ಶಂಕಾಸ್ಪದ ರೀತಿಯಲ್ಲಿ ಕಾರು ಪತ್ತೆ, ತನಿಖೆಗೆ ಚಾಲನೆ

7:10 PM, Tuesday, January 5th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
car found

ಕುಂಬಳೆ: ಕುಂಬಳೆಯಲ್ಲಿ ಸೋಮವಾರ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅವರು ಸೇರಿದಂತೆ ಕೆಪಿಸಿಸಿ ಯ ಸಚಿವರುಗಳು, ಮುಖಂಡರು ಭಾಗವಹಿಸಿದ್ದ ಜನ ರಕ್ಷಾ ಯಾತ್ರೆಯ ಉದ್ಘಾಟನಾ ವೇದಿಕೆ ಬಳಿಯಲ್ಲಿಯೇ ಅನುಮಾಸ್ಪದವಾದ ರೀತಿಯಲ್ಲಿ ಕಾರೊಂದು ಪತ್ತೆಯಾಗಿದ್ದು, ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಇದೀಗ ಈ ಕಾರನ್ನು ಪೋಲಿಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ. ಕಾರಿನ ನಂಬರ್ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿಯೇ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪೋಲಿಸರು ಕೇಸು ದಾಖಲಿಸಿ, ಗುಪ್ತಚರ ಇಲಾಖೆಯ ಸಹಾಯದೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ವಿ.ಎಂ.ಸುಧೀಂದ್ರನವರ ನೇತೃತ್ವದಲ್ಲಿ ಕುಂಬಳೆಯಿಂದ ಆರಂಭಗೊಂಡ ಜನರಕ್ಷಾ ಯಾತ್ರೆಯ ಉದ್ಘಾಟನೆಗಾಗಿ ಸೋಮವಾರ ಮುಖ್ಯಮಂತ್ರಿ ಸಹಿತ ವಿವಿಧ ಹಣ್ಯರು ಪೇಟೆಗೆ ಆಗಮಿಸಿದ್ದರು. ಈ ಸಂದರ್ಭ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮಧ್ಯೆ ವೇದಿಕೆಯಿಂದ ಕೇವಲ ೧೫೦ ಮೀಟರ್ ದೂರದಲ್ಲಿ ನೀಟಿ ಬಣ್ಣದ ಐಶಾರಾಮಿ ಕಾರೊಂರು ಗಮನಕ್ಕೆ ಬಂದಿದೆ. ಅಲ್ಲೆ ತನಿಖೆಯಲ್ಲಿ ಸೋಮವಾರ ಹಗಲು ಪೇಟೆ ಪರಿಸರದಲ್ಲಿ ಸುತ್ತಾಡುತ್ತಿರುವುದು ಗಮನಕ್ಕೆ ಬಂದಿದೆ.

ಕರ್ನಾಟಕದ ನೋಂದಣೆ ಹೊಂದಿದುಈ ಕಾರು ನಿಗೂಢ ರೀತಿಯಲ್ಲಿ ಪತ್ತೆಯಾಗಿರುವುದು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English