ಶಿಕ್ಷಕರು ಎನ್‌ಪಿಆರ್ ಸರ್ವೆಯಲ್ಲಿ ಬಿಝಿ, ಶಾಲೆಯಲ್ಲಿ ಹಳೆ ವಿದ್ಯಾರ್ಥಿ, ರಕ್ಷಕರಿಂದಲೇ ಪಾಠ, ಪ್ರವಚನ

8:51 PM, Wednesday, January 6th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
Shikshana

ಬದಿಯಡ್ಕ: ಗ್ರಾಮೀಣ ಪ್ರದೇಶಗಳ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚಿನ ಶಿಕ್ಷಕರು ಇದೀಗ ಎನ್‌ಪಿಆರ್ ಸರ್ವೇಯಲ್ಲಿ ಬಿಝಿಯಾಗಿದ್ದಾರೆ. ಉರಿ ಬಿಸಿಲು, ಕಾಲ್ನಿಡಿಗೆಯಿಂದ ರೋಸಿ ಹೋಗುತ್ತಿರುವ ಶಿಕ್ಷಕರ ಮಧ್ಯೆ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಜಾ ಉಡಾಯಿಸುತ್ತಿರುವ ಸನ್ನಿವೇಶಗಳು ಸರ್ವೇ ಸಾಮಾನ್ಯ. ಒಂದು ಬ್ಲಾಕಿನ ಸರ್ವೇಗೆ ಏಳು ದಿನಗಳು ಹಿಡಿಯುತ್ತದೆ. ಕೆಲವೊಮ್ಮೆ ಒಬ್ಬ ಶಿಕ್ಷನಿಗೆ ಎರಡು ಬ್ಲಾಕಿನ ಸರ್ವೇ ಜವಾಬ್ದಾರಿ ಇರುತ್ತದೆ. ಅಂತಹ ಸಂದರ್ಭ ಸುಮಾರು16 ದಿನಗಳ ಕಾಲ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಸಮಯವನ್ನು ಕಳೆಯುತ್ತಾರೆ. ಆದರೆ ಇದ್ಯಾವುದಕ್ಕೂ ಆಸ್ಪದ ಕೊಡದ ಬೇಳ ಸಂತ ಬಾರ್ತಲೋಮಿಯೋ ಶಾಲೆಯಲ್ಲಿ ಸ್ವತಃ ವಿದ್ಯಾವಂತ ರಕ್ಷಕರು, ಡಿಗ್ರಿ ಕಲಿಯುತ್ತಿರುವ ಹಳೆ ವಿದ್ಯಾರ್ಥಿಗಳು ಮಕ್ಕಳಿಗೆ ಪಾಠ, ಪ್ರವಚನಗಳನ್ನು ಹೇಳಿಕೊಡುತ್ತಿದ್ದು ಮಕ್ಕಳಲ್ಲಿ ಹೊಸ ಉತ್ಸಾಹ ತುಂಬುತ್ತಿದ್ದಾರೆ.

ಕಳೆದ ಒಂದು ವಾರದಿಂದ ಶಾಲೆಯಲ್ಲಿ ಲವಲವಿಕೆ ಕಂಡು ಬಂದಿದೆ. ಯಾಕೆಂದರೆ ಪುಟಾಣಿ ಮಕ್ಕಳಿಗೆ ಹೊಸ ಟೀಚರ್ ಸಿಕ್ಕಿದ್ದಾರೆ. ಮಕ್ಕಳನ್ನು ಬೋರ್ ಹೊಡಿಸದೆ ಪಾಠಗಳನ್ನು, ಆಟಗಳನ್ನು ಹೇಳಿಕೊಡುತ್ತದ್ದಾರೆ. ಮಿಸ್ ಸರ್ವೇಗೆ ಹೋಗಿದಾರೆ. ನಮಗೆ ಕ್ಲಾಸಿಲ್ಲ. ಬರೀ ಮೋಜು ಎಂಬ ಮಾತು ಎಲ್ಲೆಯೂ ಕೇಳಿ ಬರುತ್ತಿಲ್ಲ.
ಅನೇಕ ಶಾಲೆಗಳಲ್ಲಿ ಸರ್ವೇ ನೆಪದಲ್ಲಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಸಮಯ ಪೋಲಾಗುತ್ತಿದೆ. ಮಕ್ಕಳು ಅನೇಕ ದಿನಗಳನ್ನು ವ್ಯರ್ಥವಾಗಿ ಕಳೆಯಬೇಕಾಗುತ್ತದೆ. ಅಲ್ಲದೆ ಪಾಠಗಳು ಸರಿಯಾದ ಸಂದ‘ಕ್ಕೆ ಮುಗಿಯದೆ, ಪರೀಕ್ಷೆಯ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಶೆ‘ಕ್ಷಣಿಕವಾಗಿ ಕುಗ್ಗುವಂತೆ ಮಾಡುವ ಸಾಧ್ಯತೆಗಳಿರುತ್ತದೆ. ಅಲ್ಲದೆ ಶಿಕ್ಷಕರಿಲ್ಲದೆ ಶಾಲೆ ಗಂಭೀರತೆಯನ್ನು ಕಳಕೊಂಡು ಬಿಡುತ್ತದೆ. ಇದೆಲ್ಲವನ್ನೂ ಗಮನಿಸಿ ಶಾಲೆಯ ಆಡಳಿತ ಮತ್ತು ಶಿಕ್ಷಕ ಮಂಡಳಿ ವಿದ್ಯಾವಂತ ರಕ್ಷಕರು ಮತ್ತು ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಕ್ಕಳಿಗೆ ಕೆಲವು ದಿನಗಳ ಕಾಲ ಪಾಠವನ್ನು ಬೋಸುವಂತೆ ಆಗ್ರಹಿಸಿದೆ. ತಕ್ಷಣ ಅತಿ ಉತ್ಸಾಹದಿಂದ ಆಗಮಿಸಿದ ಕೆಲವರು ಇದೀಗ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಅಲ್ಲದೆ ಕೇರಳದಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೆ ಒಂದು ದಿನಗಳ ಕಾಲ ರಜಾ ಸಮಯವಾದುದರಿಂದ ಅವರು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತದ್ದಾರೆ. ಯಾವ ಭತ್ಯೆಯನ್ನೂ ಬಯಸದೆ ಸ್ವಯಂ ಇಚ್ಛೆಯಿಂದ ಶಾಲೆಯ ನೀತಿಗೆ ಸ್ಪಂದಿಸಿದ್ದನ್ನು ಕಂಡು ಶಿಕ್ಷಕರು ನಿಬ್ಬೆರಗಾಗಿದ್ದಾರೆ. ಹಳೆ ವಿದ್ಯಾರ್ಥಿಗಳಾದ ಅಶಾಲತಾ, ಅಶ್ವಿನಿ, ವನಿತ, ಶಿವರಂಜಿನಿ ಮೊದಲಾದವರು ಕಳೆದ ಒಂದು ತಿಂಗಳಿನಿಂದ ತರಗತಿಯನ್ನು ನಡೆಸುತ್ತಿದ್ದಾರೆ. ಇದು ಅವರಿಗೂ ಹೊಸ ಅನುಭವವನ್ನು ನೀಡುತ್ತಿದ್ದ ಮಕ್ಕಲೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಅಲ್ಲದೆ ಬಿಸಿಲು, ನಡಿಗೆಯನ್ನು ಗಮನಿಸದೆ ಪ್ರತಿ ಮನೆಗಳಿಗೆ ತೆರಳಿ ಗಣತಿ ನಡೆಸುವಾಗ ಅನೇಕ ಮನೆಗಳಲ್ಲಿ ಸದಸ್ಯರೇ ಇರುವುದಿಲ್ಲ. ಅಂತಹ ಸಂದಭ ಆ ಮನೆಗಳಿಗೆ ಮತ್ತೊಮ್ಮೆ ತೆರಳಬೇಕಾಗಿ ಬರುತ್ತದೆ. ಪ್ರತಿ ಸಲ ಪ್ರಾಥಮಿಕ ಶಿಕ್ಷಣದ ಶಿಕ್ಷಕರನ್ನೇ ಇಂತಹ ಗಣತಿಗಳಿಗೆ ಬಳಸುವುದರಿಂದ ಹೆಚ್ಚಿನ ಕೆಲಸ, ಜವಾಬ್ದಾರಿಗಳನ್ನು ಹೊರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 100ರಿಂದ 150 ಮನೆಗಳನ್ನು ಒಬ್ಬ ಶಿಕ್ಷಕ ಸರ್ವೇ ಮಾಡಬೇಕಾದುದರಿಂದ ಅನೇಕ ಸಂದಭ ಒಂದು ದಿನದಲ್ಲಿ5 ರಿಂದ 6 ಮನೆಗಳನ್ನು ಸಂಪರ್ಕಿಸುವುದೇ ಕಷ್ಟವಾಗುತ್ತದೆ. ಅದರ ನಡುವೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ನಿರ್ಮಾಣಮಾಡುವ ಜವಾಬ್ದಾರಿಯೂ ಅವರಿಗಿರುತ್ತದೆ. ಆದರೆ ಬೇಳ ಶಾಲೆಯ ಶಿಕ್ಷಕರು ಇದೀಗ ನಿಶ್ಚಿಂತೆಯಿಂದ ಸರ್ವೇ ಕಾರ್ಯವನ್ನು ಮುಗಿಸಲು ಅವಕಾಶವಿದೆ. ಶಾಲೆಯ ಪಾಠಗಳನ್ನು ರಕ್ಷಕರು, ಹಳೆ ವಿದ್ಯಾರ್ಥಿಗಳು ಸಂತೋಷದಿಂದ ಪಾಠಗಳನ್ನು ದಿನವಿಡೀ ನಿರ್ವಹಿಸುತ್ತಿರುವುದು ಶಿಕ್ಷಕ ಕಾರ್ಯಬಾರವನ್ನು ಕಡಿಮೆ ಮಾಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English