ಮಂಗಳೂರು: ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ನೇತೃತ್ವದಲ್ಲಿ ನೂರ ಐವತ್ತು ಮಂದಿ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆದಾಳಿ ನಡೆಸಿ ಗಾಂಜಾ, ಮೊಬೈಲ್, ಸಿಮ್ ಕಾರ್ಡ್ ಹಾಗೂ ನಗದನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು. ಹಳೆ, ಹೊಸ ಜೈಲು ಹಾಗೂ ಮಹಿಳಾ ಬ್ಯಾರಿಕೇಡ್‌ಗಳನ್ನು ಶೋಧಿಸಲಾಗಿದ್ದು, ಇಡೀ ಜೈಲನ್ನು ಪೊಲೀಸರು ಜಾಲಾಡಿದ್ದಾರೆ.
ಜೈಲಿನೊಳಗೆ 5 ಗಾಂಜಾ ಪ್ಯಾಕೇಟ್, 12 ಮೊಬೈಲ್, ಸಿಮ್ ಕಾರ್ಡ್‌ಗಳು ಹಾಗೂ 6 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ಇದೇ ಜೈಲಿನಲ್ಲಿ ಇಬ್ಬರು ಭೂಗತ ಸಹಚರರ ಹತ್ಯೆ ಘಟನೆಯ ನಂತರ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಕೈಗಾರಿಕಾ ಭದ್ರತಾ ಪಡೆ ಮಾದರಿಯ ಭದ್ರತೆಯನ್ನು ಒದಗಿಸಲಾಗಿದೆ.
Click this button or press Ctrl+G to toggle between Kannada and English