ಮತ್ತೆ ವ್ಯಾಪಕ ಬೆಂಕಿ-ನಿಲ್ಲದ ಸಮಾಜ ದ್ರೋಹಿಗಳ ಅಟ್ಟಹಾಸ

12:27 AM, Wednesday, January 13th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
Badiyadka Fire

ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ಪರಿಸರದಲ್ಲಿ ಬೆಂಕಿ ಅನಾಹುತಗಳು ಮತ್ತೆ ಮಂಗಳವಾರ ಮಧ್ಯಾಹ್ನ ಸಂಭವಿಸಿದ್ದು, ಪರಿಸರ ವಾಸಿಗಳು ತೀವ್ರ ಭಯಗ್ರಸ್ಥರಾಗಿದ್ದಾರೆ.
ಜನವರಿ 2 ರಿಂದ ನಿರಂತರ ಈ ಪ್ರದೇಶದ ಅಲ್ಲಲ್ಲಿ ಈ ವರೆಗೆ ಅಗ್ನಿ ವ್ಯಾಪಿಸುತ್ತಿದ್ದು, ಒಟ್ಟು 40 ಎಕ್ರೆಗಳಿಗಿಂತಲೂ ಅಧಿಕ ಪ್ರದೇಶದಲ್ಲಿ ಮರಗಿಡಗಳ ಸಹಿತ ಪ್ರಾಣಿ ಪಕ್ಷಿಗಳಿಗೆ ವ್ಯಾಪಕ ನಷ್ಟ ಅನುಭವಿಸಿದೆ.

ಮುಳಿಹುಲ್ಲುಗಳು ವ್ಯಾಪಕವಾಗಿ ಬೆಳೆದಿರುವ ಬಯಲು ಪ್ರದೇಶದಲ್ಲಿ ಮೊದಲು ಬೆಂಕಿ ವ್ಯಾಪಿಸತೊಡಗುತ್ತಿದ್ದು, ಬಳಿಕ ವೇಗವಾಗಿ ಬೀಸುವ ಗಾಳಿಗೆ ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸುತ್ತಿದೆ. ಇದರಿಂದ ಜನ ವಸತಿ ಪ್ರದೇಶಗಳು ವ್ಯಾಪಕ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ಮಧ್ಯಾಹ್ನ ಪುದುಕೋಳಿ ಬಸ್ ನಿಲ್ದಾಣದ ಪೂರ್ವದಲ್ಲಿರುವ ಜನ ರಹಿತ ಹಿತ್ತಲಿಗೆ ಬೆಂಕಿ ಹತ್ತಿದ್ದು, ಬಳಿಕ ಅದು ವ್ಯಾಪಿಸಿ ಸುಮಾರು 5 ಎಕ್ರೆಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿತು. ಕಾಸರಗೋಡಿನ ಅಗ್ನಿ ಶಾಮಕ ದಳಕ್ಕೆ ಸಂಪರ್ಕಿಸಲಾಯಿತಾದರೂ ವಾಹನಗಳ ಲಭ್ಯತೆಯ ಕೊರತೆಯಿಂದ ಅವರು ಕೈಚೆಲ್ಲಿದ ಕಾರಣ ನೀರ್ಚಾಲು, ಮಾನ್ಯ ಪ್ರದೇಶದ ನಾಗರಿಕರು ಸಂಜೆ ವೇಳೆಗೆ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English