ಮಂಗಳೂರು : ಒಬ್ಬ ಸ್ವಾಭಿಮಾನಿ ನಾಯಕ ತನ್ನ ಬದುಕಿನ ಬಹಳ ಪ್ರಮುಖ ಕಾಲಘಟ್ಟದ 43 ವರ್ಷಗಳನ್ನು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಶ್ರಮಿಸಿದ ಬಳಿಕವೂ ಆ ಪಕ್ಷ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಸುವರ್ಣಯುಗದಲ್ಲಿ ಇರುವಾಗಲೂ ಯಾವ ಅಧಿಕಾರ, ಸ್ಥಾನಮಾನ ಪಡೆದಿಲ್ಲ ಎಂದರೆ ಅದಕ್ಕಿಂತ ಆಶ್ಚರ್ಯ ಬೇರೆ ಇಲ್ಲ. ಅಂತಹ ವ್ಯಕ್ತಿಗಳು ಪಕ್ಷದಲ್ಲಿ ಇರ‍್ತಾರಾ ಎನ್ನುವುದು ಒಂದು ಕಡೆಯಾದರೆ ಅಂತಹ ಒಬ್ಬ ಸಕ್ರಿಯ ಕಾರ್ಯಕರ್ತನನ್ನು ಆ ಪರಿ ದುಡಿಸಿದ ಬಳಿಕವೂ ಆತನ ರಾಜಕೀಯ ಬದುಕಿನಲ್ಲಿ ಆತನಿಗೆ ಏನೂ ಮಾಡದ ಪಕ್ಷವೊಂದಿದೆ ಎಂದರೆ ಅದನ್ನು ನೀವು ನಂಬಲೇಬೇಕು. ಆ ಪಕ್ಷದ ಹೆಸರು ರಾಷ್ಟ್ರೀಯ ಕಾಂಗ್ರೆಸ್ ಮತ್ತು ಆ ನೈಜ ಕಾರ್ಯಕರ್ತನ ಹೆಸರು ಕೆ.ಹರಿಕೃಷ್ಣ ಬಂಟ್ವಾಳ.
ಪಕ್ಷಕ್ಕೆ ಬರುವಾಗಲೇ ಶಾಸಕ, ಸಂಸದ, ಮಂತ್ರಿ ಸಾಧ್ಯವಾದರೆ ಮುಖ್ಯಮಂತ್ರಿ ಆಗುವ ಕನಸು ಕಾಣುವ ಜನರೇ ಹೆಚ್ಚಿರುವಾಗ, ಪಕ್ಷಕ್ಕೆ ಬಂದು ಆರು ತಿಂಗಳುಗಳಲ್ಲಿ ಶಾಸಕನಾಗಲು ಸಾಧ್ಯವಿರುವ ಪಕ್ಷ ಎಂದರೆ ಕಾಂಗ್ರೆಸ್. ಇಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಾಗಿ ಇಲ್ಲದವರು ಪಕ್ಷ ಸೇರಿದ ಕೂಡಲೇ ಶಾಸಕ ಸ್ಥಾನಕ್ಕೆ ಟಿಕೇಟು ಪಡೆದುಕೊಳ್ಳುತ್ತಾರೆ. ಇಲ್ಲಿ ಜಾತಿ ಕೂಡ ಬಹಳ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಇಲ್ಲಿ ಅಲ್ಪಸಂಖ್ಯಾತ ಸಮುದಾಯದ ಕ್ರೈಸ್ತರು ಎರಡು ಬಾರಿ ವಿಧಾನಪರಿಷತ್ ಗೆ ಆಯ್ಕೆಯಾಗುತ್ತಾರೆ. ಮುಸ್ಲಿಮರು ಒಂದು ಬಾರಿ ವಿಧಾನಪರಿಷತ್‌ಗೆ ಕಳುಹಿಸಲ್ಪಡುತ್ತಾರೆ. ಗೌಡ ಸಾರಸ್ವತ ಸಮಾಜದವರು ಒಂದು ಬಾರಿ ಎಂಎಲ್ ಸಿ ಗಳಾಗುತ್ತಾರೆ. ಗೌಡ ಸಮುದಾಯದವರು ಕೂಡ ವಿಧಾನ ಪರಿಷತ್‌ಗೆ ಆಯ್ಕೆಯಾಗುತ್ತಾರೆ. ಅದಲ್ಲದೆ ಬಂಟರು ಎರಡು ಬಾರಿ ವಿಧಾನ ಪರಿಷತ್‌ಗೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೋಗಿರುವಾಗ ಜಿಲ್ಲೆಯಲ್ಲಿ ಪ್ರಭಾವಿ ಸಮುದಾಯವಾಗಿರುವ, ನಿರ್ಣಾಯಕ ಮತದಾರರಾಗಿರುವ ಬಿಲ್ಲವರನ್ನು ಒಂದು ಬಾರಿಯೂ ವಿಧಾನಪರಿಷತ್‌ಗೆ ಕಳುಹಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗರು ಮನಸ್ಸು ಮಾಡಿಲ್ಲ ಎಂದರೆ ಅದಕ್ಕಿಂತ ದುರಂತ ಬೇರೆ ಇದೆಯಾ ಎನ್ನುವುದನ್ನು ಬಿಲ್ಲವರೇ ತಮ್ಮ ತಮ್ಮಲ್ಲಿ ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಯಾವುದೋ ಒಬ್ಬ ಬಿಲ್ಲವ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕಿಂತ ಜಿಲ್ಲೆಯ ಪ್ರತಿಯೊರ್ವ ಕಾರ್ಯಕರ್ತನ ಪರಿಚಯ ಇರುವ, ಜಿಲ್ಲೆಯ ಇಂಚಿಂಚನ್ನು ಕೂಡ ಬಲ್ಲ ಒಬ್ಬ ವ್ಯಕ್ತಿಗೆ ಅವಕಾಶ ಕೊಟ್ಟಿದ್ದರೆ ಅದು ಕಾಂಗ್ರೆಸ್ ಪಕ್ಷದ ಘನತೆಯನ್ನು ಕೂಡ ಹೆಚ್ಚು ಮಾಡುತ್ತಿತ್ತು ಮತ್ತು ಅರ್ಹ ವ್ಯಕ್ತಿಯನ್ನು ವಿಧಾನಪರಿಷತ್‌ಗೆ ಕಳುಹಿಸಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಅದನ್ನು ಕಾಂಗ್ರೆಸ್ ಮಾಡಲಿಲ್ಲ. ಆದರೆ ಕಾಂಗ್ರೆಸ್ ಮಾಡಲಿಲ್ಲ ಎನ್ನುವುದಕ್ಕಿಂತ ಆಸ್ಕರ್ ಅವರು ಅದಕ್ಕೆ ಅವಕಾಶ ಕೊಡಲಿಲ್ಲ ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತದೆ.
ಹರಿಕೃಷ್ಣ ಬಂಟ್ವಾಳ್ ಅವರ ಪ್ರಕಾರ ಸೋನಿಯಾ ಗಾಂಧಿಯವರಿಗೆ ಕ್ರೈಸ್ತರಿಗೆನೆ ಎಲ್ಲಾ ಅವಕಾಶಗಳನ್ನು ಕೊಡಬೇಕು, ಅಲ್ಪಸಂಖ್ಯಾತರಿಗೆನೆ ಎಲ್ಲಾ ಸ್ಥಾನಮಾನಗಳನ್ನು ಕೊಡಬೇಕು ಎನ್ನುವ ಮನಸ್ಥಿತಿ ಇದ್ದರೆ ಅದನ್ನು ಹೇಳಿಬಿಡಲಿ. ಮಂಗಳೂರು ದಕ್ಷಿಣ ಶಾಸಕರು ಕ್ರೈಸ್ತ ಧರ್ಮದವರು, ಮಂಗಳೂರು ಮತ್ತು ಮಂಗಳೂರು ಉತ್ತರ ಮುಸ್ಲಿಮರಿಗೆ, ಮೇಯರ್ ಕ್ರೈಸ್ತರಿಗೆ, ಮೂಡಾ ಅಧ್ಯಕ್ಷರು ಮುಸ್ಲಿಮರು, ವಿಧಾನಪರಿಷತ್ ಐವನ್ ಡಿಸೋಜಾ ಹೀಗೆ ಪ್ರತಿಯೊಂದು ಅವರಿಗೆನೆ ಆದರೆ ಹಿಂದುಳಿದ ಸಮುದಾಯದ ಬಿಲ್ಲವರು ಬರೀ ಪಕ್ಷ ಕಟ್ಟುವುದಕ್ಕಾ ಎಂದು ಪ್ರಶ್ನಿಸುತ್ತಾರೆ. ಆಸ್ಕರ್ ಫೆರ್ನಾಂಡಿಸ್ ಅವರನ್ನು ನಂಬುವುದಕ್ಕಿಂತ ಸೋನಿಯಾ ಗಾಂಧಿಯವರು ಜಾರ್ಜ ಫೆರ್ನಾಂಡಿಸ್ ಅಥವಾ ಎ.ಕೆ.ಆಂಟೋನಿಯಂತಹ ಮನಸ್ಸಿನ ಜನರನ್ನು ಪಕ್ಷದಲ್ಲಿ ಬೆಳೆಸಿದ್ದರೆ ಒಳ್ಳೆಯದಿತ್ತು ಎನ್ನುವುದು ಹರಿಕೃಷ್ಣ ಬಂಟ್ವಾಳ್ ಅವರ ಅಭಿಪ್ರಾಯ. ಇವತ್ತಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಸಿಗುವ ಗೌರವ ಧನ ಅತ್ಯಲ್ಪ. ಆತ ಸ್ವಾವಲಂಬಿಯಾಗಿ ಬದುಕಬೇಕಾದರೆ ಅವನಿಗೆ ತಿಂಗಳಿಗೆ ಐದು ಸಾವಿರವಾದರೂ ಗೌರವ ಧನ ಸಿಗಬೇಕು ಎನ್ನುವುದು ಬಂಟ್ವಾಳ್ ಅನಿಸಿಕೆ. ತಾನು ಗೆದ್ದ ಬಳಿಕ ಅದನ್ನೇ ಪ್ರತಿಪಾದಿಸುವುದಾಗಿ ಹರಿಕೃಷ್ಣ ಬಂಟ್ವಾಳ್ ಹೇಳುತ್ತಾರೆ. ಇನ್ನು ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧವಾಗಿ ತಾನು ಪರಿಷತ್‌ನಲ್ಲಿ ಧ್ವನಿ ಎತ್ತುವುದಾಗಿ ಅವರು ಭರವಸೆ ಕೊಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಪಂಚಾಯತ್, ಮಹಾನಗರ ಪಾಲಿಕೆಯ ಯಾವುದೇ ಸಭೆಗಳಲ್ಲಿ ಭಾಗವಹಿಸದ ಪ್ರತಾಪ್‌ಚಂದ್ರ ಶೆಟ್ಟಿಯವರನ್ನು ಆಯ್ಕೆ ಮಾಡಿದರೆ ಜಿಲ್ಲೆಗೆ ಒಂದೂ ಪೈಸೆಯೂ ಲಾಭ ಇಲ್ಲ ಎಂದು ಅರಿತಿರುವ ಮತದಾರರು ಈ ಬಾರಿ ಹರಿಕೃಷ್ಣ ಬಂಟ್ವಾಳ್ ಅವರಿಗೆ ಜೈ ಎನ್ನಲು ಮನಸ್ಸು ಮಾಡಿದ್ದಾರೆ ಎನ್ನುವುದು ಸುದ್ದಿ.
Click this button or press Ctrl+G to toggle between Kannada and English