ಕಾಸರಗೋಡು: ರೆಸ್ಟ್ ಹೌಸ್‌ನ(ವಿಶ್ರಾಂತಿ ಗೃಹ) ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಬ್ಲಾಕೊಂದನ್ನು ನಿರ್ಮಿಸಲಾಗುವುದೆಂದು ಲೋಕೋಪಯೋಗಿ ಸಚಿವ ವಿ.ಕೆ.ಇಬ್ರಾಹಿಂ ಕುಂಞಿ ಹೇಳಿದರು.
ಅವರು ಕಾಸರಗೋಡಿನ ಲೋಕೋಪಯೋಗಿ ಇಲಾಖೆಯ ರೆಸ್ಟ್ ಹೌಸ್‌ಗೆ ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಲೋಕೋಪಯೋಗಿ ಇಲಾಖೆ ರೆಸ್ಟ್ ಹೌಸ್‌ನ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 72 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನವೀಕರಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಲೋಕೋಪಯೋಗಿ ಕಟ್ಟಡ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಅಭಿಯಂತರ ಯು.ಕೆ.ರವಿ ಕುಮಾರ್ ವರದಿ ಮಂಡಿಸಿದರು. ಶಾಸಕರಾದ ಇ.ಚಂದ್ರಶೇಖರನ್, ಪಿ.ಬಿ.ಅಬ್ದುಲ್ ರಝಾಕ್, ಸಿಡ್ಕೋ ಚೆಯರ್‌ಮೇನ್ ಸಿ.ಟಿ.ಅಹಮ್ಮದಲಿ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಚಾಯಿಂಡಡಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹಕೀಂ ಕುನ್ನಿಲ್, ವಿ.ರಾಜನ್, ನಗರಸಭಾ ಸದಸ್ಯ ಸಜಿತ್ ಮಾತನಾಡಿದರು. ಪಿ.ಕೆ.ಬಾಬು ಸ್ವಾಗತಿಸಿ, ಕೆ.ವಿ.ಮನೋಜ್ ಕುಮಾರ್ ವಂದಿಸಿದರು.
Click this button or press Ctrl+G to toggle between Kannada and English