ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಸಾಮಾಜಿಕ ಬದ್ಧತೆ ಇರಬೇಕು: ಶಾಸಕ ಕೆ.ಕುಂಞಿರಾಮನ್

12:27 AM, Saturday, December 26th, 2015
Share
1 Star2 Stars3 Stars4 Stars5 Stars
(No Ratings Yet)
Loading...
Bovikana

ಕಾಸರಗೋಡು: ಶಿಕ್ಷಣ ಕೇವಲ ಉದ್ಯೋಗಕಕ್ಕಾಗಿ ಮಾತ್ರವಲ್ಲ ಸಮಾಜದ ಉನ್ನತಿಗೆ, ಕುಟುಂಬದ ಒಳತಿಗೆ ಸಾಮಾಜಿಕ ಬದ್ದತೆ ಇರಬೇಕು ಎಂದು ಉದುಮ ಶಾಸಕ ಕೆ.ಕುಂಞಿರಾಮನ್ ಹೇಳಿದರು.

ಅವರು ಬೋವಿಕ್ಕಾನ ಸೌರ್ಪಾಣಿಕ ಸಭಾಂಗಣದಲ್ಲಿ ನಡೆದ ಅಖಿಲ ಕೇರಳ ಯಾದವ ಸಭಾದ ಆಶ್ರಯದಲ್ಲಿ ಸಾರಥಿ ಯುಎಇ ಶೈಕ್ಷಣಿಕ ನಗದು ಪುರಸ್ಕಾರ ವಿತರಣೆ ಕಾಸರಗೋಡು ತಾಲೂಕಿನ ತ್ರಿಸ್ತರ ಪಂಚಾಯಿತಿಗಳಿಗೆ ಆಯ್ಕೆಯಾದ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಯಾದವ ಸಭಾದ ವೆಬ್‌ಸೈಟ್ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ತಲೆಮಾರು ಜಾತಿ ಸಂಪ್ರದಾಯವನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು, ಆದರೆ ಇದೀಗ ಜಾತಿ ಸಂಘಟನೆಯು ಸಮಾಜದಲ್ಲಿ ಅನಿವಾರ್ಯವಾಗಿದೆ. ಮಿಕ್ಕ ಎಲ್ಲಾ ಜಾತಿ ಸಂಘಟನೆಗಳು ತಮ್ಮ ಸಂಘಟನೆಯ ಮೂಲಕ ಸೌಲಭ್ಯಗಳನ್ನು ಈ ಮೂಲಕ ಪಡೆಯುತ್ತಿದ್ದಾರೆ. ಸಮುದಾಯದ ಸಂಘಟನೆಯ ಮೂಲಕ ಸಮಾಜದ ಒಳಿತಿಯಾಗಬೇಕು. ಈ ನಿಟ್ಟಿನಲ್ಲಿ ಯುವಕರ ಪಾತ್ರ ಹಿರಿದಾದ್ದು, ನಮ್ಮ ಸಮುದಾಯದ ಹಿರಿಮೆಯನ್ನು ಎತ್ತಿಹಿಡಿಯಬೇಕೆಂದರು.

ಅಖಿಲ ಕೇರಳ ಯಾದವ ಸಭಾ ರಾಜ್ಯಾಧ್ಯಕ್ಷ ಇ.ಕೆ.ರವೀಂದ್ರನ್ ಅಧ್ಯಕ್ಷತೆವಹಿಸಿದರು.ಈ ಸಂದರ್ಭದಲ್ಲಿ ಕಾಸರಗೋಡು ತಾಲೂಕಿನಿಂದ ತ್ರಿಸ್ತರ ಪಂಚಾಯಿತಿಗಳಿಗೆ ಆಯ್ಕೆಯಾದ ಸಮುದಾಯ ಜನಪ್ರತಿನಿಧಿಗಳ ಪರಿಚಯವನ್ನು ತಾಲೂಕು ಅಧ್ಯಕ್ಷ ಕೃಷ್ಣನ್ ಅಡ್ಕತ್ತೊಟ್ಟಿ ನಿರ್ವಹಿಸಿದರು. ಜನಪ್ರತಿನಿಧಿಗಳಿಗೆ ಶಾಸಕ ಕೆ.ಕುಂಞಿರಾಮನ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಸಮುದಾಯದ ಸುಮಾರು 68 ವಿದ್ಯಾರ್ಥಿಗಳಿಗೆ ಶಾಸಕ ಎನ್.ಎ.ನೆಲ್ಲಿಕುನ್ನು ಸ್ಮರಣಿಕೆ, ನಗದು, ಪ್ರಶಸ್ತಿ ಪತ್ರ ನೀಡಿದರು. ನಂತರ ಮಾತನಾಡಿ, ಸಮುದಾಯದ ಕ್ಷೇತ್ರ ಸ್ಥಾನಿಕರ ವಿಷಯದಲ್ಲಿ ಕಳೆದ ಕೆಲವು ವರ್ಷಗಳಿಂದ ವಿಧಾನಸಭೆಯಲ್ಲಿ ವಿಷಯ ಮಂಡಿಸಿದ್ದೇನೆ. ಆದರೂ ಪ್ರಯೋಜನ ಕಾಣಲಿಲ್ಲ. ಈ ಬಗ್ಗೆ ಸರಕಾರದ ಕಣ್ಣು ತೆರೆಯಲು ಪ್ರಯತ್ನಿಸಲಾಗುವುದು. ಅದೇ ರೀತಿಯಲ್ಲಿ ಯಾದವ ಸಮುದಾಯದವರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಹಿಂದಿನಿಂದಲೇ ಬೇಡಿಕೆಯನ್ನಿಟ್ಟಿದ್ದರು ಈ ತನಕ ಸಾಧ್ಯವಾಗಲಿಲ್ಲ. ಇದಕ್ಕಾಗಿ ಸಂಘಟನೆಯ ಹಕ್ಕೊತ್ತಾಯ ಅಗತ್ಯವಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ.ಪಂ. ಸದಸ್ಯ ಅಡ್ವಾ.ಕೆ.ಶ್ರೀಕಾಂತ್ ಮಾತನಾಡಿ, ಸಹಿಷ್ಣತೆಯಿರುವ ಸಮುದಾಯವಾಗಿದೆ ಯಾದವ ಸಮುದಾಯ. ಶ್ರೀಕೃಷ್ಣನ ಪರಂಪರೆಯನ್ನು ಹೊಂದಿರುವ ಸಮುದಾಯದ ಐಕ್ಯತೆ ಅನಿವಾರ್ಯವಾಗಿದೆ. ಮೊದಲು ಪ್ರತಿಯೊಬ್ಬನ ಮನೆಯಲ್ಲಿ ಶಾಂತಿ ನೆಲೆಸಬೇಕು, ನಂತರ ಕುಟುಂಬ, ಸಮುದಾಯ ಹೀಗೆ ಆದಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆನಿಲ್ಲಲು ಸಾಧ್ಯವಾಗುವುದು, ಇದು ಪ್ರತಿಯೊಬ್ಬರ ಮನಸ್ಸಿನಲ್ಲಿರಬೇಕು ಎಂದರು.

ಸಮುದಾಯದ ನೂತನ ವೆಬ್‌ಸೈಟ್‌ನ್ನು ಜಿಲ್ಲಾ ಶಿಕ್ಷಣಾಧಿಕಾರಿ ಇ.ವೇಣುಗೋಪಾಲ ಎಡನೀರು ಉದ್ಘಾಟಿಸಿ ಮಾತನಾಡಿದರು. ಕಾರಡ್ಕ ಬ್ಲಾಕ್ ಪಂ. ಸದಸ್ಯ ಕೆ.ವಾರಿಜಾಕ್ಷನ್, ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಾಲಕೃಷ್ಣ ವೊರ್ಕೊಡ್ಲು, ಯಾದವ ಸಭಾ ರಾಜ್ಯ ಸಮಿತಿ ರಕ್ಷಾಧಿಕಾರಿ ಎನ್.ಗಂಗಾಧರ ನೆಲ್ಲಿತ್ತಳ, ಅಡ್ವಾ. ಎನ್.ಸೋಮನಾಥನ್, ವಳಪ್ಪಿಲ್ ಗೋಪಿ, ವಿ.ನಾರಾಯಣನ್, ಪಳ್ಳಿಪುರಂ ರಾಘವನ್, ಬಿ. ಉದಯ ಕುಮಾರ್ ಮೊದಲಾದವರು ಮಾತನಾಡಿದರು.

ಕೆ.ವಿ.ಹರಿದಾಸನ್, ಕೆ.ವಿಜಯರಾಘವನ್, ಬಾಬು ಕುನ್ನತ್ತ್, ರಾಮಚಂದ್ರ ಅಡೂರು, ಎಸ್.ರಾಧಾಕೃಷ್ಣನ್, ಕೆ.ಎಂ.ದಾಮೋದರನ್, ಕೆ.ವಿ.ನಾರಾಯಣನ್, ಎಂ.ವೇಳಪ್ಪನ್, ಪಿ.ಕೆ.ಪ್ರಕಾಶನ್, ಪಿ.ಜನಾರ್ದನ್, ಎಂ.ವಿ.ಕುಂಞಿರಾಮನ್, ಇ.ಪಿ.ಚಂದ್ರನ್, ಜನಪ್ರತಿನಿಧಿಗಳಾದ ಸ್ಪಪ್ನ ಜಿ., ಇ.ಶಾಂತಕುಮಾರಿ, ಶ್ರೀಧರ ಎಂ., ರೇಣುಕಾದೇವಿ ಕೆ., ಸ್ಮಿತಾ ಪಿ, ಶ್ರೀವಿದ್ಯಾ ಬಿ., ಜಯಶ್ರೀ ಪಿ., ಮನೋಹರನ್ ಎನ್.ಎ., ಉಷಾ ಕುಮಾರಿ ಬಿ., ಶಶಿಕಲ, ಗುಲಾಬಿ ಎಂ., ನಳಿನಿ ಕೆ., ಶಶಿಧರ ಟಿ., ಶ್ರೀಧರ್ ಕೂಡ್ಲು, ಪುಷ್ಪಾ ಕೆ., ಉಮಾವತಿ ಕೆ., ಶುಭ ಲೋಹಿತಾಕ್ಷನ್, ದಿವಾಕರನ್ ಪಿ. ಮೊದಲಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಅಖಿಲ ಕೇರಳ ಯಾದವ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಾ. ಎಂ.ರಮೇಶ್ ಸ್ವಾಗತಿಸಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕಡಾರ್ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English