ಗೆಲ್ಲುವುದು ಗ್ಯಾರಂಟಿ, ದಾಖಲೆಯ ಪ್ರಮಾಣ ಎಷ್ಟು ಎನ್ನುವುದು ಮಾತ್ರ ಈಗ ಉಳಿದಿರುವ ಸಂಗತಿ….

9:44 PM, Saturday, December 26th, 2015
Share
1 Star2 Stars3 Stars4 Stars5 Stars
(5 rating, 8 votes)
Loading...

Kota srinivas poojar

ಮಂಗಳೂರು : ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಎರಡು ಬಾರಿ ಆಯ್ಕೆಗೊಂಡು ಕಳೆದ ಎಂಟು ವರ್ಷಗಳಿಂದ ಪಂಚಾಯತ್‌ಗಳ ಸಬಲೀಕರಣಕ್ಕೆ ಸದನದ ಒಳಗೆ ಮತ್ತು ಹೊರಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಪ್ರತಿ ಗ್ರಾಮ ಪಂಚಾಯತ್ ಕೂಡ ಸರಕಾರದಂತೆ ಧೃಡವಾಗಿ ಶ್ರಮಿಸಬೇಕು ಎಂದು ಶ್ರಮಿಸಿದವರು ಕೋಟಾ ಶ್ರೀನಿವಾಸ ಪೂಜಾರಿ. ಕೂಲಿ ಮಾಡುವವರ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀನಿವಾಸ ಪೂಜಾರಿಯವರು ಭಾರತೀಯ ಜನತಾ ಪಕ್ಷದ ಮೂಲಕ 1993 ರಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾದರು. 1995 ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾದರು. 2006 ರಲ್ಲಿ ಬಿಜೆಪಿ ಮೂಲಕವೇ ಜಿಲ್ಲಾ ಪಂಚಾಯತ್ ಸದಸ್ಯರಾದರು. ಪಕ್ಷದ ನಿರ್ದೇಶನದಂತೆ 2008 ಮತ್ತು 2010 ರಲ್ಲಿ ರಾಜ್ಯ ಮೇಲ್ಮನೆಯ ಸದಸ್ಯನಾಗುವ ಅವಕಾಶ ಸಿಕ್ಕಿತು. ಪಕ್ಷ ಕೊಟ್ಟ ಅವಕಾಶದಂತೆ ಮುಜುರಾಯಿ ಸಚಿವರಾಗಿ ಕೆಲಸ ಮಾಡಿದರು. ಮುಜುರಾಯಿ ದೇವಸ್ಥಾನಗಳ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಮಾತ್ರ ಸಿಗುತ್ತಿದ್ದ ಗೌರವವನ್ನು ಕರಾವಳಿ ಸೇರಿದಂತೆ ಪ್ರತಿಯೊಂದು ಜಿಲ್ಲೆಯ ಸಣ್ಣ ಸಣ್ಣ ದೇವಸ್ಥಾನಗಳಿಗೂ ಸಿಗುವಂತೆ ಮಾಡಿದರು.

ಸದನದಲ್ಲಿ ಗ್ರಾಮ ಪಂಚಾಯತ್‌ಗಳ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಕಾಲದಲ್ಲಿ ಆ ಜಾಯಮಾನವನ್ನು ಹೋಗಲಾಡಿಸಿ, ಗ್ರಾಮ ಪಂಚಾಯತ್ ಹಳ್ಳಿಗಾಡಿನ ಸ್ವಾಭಿಮಾನದ ಸಂಕೇತ ಎಂದು ಧೃಡವಾಗಿ ತೋರಿಸಿದರು. ಗ್ರಾಮ ಪಂಚಾಯತ್ ಸದಸ್ಯನಿಗೆ ಯಾವುದೇ ಗೌರವಧನ ದೊರಕದೇ ಇದ್ದಾಗ ಮೊದಲಬಾರಿಗೆ ಈ ಬಗ್ಗೆ ಧ್ವನಿ ಎತ್ತಿದವರು ಕೋಟಾ ಶ್ರೀನಿವಾಸ ಪೂಜಾರಿ. 2008 ರ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ ಪರಿಣಾಮವಾಗಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲಬಾರಿಗೆ 27ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಅದರ ಪರಿಣಾಮವಾಗಿ ಪಂಚಾಯತ್ ಸದಸ್ಯರಿಗೆ ಈಗ ನಿರಂತರವಾಗಿ ಐನೂರು ರೂಪಾಯಿ ಗೌರವಧನ ಬರುತ್ತದೆ. ಅದನ್ನು 2000 ರೂಪಾಯಿಗೆ ಏರಿಸಬೇಕು ಎನ್ನುವುದು ಪೂಜಾರಿಯವರ ಕಳಕಳಿ.

ಕಳೆದ ಎಂಟು ವರ್ಷಗಳಲ್ಲಿ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ತನಗೆ ಮಾತನಾಡಲು ಸಿಕ್ಕ ಅವಕಾಶಗಳನ್ನು ಕೋಟಾ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಸದನದ ಶೂನ್ಯವೇಳೆಯಲ್ಲಿಯೂ ನಡೆದಿರುವ ಚರ್ಚೆಗಳಲ್ಲಿ ಹೆಚ್ಚಿನ ಒತ್ತು ನೀಡಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಈ ಬಾರಿ ಗೆಲ್ಲುವುದು ಕಷ್ಟವೇನಲ್ಲ. ಅವರು ದಾಖಲೆಯ ಎಷ್ಟು ಮತಗಳ ಆಧಾರದಲ್ಲಿ ಗೆಲ್ಲುತ್ತಾರೆ ಎನ್ನುವುದು ಮಾತ್ರ ಈಗ ಉಳಿದಿರುವ ಪ್ರಶ್ನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English