ಪರಿಹಾರಧನ ಬಿಡುಗಡೆ, ಜಪ್ತಿ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಸೊತ್ತುಗಳನ್ನು ಇಲಾಖೆಗೆ ಮರಳಿಸಿದ ಕೊರ್ಟ್

7:40 PM, Wednesday, January 13th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
court

ಮಂಗಳೂರು : ಭೂಸ್ವಾಧೀನದ ಬಗ್ಗೆ ಮಂಜೂರಾದ ಪರಿಹಾರಧನವನ್ನು ಪಾವತಿಸಿದ ಹಿನ್ನಲೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿಯವರ ಕಚೇರಿಯ ಸೊತ್ತುಗಳನ್ನು ನ್ಯಾಯಾಲಯದ ಆದೇಶದಂತೆ ಜಫ್ತಿಮಾಡಿದ ಪ್ರಕರಣ ಮಂಗಳೂರಿನಲ್ಲಿ ಸೋಮವಾರ ನಡೆದಿದೆ. ಮಂಗಳೂರು ಉಪವಿಭಾಗಾಧಿಕಾರಿಯವರ ವಾಹನ, ಕಚೇರಿಯ ಪೀಠೊಪಕರಣ, ಕಪಾಟು ಸಹಿತ ಎಲ್ಲ ಚರ ವಸ್ತುಗಳು ಜಪ್ತಿ ಮಾಡಲಾಯಿತು.

ಬಜ್ಪೆ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿಯಲ್ಲಿ ಕ್ರಿಸ್ತಿನಾ ಡಿಸೋಜಾ ಎಂಬವರ 4.5 ಎಕರೆ ಕೃಷಿ ಭೂಮಿಯನ್ನು 2005ರಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸ್ವಾಧೀನ ಪಡಿಸಲಾಗಿತ್ತು. ಇದಕ್ಕಾಗಿ ಅವರಿಗೆ 59 ಲಕ್ಷ ರೂ. ಪರಿಹಾರ ಧನ ನೀಡಬೇಕಾಗಿತ್ತು. ಆದರೆ 2006ರಲ್ಲಿ 13 ಲಕ್ಷ ರೂ. ಮಾತ್ರ ಪರಿಹಾರ ಧನ ಮಾತ್ರ ನೀಡಲಾಗಿತ್ತು. ಬಜ್ಪೆಯಲ್ಲಿ ಮನೆ ನಿರ್ಮಾಣಕ್ಕೆ 12 ಸೆಂಟ್ಸ್‌ ಜಾಗ ಒದಗಿಸಲಾಗಿತ್ತು.

ಆ ಬಳಿಕ ಪರಿಹಾರ ಧನ ನೀಡದೆ ಅಧಿಕಾರಿಗಳು ಸತಾಯಿಸಲು ಆರಂಭಿಸಿದ್ದರು. ಜೋಸೆಫ್ 46 ಲಕ್ಷ ರೂ. ಪರಿಹಾರ ಧನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಹಣ ನೀಡುವಂತೆ ಕಂದಾಯ ಇಲಾಖೆಗೆ ಆದೇಶಿಸಿದ್ದರೂ ಈವರೆಗೆ ಪಾವತಿಗೆ ಕ್ರಮ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.

ಆದೇಶ ಪಾಲನೆಯಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಮಂಗಳೂರು ಉಪವಿಭಾಗಾಧಿಕಾರಿಯವರ ಕಚೇರಿ ಸೊತ್ತನ್ನು ಜಪ್ತಿ ಮಾಡಲು ಆದೇಶಿತ್ತು. ಇದರಂತೆ ಸೋಮವಾರ ಸಂತ್ರಸ್ತ ಕುಟುಂಬದವರ ಜತೆ ಬಂದ ನ್ಯಾಯಾಲಯದ ಅಧಿಕಾರಿಗಳು ಆಯುಕ್ತರ ಕಚೇರಿ ಸೊತ್ತನ್ನು ಜಪ್ತಿ ಮಾಡಿದರು.

ಪರಿಹಾರಧನ ಬಿಡುಗಡೆ : ಜಿಲ್ಲಾಧಿಕಾರಿ
ಮಂಗಳೂರು ವಿಮಾನನಿಲ್ದಾಣದ ರನ್‌ವೇ ವಿಸ್ತರಣೆಗೆ ಭೂಸ್ವಾಧೀನವಾಗಿದ್ದ ಭೂಮಾಲಕಕರಿಗೆ ರಾಜ್ಯ ಸರಕಾರ 34 ಕೋ.ರೂ. ಪರಿಹಾರವನ್ನು ಜ.11ರಂದು ಬಿಡುಗಡೆ ಮಾಡ ಆದೇಶಿಸಿದೆ.

ವಿಮಾನನಿಲ್ದಾಣದ 2ನೇ ರನ್‌ವೇ ವಿಸ್ತರಣೆಗೆ 1990 ರಲ್ಲಿ ಭೂಸ್ವಾಧೀನ ಮಾಡಲಾಗಿತ್ತು. ಆದರೆ ಹೆಚ್ಚುವರಿ ಪರಿಹಾರ ಕೋರಿ ಭೂಮಾಲಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯಲು 77 ಮೊಕದ್ದಮೆಗಳಲ್ಲಿ ಸುಮಾರು 34 ಕೋ.ರೂ. ಪರಿಹಾರ ನೀಡಲು ಆದೇಶಿಸಿತ್ತು. ಈ ಪರಿಹಾರ ಪಾವತಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು . ಈ ಮಧ್ಯೆ ಪರಿಹಾರ ಪಾವತಿಸಿಲ್ಲ ಎಂದು ಭೂಮಾಲಕರು ಭೂಸ್ವಾಧೀನ ಅಧಿಕಾರಿಯಾಗಿದ್ದ ಮಂಗಳೂರು ಉಪವಿಭಾಗಾಧಿಕಾರಿಗಳ ಕಚೇರಿಯ ಚರಸೊತ್ತುಗಳನ್ನು ಮುಟ್ಟುಗೋಲು ಹಾಕಲು ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯದ ಆದೇಶದಂತೆ ಮುಟ್ಟುಗೋಲು ಹಾಕಲು ಮುಂದಾಗಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರು ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಿದ ಹಿನ್ನಲೆಯಲ್ಲಿ 34 ಕೋ.ರೂ. ರಾಜ್ಯ ಸರಕಾರ ಬಿಡುಗಡೆ ಮಾಡಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಮರಳಿ ವಶಕ್ಕೆ ನೀಡಲಾಗಿದೆ
ಜಪ್ತಿ ಬಳಿಕ ಮುಚ್ಚಳಿಕೆ ಬರೆಸಿಕೊಂಡು ವಾಹನ ಸಹಿತ ಎಲ್ಲ ಸೊತ್ತುಗಳನ್ನು ಇಲಾಖೆಯ ಸುಪರ್ದಿಗೆ ನೀಡಿದ್ದಾರೆ. ಇದರಿಂದಾಗಿ ಕಚೇರಿ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಸರಕಾರ ಪರಿಹಾರ ಧನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಹಣ ಬಿಡುಗಡೆಗೊಂಡ ತಕ್ಷಣ ಮೊತ್ತವನ್ನು ನ್ಯಾಯಾಲಯಕ್ಕೆ ಠೇವಣಿಯಾಗಿ ಸಲ್ಲಿಸಲಾಗುವುದು ಎಂದು ಮಂಗಳೂರು ಉಪವಿಭಾಗಧಿಕಾರಿ ಡಾ | ಅಶೋಕ್‌ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English