ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು) ಆಶ್ರಯದಲ್ಲಿ ಒಂದು ದಿನದ ದೇಶವ್ಯಾಪಿ ಮುಷ್ಕರ

6:23 AM, Wednesday, September 8th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು, ಬ್ಯಾಂಕ್, ವಿಮಾ ನೌಕರರ ಸಂಘಗಳು ಡಿಸಿ ಕಛೇರಿ ಮುಂಭಾಗದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು.
ಕಳೆದ ಎರಡು ದಶಕಗಳಿಂದ ನಮ್ಮ ದೇಶದ ಕಾರ್ಮಿಕ ವರ್ಗವು ಕೇಂದ್ರ ಸರಕಾರಗಳ ಜಾಗತೀಕರಣ ಹಾಗೂ ಉದಾರೀಕರಣ ನೀತಿಗಳ ವಿರುದ್ದ ನಿರಂತರ ಹೋರಾಟದಲ್ಲಿ ತೊಡಗಿದೆ. ಕಾರ್ಮಿಕರ ನಿರಂತರ ಶೋಷಣೆ ನಡೆಯುತ್ತಿದೆ. ಶ್ರೀಮಂತರ ಮತ್ತು ಬಡವರ ನಡುವೆ ಅಂತರ ಬಹಳ ಜಾಸ್ತಿಯಾಗಿದೆ. ಲಕ್ಷಾಂತರ ಮಂದಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದು ಸಿಐಟಿಯು ಮುಖಂಡ ಬಿ.ಮಾಧವ ತಿಳಿಸಿದರು.


ಏರುತ್ತಿರುವ ಬೆಲೆಗಳನ್ನು ತಡೆಯಲು ಸರ್ಕಾರ ಯಾವುದೇ ರೀತಿಯ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಂಡಿಲ್ಲ, ಅದರ ಬದಲು ಪೆಟ್ರೋಲಿಯಂ ಮತ್ತು ಡೀಸಿಲ್ ಉತ್ಪನ್ನಗಳ ಬೆಲೆಗಳನ್ನು ಏರಿಸುತ್ತಿದೆ. ಆಹಾರ ಧಾನ್ಯಗಳ ಬೆಲೆಗಳು ಸುಮಾರು 17% ರಷ್ಟು ಹೆಚ್ಚಳವಾಗಿದೆ. ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಸರಕಾರ ಮೌನವಾಗಿದೆ. ಎಂದು ಎಐಬಿಇಎ ಮುಖ್ಯಸ್ಥ ಶರತ್ ಹೊಳ್ಳ ತಿಳಿಸಿದರು.


ಕಾರ್ಮಿಕ ಸಂಘಟನೆಗಳಿಂದ ಪ್ರತಿರೋಧವಿದ್ದರೂ ಲಾಭಗಳಿಸುತ್ತಿರುವ ಸಾರ್ವಜನಿಕರಂಗದ ಸಂಸ್ಥೆಗಳಾದ ಕೋಲ್ ಇಂಡಿಯಾ ಲಿಮಿಟೆಡ್, ಬಿ.ಎಸ್.ಎನ್.ಎಲ್, ಸೈಲ್, ಎನ್.ಎಲ್.ಸಿ, ಹಿಂದೂಸ್ತಾನ್ ಕೋಪರ್ ಎನ್.ಎಮ್.ಡಿ.ಸಿ ಇತ್ಯಾದಿ ಕಂಪೆನಿಗಳ ಬಂಡವಾಳ ಹಿಂತೆಗೆಯುವಂತಹ ಹಾನಿಕಾರಕ ನೀತಿಯನ್ನು ಸರ್ಕಾರ ಮುಂದುವರಿಸುತ್ತಿದೆ. ಮುಖ್ಯಮಂತ್ರಿಯಾಗಲೀ, ಕಾರ್ಮಿಕ ಸಚಿವರಾಗಲೀ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸುತ್ತಿಲ್ಲ, ಬೀಡಿ, ಅಂಗನವಾಡಿ, ಮನೆಕೆಲಸಗಾರರು, ಆಟೋರಿಕ್ಷಾ, ಅಂಗಡಿ, ಪೌರಕಾರ್ಮಿಕ ಮುಂತಾದ ಕಾರ್ಮಿಕರ ಸಮಸ್ಯೆಗಳು ಬೆಟ್ಟದಷ್ಟಿದ್ದರೂ ಸರ್ಕಾರ ಅವರುಗಳ ಸಮಸ್ಯೆಗೆ ಸ್ವಂದಿಸುತ್ತಿಲ್ಲ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಕೆ.ಜಿ ಅಕ್ಕಿಗೆ ಎರಡು ರುಪಾಯಿಯಂತೆ ಪ್ರತಿ ಕುಟುಂಬಕ್ಕೂ 35 ಕೆ.ಜಿ ಕೊಡುವ ಆಶ್ವಾಸನೆಯತ್ತಿದ್ದರೂ ಅದ ಕಾರ್ಯಗತವಾಗಲಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.


ಎಚ್. ರಾಮಚಂದ್ರ, ಐ.ಎನ್.ಟಿ.ಯು.ಸಿ, ಎಸ್. ಪ್ರಸನ್ನಕುಮಾರ್ ಸಿ.ಐ.ಟಿ.ಯು, ಎಚ್.ವಿ ಅನಂತ ಸುಬ್ಬರಾವ್ ಎ.ಐ.ಟಿ.ಯು.ಸಿ, ಜೆ.ಆರ್. ಶಿವಶಂಕರ್ ಟಿ.ಯು.ಸಿ.ಸಿ, ಜೆ. ಸೋಮಶೇಖರ್ ಎ.ಐ.ಯು.ಟಿ.ಯು.ಸಿ ಮತ್ತು ಶ್ರೀನಿವಾಸ ಮೂರ್ತಿ, ಎಚ್.ಎಂ.ಎಸ್, ಸುರೇಶ ಚಂದ್ರ ಶೆಟ್ಟಿ ಎಚ್.ಎಂ.ಎಸ್, ಮಹಮ್ಮದ್ ರಫಿ ಎಚ್.ಎಂ.ಎಸ್, ಚಂದ್ರಹಾಸ ಉಳ್ಳಾಲ್, ಬಿಎಸ್ಎನ್ಎಲ್, ರಾಘವೇಂದ್ರ ರಾವ್ ಎಐಐಇಎ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English