ಕಾಸರಗೊಡು ಎಂಡೋ ಪೀಡಿತರಿಗೆ ನೆರವು ನೀಡಿದ ತಾರೆ ಕಾವ್ಯಾ ಮಾಧವನ್

8:33 PM, Saturday, January 9th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
Kavya Madhavan

ಕಾಸರಗೊಡು : ಮಾರಕ ಎಂಡೋ ದುರಂತದ ಕಹಿ ನೆರಳು ಇನ್ನೂ ಹಿಂಬಾಲಿಸುತ್ತಿರುವುದು ಕಳವಳಕಾರಿ. ರೋಗ ಬಾಧಿತರ ನೋವು ಇನ್ನೂ ಮುಂದುವರಿದಿದ್ದು, ಶಾಶ್ವತ ಪರಿಹಾರ ಕ್ರಮಗಳಿಲ್ಲದಿರುವುದು ಖೇದಕರವೆಂದು ಮಲೆಯಾಳಂ ಚಲನಚಿತ್ರದ ಖ್ಯಾತ ತಾರೆ ಕಾವ್ಯಾ ಮಾಧವನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಡೋಸಲ್ಫಾನ್ ಸಮಸ್ಯೆಯಿಂದ ನಲುಗುತ್ತಿರುವವರಿಗೆ ತಮ್ಮ ಕುಟುಂಬ ಸಹಕಾರದೊಂದಿಗೆ ನೀಡಲಾದ ಆರ್ಥಿಕ ನೆರವನ್ನು ಜಿಲ್ಲಾ ಎಂಡೋ ಸೆಲ್ ಘಟಕಕ್ಕೆ ಶನಿವಾರ ಸಂಜೆ ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ತಾನು ನೀಡುತ್ತಿರುವ ನೆರವಿನಿಂದ ಎಂಡೋ ಸಂಕಷ್ಟದಲ್ಲಿರುವವರಿಗೆ ಹೇಳಿಕೊಳ್ಳುವ ಮಾರ್ಪಾಟುಗಳಾಗದು. ಆದರೆ ತಾನು ಕಾಸರಗೋಡು ಜಿಲ್ಲೆಯವಳಾಗಿ ನೀಡಿದ ನೆರವು ಇನ್ನೊಬ್ಬರಿಗೂ ಪ್ರೇರಣೆಯಾಗಲೆಂದು ಅವರು ಹಾರೈಸಿದರು.

ನೀಲೇಶ್ವರ ನಗರ ಸಭಾ ಅಧ್ಯಕ್ಷ ಪ್ರೊ.ಕೆ.ಪಿ ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಎಂಡೋಸಲ್ಫಾನ್ ಸೆಲ್ ನ ಅಧಿಕಾರಿಯ,ಜಿಲ್ಲಾಧಿಕಾರಿ ಮೊಹಮ್ಮದ್ ಸಗೀರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು,ಕಾವ್ಯಾ ಮಾಧವನ್ ನೀಡಿದ ನೆರವಿನ ಚೆಕ್ ಸ್ವೀಕರಿಸಿದರು.ಎಡಿಎಂ ಎಚ್ ದಿನೇಶನ್, ಜಿಲ್ಲಾ ಹಣಕಾಸು ಅಧಿಕಾರಿ ಕುಂಞಿಂಬು ನಾಯರ್,ಪ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್,ಕಾವ್ಯಾ ಮಾಧವನ್ ರ ಹೆತ್ರವರಾದ ಮಾಧವನ್ ಹಾಗೂ ಶ್ಯಾಮಲಾ ಮಾಧವನ್ ಉಪಸ್ಥಿತರಿದ್ದು ಶುಭಹಾರೈಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಯಶ್ರೀ ಸ್ವಾಗತಿಸಿ,ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English