ಮಂಜೇಶ್ವರ : ಜಗತ್ತೇ ಗೌರವಿಸುವ ಪ್ರಜಾಪ್ರಭ್ರುತ್ವ ರಾಷ್ರ್ರ ನಮ್ಮ ಭಾರತವಾಗಿದೆ. ಭಾರತದ ಸಂವಿಧಾನ ಇಡೀ ಜಗತ್ತಿಗೇ ಮಾದರಿಯಾಗಿದ್ದು ಸಹಿಷ್ಣುತೆ, ಸಹಬಾಳ್ವೆಯ ಜೀವನದೊಂದಿಗೆ ಶಾಂತಿ ಸೌಹಾರ್ದತೆ, ಭಾರತವನ್ನು ನಾವು ಕಟ್ಟೋಣ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಕರೆ ನೀಡಿದ್ದಾರೆ.
ಅವರು ವರ್ಕಾಡಿ ಕಳಿಯೂರಿನ ಸೈಂಟ್ ಮೇರೀಸ್ ಆಂಗ್ಲ ಮಾಧಮ ಶಾಲೆಯಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಕ್ಷ ಸ್ಥಾನ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರು ರೂಪಿಸಿದ ಸಂವಿಧಾನ ಇಂದು ಭಾರತವನ್ನು ಐಕ್ಯತೆಯತ್ತ ಮುನ್ನಡೆಸಲು ಊರುಗೋಲಾಗಿದೆ ಎಂದು ಅವರು ಹೇಳಿದರು. ವಿಭಿನ್ನ ಸಂಸ್ಕ್ರತಿ, ವಿಭಿನ್ನ ಭಾಷೆ, ವಿಭಿನ್ನ ವರ್ಗ, ವಿಭಿನ್ನ ಪಂಗಡಗಳ ಜನರು ಜೀವಿಸುವ ಭಾರತ ದೇಶದಲ್ಲಿ ಸಂವಿಧಾನಕ್ಕೆ ಗೌರವ ಸಲ್ಲಿಸಿ, ಸಂವಿಧಾನಬದ್ಧವಾಗಿ ಜೀವಿಸಿದರೆ ದೇಶ ಶಾಂತಿಧಾಮವಾಗುತ್ತದೆ ಎಂದು ಹೇಳಿದರು.
ಮೀಂಜ ಗ್ರಾಮ ಪಂಚಾಯತು ಉಪಾಧಕ್ಷೆ ಫಾತಿಮಾ, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧಕ್ಷ , ಪಂ.ಸದಸ್ಯ ಆನಂತ ತಚ್ಚಿರೆ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೀನಾ ಮುಂತಾದವರು ಶುಭ ಹಾರೈಸಿದರು. ನಂಶೀನ ಸ್ವಾಗತಿಸಿ, ವಿಜೇಶ್ ವಂದಿಸಿದರು.ಯಲ್ವಿರ್ನ ಕಾರ್ಯಕ್ರಮ ನಿರೂಪಿಸಿದರು.ಅತಿಥಿಗಳು ಶಾಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. ಶಾಲಾ ಮಕ್ಕಳಿಂದ ಆಕರ್ಷಕ ಪೆರೇಡ್, ಕವಾಯತು ,ನೃತ್ಯ ಪ್ರದರ್ಶನ ಜರುಗಿತು.
Click this button or press Ctrl+G to toggle between Kannada and English