ಭಾಷೆಯನ್ನು ಬೆಳೆಸುವುದರ ಮೂಲಕ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸೋಣ : ಪ್ರೊ.ಪಿ.ಜಿ.ಹರಿದಾಸ್

4:04 PM, Sunday, January 17th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
haridas

ಕಾಸರಗೋಡು : ಇಪ್ಪತ್ತೈದು ವರ್ಷಗಳ ಹಿಂದೆ ಮಹಾಕವಿ ಅಕ್ಕಿತ್ತಂನಿಂದ ಸಾಗಿ ಬಂದ ಸಾಂಸ್ಕೃತಿಕ ತೀರ್ಥ ಯಾತ್ರೆ 2016ಜನವರಿ 3 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು ಜ.17 ರಂದು ಗೋಕರ್ಣದಲ್ಲಿ ಸಮಾರೋಪಗೊಳ್ಳಲಿದೆ. ಈ ಸಾಗರ ತೀರ್ಥ ಯಾತ್ರೆಯನ್ನು ಕೈಗೊಂಡಿರುವ ತಪಸ್ಯ ಸಾಹಿತ್ಯ ಸಂಘಟನೆಗೆ ಚಿನ್ಮಯ ವಿದ್ಯಾಲಯದಲ್ಲಿ ಭವ್ಯ ಸ್ವಾಗತವನ್ನು ಕೋರಲಾಯಿತು.

ನನ್ನ ಭೂಮಿ, ನನ್ನ ಭಾಷೆ, ನನ್ನ ಸಂಸ್ಕೃತಿ ಎಂಬ ಸಂದೇಶ ವಾಕ್ಯಗಳನ್ನು ಹೊತ್ತಿರುವ ತಪಸ್ಯ ಸಾಂಸ್ಕೃತಿಕ ಸಂಘಟನೆ ಸಾಂಸ್ಕೃತಿಕ ಕೇರಳದ ಬೆಟ್ಟಗುಡ್ಡಗಳೂ, ನದಿಗಳೂ ಇಲ್ಲಿ ಹುಟ್ಟಿರುವ ಕವಿಶ್ರೇಷ್ಠರೂ, ಈ ನೆಲದ ಕಲೆಗಳನ್ನು ಮತ್ತೆ ಪುನಶ್ಚೇತನಗೊಳಿಸುವ ಯತ್ನದಲ್ಲಿದ್ದಾರೆ. ಪ್ರಕೃತಿ ವಿಕೋಪಗಳು, ನಮ್ಮ ಸಂಸ್ಕೃತಿಯನ್ನು ಮರೆತ ಆಧುನಿಕ ಮಾನವರ ದಯನೀಯ ಸ್ಥಿತಿಗತಿಗಳು ನಮ್ಮ ಸಂಸ್ಕೃತಿಯ ಅಧ:ಪತನಕ್ಕೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಬೀದಿ ನಾಟಕದ ಮೂಲಕ ಪ್ರತಿಬಿಂಬಿಸಿದರು.

ಸಾಂಸ್ಕೃತಿಕ ಕೇರಳದ ಮಹಾರಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಪಸ್ಯ ಸಾಂಸ್ಕೃತಿಕ ಕಲಾವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ಚಿನ್ಮಯ ಮಿಷನಿನ ಸಂಘಟಕ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀ ಅವರು ಮಣ್ಣು, ಭಾಷೆ, ಸಂಸ್ಕೃತಿಯನ್ನು ನಾವು ಆಳದಿಂದ ಸ್ಪರ್ಶಿಸುವಂತದ್ದು. ಅದನ್ನು ಅವಗಣಿಸಿದರೆ ನಾವು ಅವಗಡದತ್ತ ಸಾಗಬಹುದು. ನಾವು ಎಚ್ಚರವಹಿಸ ಬೇಕು ಎಂದರು. ಸ್ವಾಮೀಜಿಯವರಿಂದ ಸಮ್ಮಾನಿತರಾದ ತಪಸ್ಯ ಸಾಂಸ್ಕೃತಿಕ ವೇದಿಕೆಯ ಸಂಸ್ಥಾನ ಅಧ್ಯಕ್ಷ ಪೊ..ಪಿ.ಜಿ.ಹರಿದಾಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಾವು ಭಾಷೆಯನ್ನು ಬೆಳೆಸುತ್ತಾ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸಬೇಕು. ಪಾಶ್ಚಾತ್ಯ ವಿದ್ವಾಂಸರು ನಮ್ಮ ದೇಶಕ್ಕೆ ಬಂದು ಸಂಸ್ಕೃತವನ್ನು ಕಲಿತು ಇಲ್ಲಿನ ಕೃತಿಗಳನ್ನು ಭಾಷಾಂತರಿಸಿದ್ದಾರೆ. ಸಂಸ್ಕೃತಿಯನ್ನು ನಾಶ ಮಾಡಲೂ ಯತ್ನಿಸಿದ್ದಾರೆ. ಮಾಧವಿ ಕುಟ್ಟಿ ಹೇಳಿದ್ದಾರೆ ನಾನು ಯಾವುದೇ ಭಾಷೆಯಲ್ಲಿ ಸಾಹಿತ್ಯ ರಚಿಸಬಲ್ಲೆ. ಆದರೆ ಕನಸು ಕಾಣಲು ಮಾತೃ ಭಾಷೆಯೇ ಬೇಕು ಎಂದು. ನಾವು ಭಾಷೆಯನ್ನು ಬೆಳೆಸುತ್ತಾ ಸಾಹಿತ್ಯದ ಸವಿಶೇಷತೆ, ಸಾಂಸ್ಕೃತಿಕ ಹಿರಿಮೆ, ಸಂಶೋದನಾ ಮನಸ್ಸನ್ನು ಬೆಳೆಸಬೇಕು. ಶರೀರ ಬಲ, ಬುದ್ಧಿ ಬಲ, ಆತ್ಮಬಲವನ್ನು ಬೆಳೆಸಬೇಕು. ಆತ್ಮಬಲದಿಂದ ಇಚ್ಛಾಶಕ್ತಿಯನ್ನು ಬೆಳೆಸಬೇಕು. ಆಗ ನಮಗೆ ನಮ್ಮ ನೆಲ, ಭಾಷೆ, ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುವುದು. ಶ್ರೀಮಧು ಕಾರಾಯಿಲ್ ಸ್ವಾಮಿ ಚಿನ್ಮಯಾನಂದಜೀ ಅವರ ಶಿಷ್ಯ, ಕವಿ ತನ್ನ ಕವಿತೆಯನ್ನು ಈ ಸಂದರ್ಭದಲ್ಲಿ ವಾಚಿಸಿದರು.

ತಪಸ್ಯ ಸಾಂಸ್ಕೃತಿಕ ಕಲಾವೇದಿಕೆಗೆ ಭವ್ಯ ಸ್ವಾಗತವನ್ನು ಕೋರಿದ ಈ ಸಂದರ್ಭದಲ್ಲಿ ಕಾಸರಗೋಡಿನ ಪ್ರಸಿದ್ಧ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಸಮ್ಮಾನಿಸಲಾಯಿತು. ಯಕ್ಷಗಾನದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ದಿವಾಣ ಶಿವಶಂಕರ ಭಟ್ ಅವರನ್ನು ಪ್ರೊ.ಪಿ.ಜಿ.ಹರಿದಾಸ್ ಅವರು ಶಾಲು ಹೊದಿಸಿ ಸಮ್ಮಾನಿಸಿದರು.

ಕಾಸರಗೋಡಿನ ಭವಿಷತ್ತಿನ ಸವಾಲಾಗಿರುವ ಚಿನ್ಮಯ ವಿದ್ಯಾಲಯದ ವಿದಾರ್ಥಿನಿ ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯದಲ್ಲಿ ಅನುಪಮ ಸಾಮರ್ಥ್ಯವನ್ನು ಪ್ರದರ್ಶಿಸಿದ ಮೈತ್ರಿ ಭಟ್ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಚಿನ್ಮಯಾ ಮಿಷನ್‌ನ ಕಾರ್ಯದರ್ಶಿ ಬಾಲಚಂದ್ರನ್ ಕಾರ್ಯಕ್ರಮವನ್ನು ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English