ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ : ಡಾ.ಅಬ್ದುಲ್ ಖಾದರ್

9:00 PM, Friday, January 15th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kulapati

ಕುಂಬಳೆ: ಮಾನವೀಯ ಚಿಂತನೆಗಳಿಗಿಂತ ಮಿಗಿಲಾದ ಮಾನವ ಧರ್ಮ ಬೇರೊಂದಿಲ್ಲ.ಇಂದಿನ ಯಾಂತ್ರಿಕ ಯುಗದಲ್ಲಿ ಮಾನವೀಯತೆ, ಸಂಬಂಧಗಳು ಗಂಭೀರವಾಗಿ ಕುಸಿಯುತ್ತಿರುವುದು ಆತಂಕಾರಿ. ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿ ಸಮದೇಶಗಳನ್ನು ಸಮಾಜದಲ್ಲಿ ಪಸರಿಸಲು ಪ್ರಯತ್ನಿಸಬೇಕೆಂದು ಕಣ್ಣೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಅಬ್ದುಲ್ ಖಾದರ್ ಆಶಯ ವ್ಯಕ್ತಪಡಿಸಿದರು.

ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿರುವ ರಾಜ್ಯ ಸರಕಾರದ ಮಂಜೇಶ್ವರ ಐಎಚ್‌ಆರ್‌ಡಿ ಕಾಲೇಜಿನಲ್ಲಿ ಆರಂಭಿಸಲಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಲೇಜು ಯೂನಿಯನ್ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ನಿರ್ದೇಶಕ ರಾಜನ್ ಮುಳಿಯಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಪ್ರಾಂಸುಪಾಲ ಪ್ರೊ.ಪಿ.ವಿ.ಮಾಧವನ್ ನಾಯರ್,ಎ.ರಾಜೇಶ್,ಪಿ.ಎಸ್ ಅಜಯ್ ಕುಮಾರ್,ಶೋಭಾ ಎಸ್ ನಾಯರ್,ಮೊಹಮ್ಮದ್ ಮುಜಾಂಬಿಲ್ ಮೊದಲಾದವರು ಶುಭಹಾರೈಸಿದರು. ನಿರ್ದೇಶಕಿ ಸೀನಾರೋಸ್ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಭಾಗ್ಯಶ್ರೀ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English