ಪರಿಸರ ಜಾಗೃತಿ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನದ ಉದ್ಘಾಟನೆ

12:01 AM, Friday, January 29th, 2016
Share
1 Star2 Stars3 Stars4 Stars5 Stars
(5 rating, 5 votes)
Loading...
tele film

ಕುಂಬಳೆ: ಹುಟ್ಟಿನಿಂದಲೇ ಯಾರೂ ಮೇಧಾವಿಗಳಲ್ಲ. ಬಳಿಕದ ಜೀವನಾನುಭವ, ಕಲಿಕೆಗಳು ಅನುಭವ ಸಂಪನ್ನಗೊಳಿಸಿ ಜೀವನವನ್ನು ಉದ್ದರಿಸುತ್ತದೆ. ಕಲೆ, ಸಾಹಿತ್ಯಗಳ ಅಭಿರುಚಿಗಳಿಲ್ಲದ ಮಾನವ ಜೀವನ ಬರಡಾಗಿದ್ದು, ವ್ಯಕ್ತಿತ್ವವನ್ನು ಬೆಳೆಸುವ, ಜ್ಞಾನದ ಹಸಿವನ್ನು ತಣಿಸುವ ವೈಚಾರಿಕತೆಯತ್ತ ನಾವು ಒಂದಷ್ಟಾದರೂ ಗಮನ ನೀಡಬೇಕಾದ ಅಗತ್ಯವಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಹುಬ್ಬಳ್ಳಿಯ ಕರ್ನಾಟಕ ಟೆಲಿಪಿಲ್ಮ್ ನಿರ್ಮಾಣ ಸಂಸ್ಥೆಯ ಸಹಕಾರದೊಂದಿಗೆ ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲಲಿ ಪ್ರದರ್ಶಿಸಲು ಆಯೋಜಿಸಿರುವ ಪರಿಸರ ಜಾಗೃತಿ ಎಂಬ ವಿಶೇಷ ಸಾಕ್ಷ್ಯಚಿತ್ರದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಗುರುವಾರ ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜೀವಜಾಲಗಳ ಅಳಿವು-ಉಳಿವಿನ ಪ್ರಸ್ತುತ ಸಂಘರ್ಷಮಯ ಸನ್ನಿವೇಶದಲ್ಲಿ ಯುವ ಜನಾಂಗಕ್ಕೆ ಅರಿವು ಮೂಡಿಸುವ ಪ್ರಯತ್ನಗಳು ಸಾಕಷ್ಟು ಆಗಬೇಕಿದೆ.ಈ ನಿಟ್ಟಿನಲ್ಲಿ ಹಲವು ಆಧುನಿಕ ಮಾಧ್ಯಮಗಳನ್ನು ಬಳಸಿ ವಿವಿಧ ಕಾರ್ಯಯೋಜನೆಗಳನ್ನು ಸಿದ್ದಪಡಿಸಿದ್ದರೂ ಕೇರಳದ ಗಡಿನಾಡಿನ ಅಲ್ಪಸಂಖ್ಯಾತ ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲೇ ಈ ಅರಿವು ಮೂಡಿಸುವ ಯತ್ನ ಶ್ಲಾಘನೀಯವೆಂದು ಅವರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English