ಮುಳ್ಳೇರಿಯಾ: ಆಂಧ್ರ ವಿಶ್ವವಿದ್ಯಾನಿಲಯದ ಸಂಶೋಧಕ ವಿದ್ಯಾರ್ಥಿ ರೋಹಿತ್ ವೆಮುಲಾರವರ ಆತ್ಮಹತ್ಯೆ ಪ್ರಕರಣದ ನೈಜ್ಯ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪೆರಿಯ ಕೇಂದ್ರಿಯ ವಿಶ್ವವಿದ್ಯಾನಿಲಯಕ್ಕೆ ಮಾರ್ಚ್ ನಡೆಸಲಾಯಿತು.
ಕೆಪಿಸಿಸಿ ಮುಖಂಡ ಅಡ್ವ ಟಿ.ಸಿದ್ದಿಕ್ ಧರಣಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರೋಹಿತ್ ವೆಮುಲಾ ಸಾವು ದೇಶದ ಅಸಹಿಷ್ಣುತೆಯ ಪ್ರತ್ಯಕ್ಷ ದರ್ಶನವಾಗಿದೆ, ರೋಹಿತ್ ಸಾವಿಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ, ನರೇಂದ್ರ ಮೋದಿ ನೇತೃತ್ವದ ಸರಕಾರ ಜಾತಿ, ಧರ್ಮದ ಹೆಸರಿನಲ್ಲಿ ನರಬೇಟೆಯಾಡುತ್ತಿದೆ ಎಂದು ಅವರು ಆರೋಪಿಸಿದರು. ಶಿಕ್ಷಣ ವಲಯದಲ್ಲಿ ಕೇಸರೀಕರಣಗೊಳಿಸುವ ಭರಾಟೆಯಲ್ಲಿ ದಲಿತ, ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘಪರಿವಾರ ವ್ಯವಸ್ಥಿತವಾಗಿ ಶಿಕ್ಷಣ ಸಂಸ್ಥೆಗಳಿಂದ ಹೊರದಬ್ಬುತ್ತಿವೆ, ದೇಶದಲ್ಲಿ ಮೋದಿ ಆಡಳಿತಕ್ಕೆ ಬಂದ ಬಳಿಕ ಅರಾಜಕತೆ ತಾಂಡವಾಡುತ್ತಿವೆ ಎಂದು ಅವರು ಆರೋಪಿಸಿದರು.
ಯೂತ್ ಕಾಂಗ್ರೆಸ್ ಜಿಲ್ಲಾಧಕ್ಷ ಸಾಜಿದ್ ಮೊವ್ವಾಲ್ ಅಧಕ್ಷತೆ ವಹಿಸಿದ್ದರು. ಕೆಪಿಸಿಸಿ ನಿರ್ವಾಹಕ ಸಮಿತಿ ಸದಸ್ಯ ಪಿ.ಗಂಗಾಧರನ್ ನಾಯರ್, ಡಿಸಿಸಿ ಉಪಾಧಕ್ಷ ಹಕೀಂ ಕುನ್ನಿಲ್, ಪ್ರದನ ಕಾರ್ಯದರ್ಶಿ ವಿನೋದ್ ಕುಮಾರ್ ಪಳ್ಳಯಿಲ್ ವೀಡ್, ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶ್ರಿಜಿತ್ ಮಾಡಕ್ಕಾವ್, ಚಂದ್ರನ್ ಕರಿಚ್ಚೇರಿ, ಅಡ್ವಕೇಟ್ ಸುಧಾಕರ ರೈ, ನಾರಾಯಣ ಏದಾರು, ಶಫೀಕ್ ಅಹ್ಮದ್ ಮುಂತಾದವರು ನೇತೃತ್ವ ನೀಡಿದರು. ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾರೀ ಪೊಲೀಸ್ ಬಿಗಿಬಂದೋಬಸ್ತು ಏರ್ಪಡಿಸಲಾಗಿತ್ತು.
Click this button or press Ctrl+G to toggle between Kannada and English