ಸಿಪಿಐ ಪಕ್ಷದ ಜನಕೀಯ ಯಾತ್ರೆಗೆ ಹೊಸಂಗಡಿಯಲ್ಲಿ ಚಾಲನೆ

7:56 PM, Thursday, January 28th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
janakiya yatre

ಮಂಜೇಶ್ವರ: ಭಾರೀ ನಿರೀಕ್ಷೆ ಮೂಡಿಸಿದ್ದ ಕೇಂದ್ರದ ಮೋದಿ ಸರಕಾರ ಜನರನ್ನು ನಿರಾಸೆಗೊಳಿಸುವ ಜೊತೆಗೆ ಜನಸಾಮಾನ್ಯರ ಬದುಕನ್ನು ದುರ್ಬಲತೆಗೆ ತಳ್ಳಿದೆ. ಭಷ್ಟಾಚಾರ ನಿರ್ಮೂಲನೆ, ಕಫ್ಫುಹಣವನ್ನು ಹಿಂದೆತರುವಿಕೆಯಂತಹ ಭಾರೀ ಯೋಜನೆಗಳು ಪ್ರಚಾರದ ಸರಕಾಗಿವೆಯಷ್ಟೇ ಹೊರತು ಕಾರ್ಯರೂಪಕ್ಕೆ ತರುವಲ್ಲಿ ಬಿಜೆಪಿ ಸೋತಿದೆಯೆಂದು ಕಮ್ಯುನಿಸ್ಟ್ ಪಾರ್ಟಿ ಓಫ್ ಇಂಡಿಯಾ(ಸಿಪಿಐ)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ಮತ ನಿರಪೇಕ್ಷ, ಸಾಮಾಜಿಕ ನ್ಯಾಯ, ಸುಸ್ಥಿರ ಅಭಿವೃದ್ದಿ ಹಾಗೂ ಭ್ರಷ್ಟಾಚಾರ ರಹಿತ ಕೇರಳವೆಂಬ ಘೋಷಣೆಯೊಂದಿಗೆ ಸಿಪಿಐ ಪಕ್ಷ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಕೀಯ ಯಾತ್ರೆಯನ್ನು ಬುಧವಾರ ಸಂಜೆ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರದಲ್ಲಿ ಇಂದೀಗ ಜನ ಸಾಮಾನ್ಯರ ಆಹಾರದ ಹಕ್ಕನ್ನೂ ಕಸಿಯುವ ಯತ್ನವೆಂಬಂತೆ ನಿತ್ಯೋಪಯೋಗಿ ಬೇಳೆ-ಕಾಳು,ಧವಸ ಧಾನ್ಯಗಳ ಬೆಲೆ ಮಿತಿಮೀರಿ ಬೆಳೆಯುತ್ತಿದೆ.ಕಾಳ ಸಂತೆಯ ಮೂಲಕ ಮಧ್ಯವರ್ತಿಗಳು ಸಾಮಾನ್ಯ ಜನರ ಜೀವನದ ಮೇಲೆ ಆಟವಾಡುತ್ತಿರುವುದು ಸರಕಾರಗಳ ಗಮನಕ್ಕೆ ಬರುತ್ತಿಲ್ಲ.ಕಾರ್ಪರೇಟ್ ಮುಖ್ಯಸ್ಥರ ಕೈಗೊಂಬೆಗಳಾಗಿರುವ ಆಡಳಿತ ಪಕ್ಷಗಳಿಂದ ಗಂಡಾಂತರ ಎದುರಾಗಿದೆ ಎಂದು ಅವರು ತಿಳಿಸಿದರು.ಕೇರಳದಲ್ಲಿ ಅಧಿಕಾರಕ್ಕೇರಿದಂದಿನಿಂದ ಈವರೆಗೆ ವೈಶಿಷ್ಟಯಪೂರ್ಣ ಹಗರಣಗಳ ಮೂಲಕ ನಗೆಪಾಟಲಿಗೀಡಾಗಿರುವ ಯುಡಿಎಫ್ ಗೆ ಜನರೆದುರಲ್ಲಿ ಹೇಳಲೇನೂ ಬಾಕಿ ಉಳಿದಿಲ್ಲವೆಂದು ಅವರು ಲೇವಡಿಗೈದರು.ಯೋಜನೆಗಳ ಹರಿಕಾರರು ತಾವೆಂದು ಬೊಗಳೆ ಬಿಡುವ ಕಾಂಗ್ರೆಸ್ಸ್ ಮುಖಂಡರುಗಳು ಸ್ವತಃ ತಾವೇ ಹಗರಣಗಳಲ್ಲಿ ಸಿಲುಕಿರುವುದರಿಂದ ಕೇಂದ್ರ ಸರಕಾರದ ವಿರುದ್ದ ಕ್ರೀಯಾತ್ಮಕ ಹೋರಾಟಕ್ಕಿಳಿಯಲು ಹಿಂದೆ ಸರಿಯುತ್ತಿದೆಯೆಂದು ತಿಳಿಸಿದ ಅವರು ಸಿಪಿಐ ಒಳಗೊಂಡ ಎಲ್‌ಡಿಎಫ್ ಸರಕಾರವಷ್ಟೇ ಜನ ಸಾಮಾನ್ಯರ ಬದುಕನ್ನು ಸ್ಥಿರಗೊಳಿಸುವ ಆಡಳಿತ ನೀಡಲು ಸಾಧ್ಯವೆಂದು ತಿಳಿಸಿದರು.

ಆನಕೀಯ ಯಾತ್ರೆಯ ಧ್ವಜ ಸ್ವೀಕರಿಸಿದ ಜಾಥಾ ನಾಯಕ ಕಾನಂ ರಾಜೇಂದ್ರನ್ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ದಿಯನ್ನು ಸಂಪೂರ್ಣ ಮರೆತು ಹಗರಣಗಳಲ್ಲೆ ಬಾಗಿಯಾಗುವುದು ಹಾಗೂ ಅದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮುಳುಗೇಳುತ್ತಿರುವ ಯುಡಿಎಫ್ ರಾಜ್ಯದ ಒಂದು ತಲೆಮಾರಿನ ಅಭಿವೃದ್ದಿ ಶಖೆಯನ್ನೇ ನಿರ್ಮೂಲನೆಗೊಳಿಸಿದೆ.ಚಿಂತನಶೀಲ ಕೇರಳದ ಜನತೆ ಇದನ್ನು ಅರಿತಿರುವರೆಂದು ಅವರು ತಿಳಿಸಿದರು.

ಮಾಜಿ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ಸತ್ಯನ್ ರವೀಂದ್ರನ್,ಕೆ.ಇ.ಇಸ್ಮಾಯಿಲ್,ಕೆ.ಪ್ರಕಾಶ್ ಬಾಬು,ಸಂಸದ ಪಿ.ಎ.ಜಯದೇವನ್,ಎಚ್.ವಿ.ರಾವ್,ಪ್ರಭಾಕರ ರಾವ್,ಅಡ್ವ.ಗೋವಿಂದನ್ ಪಳ್ಳಿಕ್ಕಾಪಿಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಸಕ ಮುಲ್ಲಕ್ಕರ ರತ್ನಾಕರನ್ ಯಾತ್ರೆಯ ಉಪನಾಯಕರಾಗಿದ್ದು,ಸತ್ಯನ್ ಮೊಗೇರಿ ನಿರ್ದೇಶಕರಾಗಿ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ.ಜೆ.ಚೆಂಚುರಾಣಿ,ಟಿ.ಜೆ ಆಚಿಜಲೋಸ್,ಕೆ.ಕೆ ಅಶ್ರಫ್,ಕೆ.ರಾಜನ್ ಮೊದಲಾದವರು ಯಾತ್ರೆಯಲ್ಲಿದ್ದು ಫೆ.18 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.ಬಿ.ವಿ.ರಾಜನ್ ಸಹಿತ ಜಿಲ್ಲೆಯ ಮುಖಂಡರು ಯಾತ್ರೆಯ ಆರಂಭದ ಮಂಚೂಣಿಯ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡಿದ್ದರು.ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು.ಎಚ್.ವಿ ರಾವ್ ಸುಧಾಕರ ರೆಡ್ಡಿಯವರ ಆಂಗ್ಲ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವಲಲಿ ಸಹಕರಿಸಿದರು.

janakiya yatre

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English