ಕಾಸರಗೋಡು : ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಡಂಬಿಂಗ್ ಮೈದಾನದಲ್ಲಿ ಶುಕ್ರವಾರ ಉಂಟಾದ ಅಗ್ನಿಅನಾಹುತದಲ್ಲಿ ವಿವಿಧ ಪ್ರಕರಣಗಳಲ್ಲೊಳಗೊಂಡ ಮೂವತ್ತರಷ್ಟು ವಾಹನಗಳು ಅಗ್ನಿಗಾಹುತಿಯಾಗಿವೆ. ವಿದ್ಯಾನಗರ ಪೊಲೀರು ಸ್ವಯಂ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ1.30 ಕ್ಕೆ ಗ್ರೌಂಡ್‌ನ ಒಂದು ಭಾಗದಲ್ಲಿ ಅಗ್ನಿನಾಹುತ ಉಂಟಾಗಿರುವುದು ನಾಗರಿಕರ ಗಮನಕ್ಕೆ ಬಂದಿತ್ತು. ನಂದಿಸಲು ಪ್ರಯತ್ನವೂ ನಡೆದಿತ್ತು. ಆದರೆ ಗಾಳಿಗೆ ಬೆಂಕಿ ಹರಡಿರುವುದರಿಂದ ಕಾಸರಗೋಡಿನ ಲೀಡಿಂಗ್ ಫಯರ್‌ಮ್ಯಾನ್ ಕೆ. ಸತೀಶನ್ ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಎರಡು ಯೂನಿಟ್ ಹಾಗೂ ಕಾಞಂಗಾಡ್‌ನಿಂದ ಒಂದು ಯೂನಿಟ್ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿತು. ಅಷ್ಟರಲ್ಲಿ ಐದು ವಾಹನಗಳು ಪೂರ್ಣವಾಗಿ ಹಾಗೂ ಉಳಿದವು ಭಾಗಶಃವಾಗಿ ಉರಿದಿವೆ.
ಬೆಂಕಿ ಅನಾಹುತ ಸಂಭವಿಸಿದರಿಂದ ಕಪ್ಪು ಹೊಗೆ ಹರಡಿರುವುದರಿಂದ ಪ್ರದೇಶವಾಸಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ಸಂರಕ್ಷಿಸಡಲು ಸ್ಥಳವಿಲ್ಲದಿರುವುದರಿಂದ ಜಿಲ್ಲಾಧಿಕಾರಿಯವರು ತೆಕ್ಕಿಲ್ ಗ್ರಾಮ ಕಚೇರಿಯ ಸಮೀಪದ ೪೦ ಸೆಮಟ್ಸ್ ಸರಕಾರಿ ಸ್ಥಳವನ್ನು 2014 ಫೆಬ್ರವರಿಯಲ್ಲಿ ಡಂಬಿಂಗ್ ಗ್ರೌಂಡ್ ಆಗಿ ಮಂಜೂರುಗೊಳಿಸಿದ್ದರು. ದ್ವಿಚಕ್ರ ಹಾಗೂ ಘನವಾಹನಗಳನ್ನೊಳಗೊಂಡಂತೆ ಹಲವಾರು ವಾಹನಗಳನ್ನು ಪೊಲೀಸರು ಇಲ್ಲಿಗೆ ತಲುಪಿಸಿರುವುದರಿಂದ ಸಮೀಪದ ಎರಡು ಎಕರೆ ಸ್ಥಳವೂ ವಾಹನಗಳಿಂದ ತುಂಬಿ ಹೋಗಿದ್ದು, ಕಾಡು ತೆರವುಗೊಳಿಸಲಾಗಿದೆ. ಕೇಂದ್ರದ ಸಂರಕ್ಷಣೆಗಗಿ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಸಣ್ಣ ಟೆಂಟ್‌ನಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಪೊಲೀಸರು ಕಾವಲು ನಿಂತಿದ್ದರು. ಕೇಂದ್ರಕ್ಕೆ ಆವರಣ ಗೋಡೆ ನಿರ್ಮಿಸಿ ಸಂರಕ್ಷಿಸಬೇಕು ಎಂಬ ಬೇಡಿಕೆ ಈಗಾಗಲೇ ಉಂಟಾಗಿದೆ. ಆದರೆ ಅಧಿಕಾರಿಗಳು ಅದಕ್ಕೆ ಸಿದ್ಧರಾಗಿಲ್ಲ. ಈ ಮಧ್ಯೆ ಶುಕ್ರವಾರದಂದು ಮಧ್ಯಾಹ್ನ ಅಗ್ನಿನಾಹುತ ಉಂಟಾಗಿದೆ. ಅಗ್ನಿನಾಹುತದ ಹಿಂದೆ ದುಷ್ಕರ್ಮಿಗಳ ಕೈವಾಡವಿರುವುದಾಗಿ ಸಂಶಯ ಉಂಟಾಗಿದೆ. ಹರಾಜು ಪ್ರಕ್ರಿಯೆಗಳು ವಿಳಂಬಗೊಂಡ ಹಿನ್ನಲೆಯಲ್ಲಿ, ವರಿಸುದಾರರ ಪತ್ತೆ ಇಲ್ಲದೆ ಹಲವಾರು ವಾಹನಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿದುಕೊಂಡಿವೆ. ಇವು ಏಕಾಏಕಿ ಅಗ್ನಿಗೆ ಬಲಿಯಾಗಿರುವುದು ಸಂಶಯಕ್ಕೀಡಾಗಿದೆ.
Click this button or press Ctrl+G to toggle between Kannada and English