ಮಂಗಳೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು, ದ.ಕ, ಉಡುಪಿ, ಉ.ಕ., ಕೊಡಗು ಜಿಲ್ಲೆ ಅಡಿಕೆ ಬೆಳೆಗಾರರ ಎಲ್ಲಾ ಕೃಷಿ ಸಾಲ ಮನ್ನಾ-ಪನರ್ವಸತಿ ಪ್ಯಾಕೇಜ್ ನೀಡಲು ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಡಿ.ಸಿ. ಕಚೇರಿಗೆ ಮುತ್ತಿಗೆ ಹಾಕಿತು. ನಗರದ ಜ್ಯೋತಿ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಬಂದ ರೈತರು ದ.ಕ ಜಿಲ್ಲಾಧಿಕಾರಿ ಕಛೇರಿ ಬಳಿ ಬೇಡಿಕೆಗಾಗಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರಾಜ್ಯದಲ್ಲಿ ರೈತರು ಮತು ಒಕ್ಕಲುತನ ಬದುಕುಳಿಯುವಂತಹ ನೀತಿಗಳನ್ನು ಸರಕಾರಗಳು ಜಾರಿಗೊಳಿಸುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ವಿಶ್ವ ವಾಣಿಜ್ಯ ಸಂಸ್ಥೆ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಕೈಗೊಂಬೆಯಾಗಿವೆ. ಈ ಕಾರಣಕ್ಕೆ ಇಲ್ಲಿಯ ಅಡಿಕೆ ಮುಂತಾದ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಕೇವಲ ಅರ್ಧದಷ್ಟನ್ನು ಮಾತ್ರ ‘ಬೆಂಬಲ ಬೆಲೆ’ ಎಂದು ಸರಕಾರಗಳು ಘೋಷಿಸುತ್ತಿವೆ. ಈ ಬೆಂಬಲ ಬೆಲೆಯಿಂದ ಕೃಷಿಯನ್ನು ರಕ್ಷಿಸಿಕೊಂಡು ರೈತರು ಸಾಲದ ಸುಳಿಯಿಂದ ಬದುಕಲು ಸಾಧ್ಯವೇ ಇಲ್ಲ. ಈ ಕುತಂತ್ರದ ನೀತಿಗಳೇ ರೈತರನ್ನು ಕೊಲ್ಲುತ್ತಿವೆ. ಸರಕಾರ ಇದನ್ನೇ ರೈತರ ಆತ್ಮಹತ್ಯೆ ಎಂದು ಕರೆಯುತ್ತದೆ. ಆದರೆ ನಿಜವಾದ ಕೊಲೆಗಾರನ ಸ್ಥಾನದಲ್ಲಿ ಸರಕಾರವೇ ನಿಂತಿದೆ. ಯಾವುದೇ ರಾಜಕೀಯ ಪಕ್ಷಗಳಿಗೆ ಕೃಷಿ ಮತ್ತು ಜನಪರ ಕಾಲಜಿ ಇಲ್ಲ ಎಂದು ಹೇಳಿದರು.
ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಆಚಾರಿಯವರು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ರೈತರ ಫಲವತ್ತಾದ ಭೂಮಿಯನ್ನು ನಾಶಪಡಿಸಿ, ಎಮ್.ಆರ್.ಪಿ.ಎಲ್. ಎಂಬ ರಾಕ್ಷಸ ಕಂಪೆನಿಗಳಿಗೆ ನೀಡಿದ ಪರಿಣಾಮ ಈ ಭಾಗದ ರೈತರು ಮತ್ತು ಇಡೀ ಜೀವ ಸಂಕುಲವೇ ವಿನಾಶದಂಚಿಗೆ ಸಾಗುತ್ತಿದೆ, ರೈತರೇ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಎಲ್ಲಾ ಮಾರ್ಗಗಳಲ್ಲಿ ಹೆಜ್ಜೆ ಹಾಕಬೇಕಾಗಿದೆ. ಸರಕಾರಗಳಿಗೆ ಒತ್ತಡ ಹಾಕಿ ತಮ್ಮ ಹಕ್ಕುಗಳನ್ನು ಈಡೇರಿಸಿಕೊಳ್ಳಬೇಕಾಗಿದೆ ಎಂದರು.
ರಾಜ್ಯ ರೈತ ಸಂಘ ಹಸಿರು ಸೇನೆ ಉಪಾಧ್ಯಕ್ಷರಾದ ಧನಕೀರ್ತಿ ಬಲಿಪ ಮಾತನಾಡಿ ಆರ್ಥಿಕವಾಗಿ ಸಂಕಷ್ಠದಲ್ಲಿರುವ ರೈತರ ಸಾಲ ವಸೂಲಾತಿಗೆ ಬ್ಯಾಂಕ್ ಅಧಿಕಾರಿಗಳು ಜಪ್ತಿ, ಹರಾಜು ಹಾಗೂ ಪತ್ರಿಕೆಗಳಲ್ಲಿ ಫೋಟೋ ಪ್ರಕಟಿಸಿ ಮಾನಹಾನಿ ಮಾಡಿ ರೈತರ ಆತ್ಮಹತ್ಯೆಗೆ ಪ್ರಚೋದಿಸುವ ದೌರ್ಜನ್ಯ ಪ್ರಕ್ರಿಯೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೋಹಿತಾಕ್ಷ ರೈ ಕೆ. ಜಿಲ್ಲಾಧ್ಯಕ್ಷರು, ದ.ಕ ಜಿಲ್ಲಾ ರೈತ ಸಂಘ ಹಸಿರು ಸೇನೆ, ವಿಜಯಕುಮಾರ್ ಹೆಗ್ಡೆ, ಜಿಲ್ಲಾಧ್ಯಕ್ಷರು, ಉಡುಪಿ ಜಿಲ್ಲಾ ರೈತಸಂಘ ಹಸಿರು ಸೇನೆ, ರವಲಕಿರಣ್ ಪಿ. ಕಾರ್ಯಧ್ಯಕ್ಷರು, ದ.ಕ ರೈತ ಸಂಘ ಹಸಿರು ಸೇನೆ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
December 15th, 2011 at 19:14:13
ja7xmG lvkmtllqnjnw, [url=http://bueguxqcadwd.com/]bueguxqcadwd[/url], [link=http://uvnkknomqfvs.com/]uvnkknomqfvs[/link], http://ftzicbwtaxjj.com/