ಮುಳ್ಳೇರಿಯಾ: ಸುದ್ದಿ ಮಾಧ್ಯಮಗಳ ಶೈಲಿಗಳು ಇಂದಿನ ಕಾಲಕ್ಕನುಸರಿಸಿ ಬದಲಾಗುತ್ತಿದೆ. ವರದಿಗಾರರೂ ಈ ನಿಟ್ಟಿನಲ್ಲಿ ಪ್ರಭಲ ಪೈಪೋಟಿಯೊಂದಿಗೆ ಒತ್ತಡವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿಗಾರರು, ಪತ್ರಕರ್ತರು ಸಂದರ್ಭ ಸಿಕ್ಕಾಗ ಹೊಸ ಬದಲಾವಣೆಗಳತ್ತ ಮುಖಮಾಡಿ ಪರಸ್ಪರ ವೈಯುಕ್ತಿಕ ನೆಲೆಯ ವಿಚಾರ ವಿನಿಮಯಕ್ಕೆ ಆಸ್ಪದ ನೀಡುವ ಕುಟುಂಬ ಸಂಗಮವನ್ನು ಆಯೋಜಿಸುತ್ತಿರುವುದು ಅಗತ್ಯವೆಂದು ಉದುಮ ಶಾಸಕ ಕೆ.ಕುಂಞಿರಾಮನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ದೇಲಂಪಾಡಿ ಸಮೀಪದ ಪರಪ್ಪ ಕೇರಳ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಆಯೋಜಿಸಿದ ಪತ್ರಕರ್ತರ ಕುಟುಂಬ ಸಂಗವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೀಯಾತ್ಮಕವಾದ ಬರಹ, ಸುದ್ದಿ ವಿಶ್ಲೇಷಣೆಗಳಿಗೆ ಮನಸ್ಸಿನ ನಿಯಂತ್ರಣ ಹಾಗೂ ಒತ್ತಡ ರಹಿತ ಮನೋಲ್ಲಾಸ ಅಗತ್ಯವಿದ್ದು ಈ ನಿಟ್ಟಿನಲ್ಲಿ ಆಯೋಜಿಸಲಾದ ಕಾರ್ಯಕ್ರಮ ಉತ್ತಮವಾದುದು.ಸಂಕೀರ್ಣಗೊಳ್ಳುತ್ತಿರುವ ಇಂದಿನ ಜೀವನ ಶೈಲಿಯ ನಡುವೆ ಕುಟುಂಬ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿಭಾಯಿಸುವ ಹೊಣೆ ಪತ್ರಕರ್ತನಿಗೂ ಇದೆ ಎಂದವರು ತಿಳಿಸಿದರು.
ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸನ್ನೀ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ವಲಯ ಅರಣ್ಯಾಧಿಕಾರಿ ಇಂತಿಯಾಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು,ಪ್ರಕೃತಿ ಹಾಗೂ ಅದರ ಜೊತೆಯಾಗಿರುವ ಜೀವಜಾಲಗಳ ಉಳಿವಿಗೆ ಅರಣ್ಯ ಸಂಪತ್ತು ಅತ್ಯಗತ್ಯವಾಗಿದ್ದು,ಹಸಿರು ಉಸಿರಿನ ಮಹತ್ವವನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಪತ್ರಕರ್ತರ ಶ್ರಮ ಅಪೂರ್ವವಾದುದೆಂದು ಬಣ್ಣಿಸಿದರು.
ಕೆ.ಯು.ಡಬ್ಲ್ಯು.ಜೆ ರಾಜ್ಯ ಖಜಾಂಜಿ ಎಂ.ಓ.ವರ್ಗೀಸ್,ಪರಪ್ಪ ಅರಣ್ಯಾಧಿಕಾರಿ ಮೊಯ್ದೀನ್ ಕೆ.ಪೆರ್ಲ,ಎ.ಕೆ.ಜೇಮ್ಸ್,ರಾಜಗೋಪಾಲನ್,ಆದೂರು ವಿಭಾಗೀಯ ಜೂನಿಯರ್ ಸುಫರಿಡೆಂಟ್ ರಹ್ಮಾನ್,ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎ.ಶಾಫಿ ಮಾತನಾಡಿದರು.ನಗರದ ಶಾ.ಬಿಲ್ಡರ್ಸ್ ಅಧ್ಯಕ್ಷ ಮೊಹಮ್ಮದ್ ಸಮೀರ್,ಮೊಹಮ್ಮದ್ ಶಾಫಿ,ವಿ.ವಿ.ಪ್ರಭಾಕರನ್,ಉಣ್ಣಿಕೃಷ್ಣನ್ ಪುಷ್ಪಗಿರಿ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ರವೀಂದ್ರನ್ ರಾವಣೇಶ್ವರ ಸ್ವಾಗತಿಸಿ,ಖಜಾಂಜಿ ವಿನೋದ್ ಪಯಂ ವಂದಿಸಿದರು.ಬಳಿಕ ಪತ್ರಕರ್ತರ ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ವಿಭಿನ್ನವಾಗಿ ನಡೆದವು.ಮೇಣದಬತ್ತಿ ಉರಿಸುವುದು,ಕೇರಂ,ಚೆಸ್,ಸಂಗೀತಕುರ್ಚಿ,ಬಲಪ್ರದರ್ಶನ ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ನಡೆದವು.ಮಕ್ಕಳಿಗೆ,ಸ್ತ್ರೀಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು.ಅಪರಾಹ್ನ ಪತ್ರಕರ್ತರಿಗೆ ಅವರ ಕುಟುಂಬದವರಿಗೆ ಪರಸ್ಪರ ಪರಿಚಯ-ವಿಚಾರ ವಿನಿಮಯ ಹಾಗೂ ಪರಪ್ಪ ಅರಣ್ಯದೊಳಗೆ ತಾಸುಗಳ ಕಾಲ ಪರಿಚಯಾತ್ಮಕ ಪಯಣ,ಪಯಸ್ವನೀ ನದೀ ತಟದಲ್ಲಿ ವಿವಿಧ ಕ್ರೀಡೆಗಳು,ಪೆರಾಬೆ ತೂಗುಸೇತುವೆ ಸಂದರ್ಶನ ಮೊದಲಾದ ಕಾರ್ಯಕ್ರಮಗಳು ನಡೆದವು.ಸಂಜೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.
ಕುಟುಂಬ ಸಂಗಮದಲ್ಲಿ ಪತ್ರಕರ್ತರಾದ ಮೊಹಮ್ಮದ್ ಹಾಸೀಂಫೀಕ್ ನಸರುಲ್ಲಾ,ಅಬ್ದುಲ್ಲ ಕುಂಞಿ ಉದುಮ,ಅಬ್ದುಲ್ ರಹಮಾನ್ ಆಲೂರ್,ಎನ್.ಎ.ಖಾಲಿದ್,ಮಣಿಕಂಠನ್ ಪಾಲಿಚ್ಚಾನಡ್ಕಂ,ಸುನಿಲ್,ಶಾಜು ಪನ್ನಿಪ್ಪಾರ,ಶಾಫಿ ತೆರುವತ್,ಸುಬೈರ್ ಪಳ್ಳಿಕ್ಕಾಲ್,ಪುರುಷೋತ್ತಮ ಅಡೂರು,ದೇವೀದಾಸ್ ಪಿಲಿಕ್ಕೋಡ್,ರಾಜೇಶ್ ಮಾಂಙಡ್,ಜಾಬೀರ್ ಕುನ್ನಿಲ್,ಪ್ರದೀಪ್ ನಾರಾಯಣನ್,ಶುಕೂರ್ ಕೋಳಿಕ್ಕರ,ಕೆ.ವಿ.ಬೈಜು,ರಂಜು,ಸಮೀರ್ ವಿ.ಮೊಹಮ್ಮದ್,ಬೈಜು ಪಿಲಾತ್ತರ,ಕುಂಞಿಕಣ್ಣನ್ ಮುಟ್ಟತ್,ಪ್ರಮೋದ್ ಗಾಳಿಮುಖ, ರಾಜಶೇಖರನ್, ರವಿ.ನಾಯ್ಕಾಪು,ಅಚ್ಚುತ ಚೇವಾರು,ಶ್ರೀಕಾಂತ್ ಕಾಸರಗೋಡು,ಬಾಲಗೋಪಾಲನ್,ಕೆ.ಪದ್ಮೇಶ್,ನಾರಾಯಣನ್ ಕರಿಚ್ಚೇರಿ,ಅಸ್ಲಾಂಪೋರ್ಟ್‌ರೋಡ್,ಆಗ್ರಾ ಮೋಳ್, ದಿಲ್‌ನಾ, ಅಶೋಕನ್, ಸಾಯಿಭದ್ರಾ ರೈ, ರಾಜೇಶ್ ಓಟಮಲ,ಶೆರೀಪ್,ಪುರುಷೋತ್ತಮ ಭಟ್ ಕೆ,ಅಶ್ರಫ್,ದೇವದಾಸ್ ಪಾರೆಕಟ್ಟ,ಜಯರಾಮ.ಎ.ವಿ.ವಿನೋದ್ ಮೊದಲಾದವರು ಪಾಲ್ಗೊಂಡರು.
Click this button or press Ctrl+G to toggle between Kannada and English