ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ : ರಮೇಶ್ ಚೆನ್ನಿತ್ತಲ

7:54 AM, Friday, January 22nd, 2016
Share
1 Star2 Stars3 Stars4 Stars5 Stars
(4 rating, 5 votes)
Loading...
lodging-house

ಕಾಸರಗೋಡು: ರಾಜ್ಯದ ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೂ ಸಮಾನ ಪ್ರಾತಿನಿಧ್ಯ ನೀಡಲಾಗುವುದೆಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿದರು.

ಅವರು ಗುರುವಾರ ಪಾರೆಕಟ್ಟೆಯಲ್ಲಿರುವ ಶಸಸ್ತ್ರ ಮೀಸಲು ಪಡೆಯ ಪೊಲೀಸ್ ವಸತಿ ಗೃಹ ಕಟ್ಟಡ ಸಮುಚ್ಛಯವನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಪಡೆಯಲ್ಲಿ ಕೇವಲ 1 ಶೇ. ವಿದ್ದ ಮೀಸಲಾತಿಯನ್ನು ಶೇ.6 ಕ್ಕೇರಿಸಲಾಗಿದೆ. ಇನ್ನು ಅದು ಶೇ.10 ಕ್ಕೇರಲಿದೆ ಎಂದ ಅವರು ಪೊಲೀಸ್, ಅಗ್ನಿಶಾಮಕ ದಳಗಳಲ್ಲಿ ಹಾಗೂ ಬಂಧಿಖಾನೆಗಳಲ್ಲಿ ಮಹಿಳೆ-ಪುರುಷ ಎಂಬ ತಾರತಮ್ಯ ಇಲ್ಲದೆ ನೇಮಕಾತಿ ನಡೆಸಲಾಗುವುದು. ಕೇರಳ ಪೊಲೀಸ್ ಪಡೆಯ ನವೀಕರಣದಂಗವಾಗಿ 450 ನೂತನ ವಾಹನಗಳನ್ನು ಖರೀದಿಸಲಾಗುವುದು. ಪೊಲೀಸರಿಗೆ ವಿಮಾ ಯೋಜನೆ ಫೆಬ್ರವರಿಯಲ್ಲಿ ಆರಂಭಿಸಲಾಗುವುದು. ಶಸಸ್ತ್ರ ಮೀಸಲು ಪಡೆಯಲ್ಲಿ 30ವರ್ಷಗಳ ಹಿರಿತನ ಸಮಸ್ಯೆ ಪರಿಹರಿಸಲಾಗುವುದು. ಕರ್ತವ್ಯ ನಿರತ ಪೊಲೀಸರು ಮರಣಕ್ಕೀಡಾದರೆ ಅವರ ಸಂಬಂಧಿಕರಿಗೆ ಉದ್ಯೋಗ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಕುಂಬಳೆ, ನೀಲೇಶ್ವರ ಕರಾವಳಿ ಪೊಲೀಸ್ ಠಾಣೆಯಲ್ಲಿ ಶೀಘ್ರ ನೇಮಕಾತಿ ನಡೆಸಿ ಅದರ ಉದ್ಘಾಟನೆ ನಡೆಸಲಾಗುವುದೆಂದರು.

ಬಿಜೆಪಿ-ಆರೆಸ್ಸೆಸ್-ಸಿಪಿಎಂ ಶಾಂತಿ ಮಾತುಕತೆ ವಿಫಲಗೊಳಿಸಲು ಕಾಂಗ್ರೆಸ್ ಯತ್ನಿಸಿಲ್ಲ. ಚರ್ಚೆ ನಡೆಸಿ ಹಿಂಸಾ ರಾಜಕೀಯಕ್ಕೆ ಇತಿಶ್ರೀ ಹಾಡಿದರೆ ಕಾಂಗ್ರೆಸ್ ಸ್ವಾಗತಿಸುತ್ತದೆ. ಚರ್ಚೆ ಬಗ್ಗೆ ಹೇಳುವುದಲ್ಲದೆ ಈ ಬಗ್ಗೆ ಮುಂದಿನ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಜಿಲ್ಲಾ ಪೊಲೀಸಧಿಕಾರಿ ಡಾ.ಎ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English