ಬಿಜೆಪಿ ಮಂಜೇಶ್ವರ ಮಂಡಲ ಬೂತ್ ಮಟ್ಟ ಕಾರ್ಯಕರ್ತರ ತರಬೇತಿ ಶಿಬಿರ

9:03 PM, Wednesday, January 6th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
BJP Mandala

ಉಪ್ಪಳ: ಕೇರಳದಲ್ಲಿ ಕಳೆದ 10 ವರ್ಷಗಳಲ್ಲಿ ಜನರ ಆಶೋತ್ತರಗಳನ್ನು ರಕ್ಷಣೆ ಮಾಡದವರು ಇದೀಗ ಚುನಾವಣೆಯ ಸನಿಹದಲ್ಲಿ ಮತ್ತೆ ೫ ವರ್ಷ ಕಾಲ ಅಧಿಕಾರಕ್ಕಾಗಿ ಕೇರಳ ರಕ್ಷಾ ಯಾತ್ರೆಯನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯೆಂದು ಕೇರಳ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ , ರಾಜ್ಯ ಚುನಾವಣಾ ಉಸ್ತುವಾರಿಯ ವಿ.ಮುರಳೀಧರನ್ ಅಭಿಪ್ರಾಯಪಟ್ಟರು.

ಮಂಗಲ್ಪಾಡಿ ಲಯನ್ಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಬಿಜೆಪಿ ಮಂಜೆಶ್ವರ ಮಂಡಲ ಬೂತ್ ಕಾರ್ಯಕರ್ತರ ನಾಯಕತ್ವ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.

ಕೇರಳದ ಎಡ ಬಲ ರಂಗಗಳ ಆಡಳಿತ ವೈಫಲ್ಯ,ಅತಿಯಾದ ತುಷ್ಟೀಕರಣ ನೀತಿ,ಅಭಿವೃದ್ದಿ ಶೂನ್ಯ ಆಡಳಿತ ಇದೆಲ್ಲವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಮುಂದಿಡಬೇಕು. ಮತ್ತು ಕೇಂದ್ರ ಸರಕಾರದ ಸಾಧನೆ, ಕೇರಳ ಸರಕಾರಕ್ಕೆ ಕೇಂದ್ರದ ಅನುದಾನ ಇದೆಲ್ಲವನ್ನು ಜನರ ಮುಂದಿಡಬೇಕೆಂದು ಆ ಮೂಲಕ ಕೇರಳದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಎಲ್ಲಾ ಕಾರ್ಯಕರ್ತರು ಮುಂದಾಗಬೇಕೆಂದು ಅವರು ಕರೆ ನೀಡಿದರು.

ಕೇರಳದ ಎಡ ಬಲ ರಂಗಗಳ ಅಡಳಿತ ವೈಫಲ್ಯವನ್ನು ಮತ್ತು ಎಲ್ಲರಿಗೂ ಸಮಾನ ನೀತಿ ಅನ್ನುವ ಧೋರಣೆಯನ್ನು ಮುಂದಿಟ್ಟುಕೊಂಡು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖನ್ ನೇತೃತ್ವದಲ್ಲಿ ಜನವರಿ ೨೦ ರಂದು ಉಪ್ಪಳದಲ್ಲಿ ಉದ್ಘಾಟನೆಗೊಳ್ಳಲಿರುವ ಕೇರಳ ವಿಮೋಚನಾ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.

ಸಮಾವೇಶದಲ್ಲಿ ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಎ.ಜಿ ಉಣ್ಣಿ,ರಾಜ್ಯ ಉಪಾಧ್ಯಕ್ಷೆ ಪ್ರಮಿಳಾ ಸಿ ನಾಯ್ಕ್,ರಾಜ್ಯ ಕೋಶಾಧಿಕಾರಿ ವಿಜಯ್ ರೈ,ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ,ಯುವಮೋರ್ಚಾ ಜಿಲ್ಲಾಧ್ಯಕ್ಷ ಸುನೀಲ್ ಜಿಲ್ಲಾ ಕಾರ್ಯದರ್ಶಿ ವಲ್ಸರಾಜ್ ಪ್ರತಾಪನಗರ ,ಜಿಲ್ಲಾ ಉಪಾಧ್ಯಕ್ಷೆ ಸರೋಜ ಬಲ್ಲಾಳ್,ಜಿಲ್ಲಾ ಕಾರ್ಯದರ್ಶಿ ಸ್ನೇಹಲತಾ ದಿವಾಕರ್,ಬಿಜೆಪಿ ಮಂಜೆಶ್ವರ ಮಂಡಲಾಧ್ಯಕ್ಷ ಹರಿಶ್ಚಂದ್ರ ಮಂಜೆಶ್ವರ,ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ ಕಯ್ಯಾರು,ಮುರಳೀಧರ ಯಾದವ್ ನಾಯ್ಕಾಪು, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಜೆಶ್ವರ ಮಂಡಲದ ಎಲ್ಲಾ ಚುನಾಯಿತ ಜನಪ್ರತಿನಿಗಳು, ಬೂತ್ ಮಟ್ಟದ ಆಯ್ದ ಕಾರ್ಯಕರ್ತರು ಭಾಗವಹಿಸಿದ್ದರು. ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ, ಎ.ಕೆ ಕಯ್ಯಾರು ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English