ಸ್ವಸ್ಥ, ಸದೃಢ ಸಮಾಜದ ನಿರ್ಮಾಣ ನಮ್ಮಧ್ಯೇಯವಾಗಲಿ- ಮೋಹನದಾಸ ಸ್ವಾಮೀಜಿ

12:53 PM, Thursday, January 28th, 2016
Share
1 Star2 Stars3 Stars4 Stars5 Stars
(4 rating, 5 votes)
Loading...

Mohanadasa Swamiji

ಉಪ್ಪಳ: ಯುವ ಸಮೂಹ ಯಾವುದೇ ದುಶ್ಚಟಗಳಿಗೆ ದಾಸರಾಗದೆ ಸ್ವಸ್ಥ, ಸದೃಢ ಸಮಾಜದ ನಿರ್ಮಾಣ ರೂವಾರಿಗಳಾಗಬೇಕೆಂದು ಮಾಣಿಲ ಶ್ರೀಧಾಮದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಯಾರು ಸಮೀಪದ ಚೇರಾಲು ಶಾರದಾ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಸ್ವಾಮೀಜಿ ಆಶೀರ್ವಚನ ನೀಡುತ್ತ ಮಾತನಾಡುತ್ತಿದ್ದರು.

ಮಾತೆಯರು ಸಚ್ಚಾರಿತ್ರ್ಯ ಅಳವಡಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಮೌಲ್ಯಯುತ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದ ಅವರು ಯುವ ಪೀಳಿಗೆ ಉತ್ತಮ ರೀತಿ, ನೀತಿ ಜೊತೆ ಭಕುತಿ ಮಾರ್ಗದಿಂದ ಸೌಹಾರ್ದಯುತ ಸಮಾಜವನ್ನು ನಿರ್ಮಿಸಬೇಕೆಂದು ಕರೆಯಿತ್ತರು. ಮಂದಿರಗಳು ಭಕ್ತಿಯ ಕೇಂದ್ರಗಳಾಗಿದ್ದು, ಇದರ ಮೂಲಕ ಸಮಾಜ ಬೆಸೆಯುವಕಾರ್ಯವಾಗಬೇಕು ಎಂದರು.

ಉದ್ಯಮಿ,ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮಾತನಾಡಿ ಜೀವನದಲ್ಲಿ ಹಣ ಗಳಿಕೆಯೊಂದೇ ಗುರಿಯಾಗಿರಬಾರದು. ಶಾರದ ಮಾತೆಯ ಅನುಗ್ರಹದಿಂದ ಎಲ್ಲರೂ ಸಂಸ್ಕಾರವಂತರಾದರೆ ಲಕ್ಷ್ಮಿಯು ತಾನಾಗಿಯೇ ಒಲಿಯುತ್ತಾಳೆ ಎಂದು ತಿಳಿಸಿದರು. ಹಿಂದೂಜಾಗರಣ ವೇದಿಕೆಯ ರಾಧಾಕೃಷ್ಣ ಅಡ್ಯಂತಾಯ ದಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಕೆ.ಪಿ ಸುರೇಶ್ ಮಾಡೂರು, ಪಿ. ಆರ್ ಶೆಟ್ಟಿಕೂಳೂರು, ಗೋಪಾಲ ಬಂದ್ಯೋಡು ಬಾಗವಹಿಸಿದ್ದರು. ಭಾನುವಾರದಂದು ಬೆಳಗ್ಗೆ ತಂತ್ರಿ ಸತ್ಯನಾರಾಯಣ ಭಟ್ ನೇತೃತ್ವಲ್ಲಿ ಹೊಸದಾಗಿ ನಿರ್ಮಿಸಲಾದ ಭಜನಾ ಮಂದಿರದಲ್ಲಿ ಶಾರದಾ ಮಾತೆಯ ರಜತ ಭಾವಚಿತ್ರ ಪ್ರತಿಷ್ಠೆ ನಡೆಯಿತು. ಕೊಂಡೆವೂರು ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.ಮದ್ಯಾಹ್ನ ಚಂಡಿಕಾಯಾಗದ ಪೂರ್ಣಹುತಿ ನಂತರ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ ಯಕ್ಷಿಣಿ ಕಲಾವಿದ ಬಾಲಸುಬ್ರಹ್ಮಣ್ಯ ಕಡೆಂಕೋಡಿ ಮತ್ತು ಬಳಗದವರಿಂದ ನೃತ್ಯದೊಂದಿಗೆ ಜಾದೂ ಪ್ರದರ್ಶನ ನಡೆಯಿತು.ಸಿ.ಟಿ ನಾಯ್ಕ್, ಲಕ್ಮಣ ನಾಯ್ಕ್ ಪೆರುವೋಡಿ, ಅಂಗಾರ ಶ್ರೀಪಾದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದರು.

23 ರ ರಾತ್ರಿ “ಸುದ್ದಿ ತಿಕ್ಕ್ಂಡ್ ” ಎಂಬ ನಾಟಕ ಪ್ರದರ್ಶಿಸಲಾಯಿತು.24 ರಂದುರಾತ್ರಿ 10ರಿಂದ ಮಾಣಿಪ್ಪಾಡಿ ನಾರಾಯಣ ಭಟ್ಟ್ ಪ್ರಾಯೋಜಿಸಿದ ಬಾಯಾರು ಪಂಚಲಿಂಗೇಶ್ವರ ಕಲಾವೃಂದ ಹಾಗೂ ಅತಿಥಿಕಲಾವಿದರ ಕೂಡುವಿಕೆಯಲ್ಲಿ “ವಿದ್ಯುನ್ಮತಿಕಲ್ಯಾಣ” ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English