ವಿವೇಕಾನಂದರ ಮೂಲಕ ಜಗತ್ತಿಗೆ ಭಾರತದ ನೈಜ ಶ್ರೀಮಂತಿಕೆಯ ಧರ್ಶನವಾಗಿತ್ತು : ಯುಡಿಯೂರಪ್ಪ

11:49 PM, Tuesday, January 12th, 2016
Share
1 Star2 Stars3 Stars4 Stars5 Stars
(5 rating, 7 votes)
Loading...
Vivekananda education trust

ಕಾಸರಗೋಡು: ರಾಷ್ಟ್ರದೊಳಗೆ ಗೊಂದಲ,ಅಂತರಾಷ್ಟ್ರೀಯವಾಗಿ ಭಾರತದ ಬಗ್ಗೆ ಅನಾದಾರಗಳು ನೆಲೆಯಾಗಿದ್ದ ಕಾಲದಲ್ಲೆಲ್ಲ ಇಲ್ಲಿಯ ಮಹತ್ವವನ್ನು ಜಗತ್ತಿಗೆ ಸಾರಲು ಮಹಾನ್ ಸಂತರುಗಳು ಅವತರಿಸಿ ಬಂದ ಪುಣ್ಯ ಭೂಮಿ ನಮ್ಮದು. ಹಿಂದೆ ಇಂತಹ ಸಂದರ್ಭದಲ್ಲೊಂದು ಸ್ವಾಮಿ ವಿವೇಕಾನಂದರ ಆದರ್ಶ, ಜಾಗೃತಿ ಕಾರ್ಯಗಳ ಮೂಲಕ ಜಗತ್ತಿಗೆ ಭಾರತದ ನೈಜ ಶ್ರೀಮಂತಿಕೆಯ ಧರ್ಶನವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಮತ್ತೆ ಆ ಪ್ರಯತ್ನಗಳಾಗುತ್ತಿದೆಯೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯುಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿವೇಕಾನಂದ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್‌ನ್ನು ಮಂಗಳವಾರ ನಗರ ಸಭಾ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪರಕೀಯ ದಾಸ್ಯದಿಂದ ವಿಮೋಚನೆಗೊಂಡು ಅರ್ಧ ಶತಮಾನಗಳು ಸಂದಿದ್ದರೂ ರಾಷ್ಟ್ರ ಇನ್ನೂ ಅನೇಕ ವಿಚಾರಗಳಲ್ಲಿ ಹಿಂದುಳಿದಿರುವುದು ಇಲ್ಲಿಯ ದುರ್ಬಲ ಆಡಳಿತದ ಸಂಕೇತ. ಇಲೆಲ್ಲವನ್ನು ಮತ್ತೆ ಪ್ರಾರಂಭದಿಂದ ಜೋಡಿಸಿ ರಾಷ್ಟ್ರದ ಉದ್ದಗಲದಲ್ಲೂ ಸಮಾನ ಸರ್ವತೋಮುಖ ಬೆಳವಣಿಗೆಗೆ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಬಳಸುಕೊಳ್ಳುವಿಕೆಯಲ್ಲಿ ಮುತುವರ್ಜಿವಹಿಸಬೇಕಿದೆಯೆಂದು ತಿಳಿಸಿದರು. ಸ್ವಾಮಿ ವಿವೇಕಾನಂದರ ಉಪದೇಶ, ಸಮಷ್ಠಿಯ ರಾಷ್ಟ್ರ ನಿರ್ಮಾಣದ ಕಲ್ಪನೆಯನ್ನು ಇಂದಿನ ರಾಜಕೀಯ ಹಾಗೂ ಆಡಳಿತಗಳಿತ ವ್ಯವಸ್ಥೆಗೆ ಬಳಸಿಕೊಳ್ಳುವ ಅಗತ್ಯವಿದೆ.ಸಮಗ್ರ ಮುನ್ನೋಟಗಳಿಂದ ಕೂಡಿದ ಸಾಂಸ್ಕೃತಿಕತೆಗೆ ಭಿನ್ನತೆಗಳಾಗದಂತೆ ಆಡಳಿತ ನೀಡುವಲ್ಲಿ ರಾಜಕೀಯ ಪಕ್ಷಗಳು ಸಮರ್ಥರಾದರೆ ಜನಬಲದೊಡನೆ ಅಭಿವೃದ್ದಿ ಸುಲಭಸಾಧ್ಯವಾಗಲು ಸಾಧ್ಯವೆಂದು ಅವರು ತಿಳಿಸಿದರು.ಸಂಘ,ಸಂಘಟನೆಗಳು ರಾಷ್ಟ್ರ ನಿರ್ಮಾಣಕ್ಕೆ ನೀಡುತ್ತಿರುವ ಕೊಡುಗೆ ಅಪೂರ್ವವಾಗಿದ್ದು,ಮೂಲೆಮೂಲೆಗೆ ಅದರ ಸೇವಾ ಚಟುವಟಿಕೆಗಳು ವ್ಯಾಪಿಸಿ ಪುನರುತ್ಥಾನದ ನವ ಶಕೆ ಯುವ ಸಮೂಹವನ್ನು ಕೇಂದ್ರೀಕರಿಸಿ ಈ ಶತಮಾನದ ವಿಶಿಷ್ಟ ದಾಖಲೆಯಾಗಿ ಮೂಡಿಬರುವುದೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿವೇಕಾನಂದ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎನ್.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇರಳ ಪ್ರಾಂತ್ಯ ಸಹ ಸಂಘ ಚಾಲಕ್ ಅಡ್ವ.ಕೆ.ಕೆ.ಬಲರಾಮ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಟ್ರಸ್ಟ್‌ನ ನೂತನ ವೈಬ್‌ಸೈಟ್‌ನ್ನು ಮಾಜಿ ಸಚಿವೆ,ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಿ ಮಾತನಾಡಿ,ಸ್ವಾಮಿ ವಿವೇಕಾನಂದರ ಜೀವನ ಚಿತ್ರಣಗಳು ಇಂದಿಗೂ ನಮ್ಮನ್ನು ಹುರುಪುಗೊಳಿಸುತ್ತದೆ.ಸಂಕಷ್ಟಮಯ ಸನ್ನಿವೇಶದಲ್ಲೂ ಅಮೇರಿಕಾದ ಚಿಕಾಗೋ ಗೆ ತೆರಳಿ ಭಾರತದ ಭೌದ್ದಿಕ,ಸಾಂಸ್ಕೃತಿಕ,ಐತಿಹಾಸಿಕ ಶ್ರೀಮಂತಿಕೆಯನ್ನು ನೆನಪಿಸಿ ಬಂದ ಅವರ ಸಾಧನೆ,ಅವರು ನೀಡಿದ ಸಂದೇಶ ಸದಾ ಚೇತೋಹಾರಿಯೆಂದು ತಿಳಿಸಿದ ಅವರು ಭಾರತ ಇಂದು ಮೋದಿಯವರ ನೇತೃತ್ವದಲ್ಲಿ ಅದೇ ಸನ್ನಿವೇಶವನ್ನು ಮರು ಸೃಷ್ಟಿಸಿ ಮತ್ತೆ ಭಾರತದ ಬೆಳಕನ್ನು ಜಗತ್ತಿನಾದ್ಯಂತ ಪಸರಿಸಲು ಕಾರ್ಯ ತತ್ಪರವಾಗಿದೆಯೆಂದು ತಿಳಿಸಿದರು.ಕೇರಳದಲ್ಲೂ ಬಿಜೆಪಿ ತನ್ನ ಇರುವಿಕೆಯನ್ನು ಸಾಬೀತುಪಡಿಸಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

ಟ್ರಸ್ಟ್ನ ಲಾಂಛನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯೆ ಕ್ಷೇತ್ರೀಯ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್ ಬಿಡುಗಡೆಗೊಳಿಸಿದರು. ಹಿರಿಯ ಯಕ್ಷಗಾನ ಕಲಾವಿದ ಉದಯ ನಾವಡ ಮಧೂರು,ಬಡ ವಿದ್ಯಾರ್ಥಿನಿ ಸುಮಲತಾ ನೆಲ್ಕಳರವರಿಗೆ ಸಹಾಯ ಧನವನ್ನು ವಿತರಿಸಲಾಯಿತು.ಬಿಜೆಪಿ ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್,ಬಿಎಂ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವ.ಪಿ.ಮುರಳೀಧರನ್,ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ,ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳ ವಿಕ್ರಮಾದಿತ್ಯ ಹೆಗ್ಡೆ ಉಪಸ್ಥಿತರಿದ್ದು ಶುಭಹಾರೈಸಿದರು.ಟ್ರಸ್ಟ್‌ನ ಖಜಾಂಜಿ ಅಡ್ವ.ಕರುಣಾಕರನ್ ನಂಬ್ಯಾರ್ ಸ್ವಾಗತಿಸಿ,ಕಾರ್ಯದರ್ಶಿ ಕೆ.ಎನ್ ವೇಣುಗೋಪಾಲ್ ವಂದಿಸಿದರು.ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಕಾಸರಗೋಡು ಲಕ್ಷ್ಮೀ ವೆಂಕಟೇಶ ವಿದ್ಯಾಲಯದ ವಿದ್ಯಾರ್ಥಿಗಳಿಂದ ಆಕರ್ಷಕ ಯೋಗ ಪ್ರದರ್ಶನ ನಡೆಯಿತು.ಉದ್ಘಾಟನೆಯ ಬಳಿಕ ಮಾನ್ಯ ಯುಡಿಯೂರಪ್ಪ ವೇದಿಕೆಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.

ಯುಡಿಯೂರಪ್ಪರನ್ನು ಮಂಗಳವಾರ ಬೆಳಿಗ್ಗೆ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಗಡಿ ಪ್ರದೇಶ ತಲಪಾಡಿಯಲ್ಲಿ ಸ್ವಾಗತಿಸಲಾಯಿತು.ನೇತಾರರಾದ ಅಡ್ವ.ನವೂನ್ ರಾಜ್ ಕೆ.ಜೆ,ಯೋಗೀಶ್ ಕುಚ್ಚಿಕ್ಕಾಡ್,ರಾಜೇಶ್ ತೂಮಿನಾಡು,ಹರೀಶ್ ಶೆಟ್ಟಿ ಮಾಡ,ಸುರೇಶ್ ಶೆಟ್ಟಿ, ದಿನೇಶ್ ಕುಂಜತ್ತೂರು, ಸಂತೋಷ್ ಅಡ್ಕ, ದೇವದಾಸ್ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು.ಬಳಿಕ ಯುಡಿಯೂರಪ್ಪರು ಕುಂಬಳೆ ಸೀಮೆಯ ಪ್ರಥಮ ವಂದಿತ ಕ್ಷೇತ್ರ ಮಧೂರು ಶ್ರೀ ಸಿದ್ದಿವಿನಾಯಕ ಮಹಾಗಣಪತಿ ದೇವಾಲಯವನ್ನು ಸಂದರ್ಶಿಸಿ ದೇವರ ಧರ್ಶನ ಪಡೆದರು.

Vivekananda education trust
Vivekananda Trust

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English