ಗಾಂಜಾ ಮಾರಾಟ ಪ್ರಕರಣದ ಆರೋಪಿಗಳ ಬಂಧನ

7:24 PM, Wednesday, January 13th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Ganja seller

ಮಂಜೇಶ್ವರ : ಗಾಂಜಾ ಪ್ರಕರಣದ ಆರೋಪಿ ಪಾವೂರು ಬಳಿಯ ಮಚ್ಚಂಪಾಡಿ ನಿವಾಸಿ ಮೊಹಮ್ಮದ್ ಹನೀಫ್(25)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಈತನೊಂದಿಗಿದ್ದ ಇನ್ನೋರ್ವ ಪರಾರಿಯಾಗಿದ್ದು ಈತನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈತನನ್ನು ಮೊರತ್ತಣೆಯಿಂದ ಬಂಧಿಸಲಾಗಿದೆ. ಈತ ಸಂಚರಿಸಿದ ಬೈಕ್‌ನ್ನು ವಶಪಡಿಸಲಾಗಿದೆ. ಈ ಬೈಕ್‌ನ್ನು ಕಳವು ಮಾಡಿದ್ದಾಗಿ ಪೊಲೀಸರು ಶಂಕಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಪೋಲಿಸರು ಮಂಗಳವಾರ ಸಂಜೆ ಕುಂಬಳೆ ಮೀನು ಮಾರುಕಟ್ಟೆ ಬಳಿ 150 ಗ್ರಾಂ ಗಾಂಜಾ ಸಹಿತ ಓರ್ವನನ್ನು ಸೆರೆಹಿಡಿದಿದ್ದಾರೆ. ಪೇರಾಲ್ ನಿವಾಸಿ ಉಮ್ಮರ್ ಶಾಫಿ (40)ಬಂಧಿತ. ಈತನನ್ನು ಎಸ್‌ಐ ಅನೂಪ್‌ಕುಮಾರ್ ಬಂಧಿಸಿದ್ದಾರೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English