಟ ವಿರಚಿತ ಶ್ರೀದೇವೀ ಮಹಾತ್ಮೆ ಕೃತಿಯ ಮಹಾಲಕ್ಷ್ಮೀ ಕಾಂಡ ಭಾಗವನ್ನು ಆಯ್ದುಕೊಳ್ಳಲಾಗಿತ್ತು. ಗಮಕಿಯಾಗಿ ಗಣಪತಿ ಪದ್ಯಾಣ ಮತ್ತು ವ್ಯಾಖ್ಯಾನಕಾರರಾಗಿ ಮುಳಿಯ ಶಂಕರ ಭಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕ ಶ್ರೀಕಾಂತ್ ಅವರು ಸ್ವಾಗತಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತಿ ಸೇವಾಟ್ರಸ್ಟಿನ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್,ಆಡಳಿತ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್, ಟ್ರಸ್ಟಿನ ಸದಸ್ಯರು, ಶಾಲೆಯ ಪ್ರಾಚಾರ್ಯರು ಶಿಕ್ಷಕ-ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English