ಆಡಳಿತಾ ಭಾಷೆ ಮಸೂದೆ: ಸಂಘಟಿತ ಹೊರಾಟಕ್ಕೆ ತೆರೆದಿಟ್ಟ ಗಡಿನಾಡಿನಲ್ಲಿ ಕನ್ನಡ ಸಂವಾದ

8:18 PM, Saturday, January 9th, 2016
Share
1 Star2 Stars3 Stars4 Stars5 Stars
(No Ratings Yet)
Loading...
kannada

ಕಾಸರಗೋಡು: ಭಾಷಾ ಅಲ್ಪಸಂಖ್ಯಾಕರ ಹಕ್ಕು ಸಂರಕ್ಷಣೆಗಾಗಿ ಸಂಘಟಿತ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಗಡಿನಾಡಿನಲ್ಲಿ ಕನ್ನಡ ಸಂವಾದ ವೇದಿಕೆಯಾಯಿತು.

ಶನಿವಾರ ನಗರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಕೇರಳದಲ್ಲಿ ಆಡಳಿತ ಭಾಷೆ ಮತ್ತು ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕುಗಳ ಸಂರಕ್ಷಣೆ ಆಡಳಿತ ಭಾಷಾ ಮಸೂದೆಯಿಂದ ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣದ ಮೇಲೆ ಆಗಬಹುದಾದ ಪರಿಣಾಮಗಳ ಚಿಂತನೆ ಮತ್ತು ಹೋರಾಟಕ್ಕಿರುವ ಆಯಾಮಗಳ ಕುರಿತು ಸಂವಾದ ಏರ್ಪಡಿಸಿತ್ತು.

ಪ್ರಸ್ತುತ ಜಿಲ್ಲೆಯಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾಕರ ಹಕ್ಕು ಸಂರಕ್ಷಣೆಗೆ ಚ್ಯುತಿ ಬಂದಾಗ ಅದನ್ನು ಎದುರಿಸಿ ಹೋರಾಟ ನಡೆಸುವಂತಹ ನಾಯಕತ್ವದ ಕೊರತೆ ಎದ್ದು ಕಂಡಿದ್ದು, 1969ರಲ್ಲಿ ಭಾಷಾ ಮಸೂದೆಯ ಮೂಲಕ ಅಲ್ಪಸಂಖ್ಯಾಕರ ಸವಲತ್ತು ಲಭಿಸುವಂತಾಗಲು ಅಂದಿನ ಮಂಜೇಶ್ವರ ಮತ್ತು ಕಾಸರಗೋಡು ಶಾಸಕರಾದಂತಹ ಮಹಾಬಲ ಭಂಡಾರಿ, ಕುಣಿಕುಳ್ಳಾಯರು ತಮಗೆ ಸಚಿವ ಸ್ಥಾನ ಬೇಡ, ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಸವಲತ್ತು ನೀಡಿ ಎಂಬ ಒಂದೇ ಬೇಡಿಕೆಯಿಂದ ನಾವು ಇಂದಿನ ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಅದಕ್ಕಾಗಿ ಹಿಂದೆ ಮಹಾಬಲ ಭಂಡಾರಿ, ಕುಣಿಕುಳ್ಳಾಯರಂತಹವರು ಕೆಚ್ಚದೆಯ ಹೋರಾಟ ನಡೆಸಿ ಭಾಷಾ ಅಲ್ಪಸಂಖ್ಯಾಕರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಇದೀಗ ಪ್ರಮುಖವಾಗಿ ಅಲ್ಪಸಂಖ್ಯಾತರಿಗೆ ಹೋರಾಟ ನಡೆಸಲು ರಾಜಕೀಯವಾಗಿ ಕನ್ನಡ ಶಾಸಕರಿಲ್ಲ, ಹೋರಾಟದ ನೇತೃತ್ವ ವಹಿಸುವಲ್ಲಿ ಕನ್ನಡ ಸಂಘಟನೆಗಳ ಒಗ್ಗಟ್ಟಿನ ಸಮಸ್ಯೆ, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಕೊರತೆಯಿಂದಾಗಿ ಮಲೆಯಾಳಿಗರ ದಬ್ಬಾಳಿಕೆ ಹೆಚ್ಚಾದಂತೆ ಕನ್ನಡಿಗರ ಶಕ್ತಿ ಕ್ಷೀಣಿಸಿ, ಅಲ್ಪಸಂಖ್ಯಾಕರ ಮೇಲೆ ಒಂದೊಂದೇ ಒಂದೊಂದೇ ಪ್ರಯೋಗ ಮಾಡುತ್ತಾ ನಿರ್ನಾಮಾ ಮಾಡುವ ಯೋಜನೆ ಹಾಕಿಕೊಂಡಿರುವುದಂತು ಸತ್ಯ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅದಕ್ಕಾಗಿ ಈ ಪರಿಸ್ಥಿತಿಯಿಂದ ಹೊರ ಬರಲು ಮುಂದಿನ ದಿನಗಳಲ್ಲಿ ಸರಕಾರಕ್ಕೆ ಮನದಟ್ಟಾಗುವ ರೀತಿಯಲ್ಲಿ ಉಗ್ರ ಹೋರಾಟಕ್ಕೆ ರೂಪು ನೀಡುವ ಕುರಿತು ಸಂವಾದ ಚಿಂತಿಸಲು ಎಡೆಮಾಡಿಕೊಟ್ಟಿತ್ತು.

ಸಂವಾದದಲ್ಲಿ ವಿವಿಧ ಆಯಾಮಗಳ ಮೂಲಕ ಪರಿಣತರು ವಿಷಯಗಳನ್ನು ಮಂಡಿಸಿದರು. ಆಡಳಿತ ಭಾಷೆ ಮಸೂದೆ ಮತ್ತು ಬಾಧಕಗಳ ಬಗ್ಗೆ ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಪುರುಷೋತ್ತಮ ಮಾಸ್ತರ್ ಮಾತನಾಡಿದರು. ಮಸೂದೆಯಿಂದ ಕನ್ನಡ ಅಧ್ಯಾಪಕ, ವಿದ್ಯಾರ್ಥಿಗಳ ಪರಿಣಾಮದ ಕುರಿತು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿ ಮೇಲೆ ಪರಿಣಾಮ ಹಾಗೂ ಹೊಣೆಗಾರಿಕೆ ಬಗ್ಗೆ ಸರಕಾರಿ ಕಾಲೇಜಿನ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ, ಮಸೂದೆ ವಿರುದ್ಧ ಆಡಳಿತಾತ್ಮಕ, ಕಾನೂನತ್ಮಕ ಹೋರಾಟಕದ ಅವಕಾಶದ ಕುರಿತು ಕರ್ನಾಟಕ ಸಮಿತಿ ಅಧ್ಯಕ್ಷ ಅಡ್ವ. ಮುರಳೀಧರ ಬಳ್ಳಕ್ಕುರಾಯ ಹಾಗೂ ಸಂಘಟನಾತ್ಮಕ ಹೋರಾಟದ ಕುರಿತು ಕಾಸರಗೋಡು ಬಿಲ್ಲವ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಭಾಸ್ಕರ ಮಾತನಾಡಿದರು.

ನುಡಿಗಳು
ಆಡಳಿತ ಭಾಷೆ ಮಸೂದೆ: ಕನ್ನಡಿಗರಿಗೆ ಸಂದಿಗ್ಧ ಪರಿಸ್ಥಿತಿ-ಪುರುಷೋತ್ತಮ ಮಾಸ್ತರ್
1969 ರ ಆಡಳಿತ ಭಾಷಾ ಮಸೂದೆಯನ್ನು ಈ ವರ್ಷ ಬದಲಾಯಿಸಲಾಗಿದೆ. 1969ರಲ್ಲಿ ಆಡಳಿತ ಭಾಷೆಯನ್ನು ಮಲಯಾಳವನ್ನಾಗಿಸಿ ರಾಜ್ಯದಲ್ಲಿರುವ ತಮಿಳರಿಗೆ ಹಾಗೂ ಕನ್ನಡಿಗರಿಗೆ ಸೆಕ್ರಟರಿಯೇಟ್‌ನಲ್ಲಿ , ಆಡಳಿತಾಕಾರಿಗಳೊಡನೆ ವ್ಯವಹರಿಸಲು ತಮಿಳು ಅಥವಾ ಮಲಯಾಳ ಉಪಯೋಗಿಸಬಹುದು. ಅನ್ಯರಾಜ್ಯದಿಂದ ಬಂದವರಾಗಿದ್ದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸಬಹುದು ಎಂದು ಹೇಳಲಾಗಿತ್ತು. ಪ್ರಸ್ತುತ ಆಡಳಿತ ಭಾಷಾ ಮಸೂದೆ ಕನ್ನಡಿಗರಿಗೆ ಯಾವುದೇ ದುಷ್ಪರಿಣಾಮ ಬೀರಲಾರದು ಎಂದು ಶಾಸಕರೊಬ್ಬರು ತಿಳಿಸಿದ್ದರು. ಆದರೆ ಈ ಕುರಿತು ಮುಖ್ಯಮಂತ್ರಿಯವರಿಂದ ಯಾವುದೇ ಅಕೃತ ಪ್ರಕಟಣೆ ನಡೆದಿಲ್ಲ ಎಂದು ಆಡಳಿತ ಭಾಷಾ ಮಸೂದೆಯ ಸಾದಕ-ಬಾಧಕಗಳನ್ನು ವಿವರಿಸುತ್ತಾ ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ತರ್ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English