ಬದಿಯಡ್ಕ: ಕತ್ತಿಯಿಂದ ಕಡಿದು ಅಣ್ಣನನ್ನು ತಮ್ಮ ಕೊಲೆಗೈದ ಪ್ರಕರಣ ನಡೆದಿದ್ದು ಆರೋಪಿಯನ್ನು ಬದಿಯಡ್ಕ ಪೋಲಿಸರು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಮುಂಡಿತ್ತಡ್ಕ ಸಮೀಪದ ಸರಳಿ ಕೊರಗಪ್ಪ ಪೂಜಾರಿಯವರ ಪುತ್ರ ವಾಸುದೇವ(35) ಕೊಲೆಗೀಡಾದ ದುರ್ದೈವಿ. ಆರೋಪಿಯಾದ ಇವರ ಸಹೋದರ ಚಂದ್ರಹಾಸ(28)ನನ್ನು ಮನೆ ಬಳಿಯ ಕಾಡಿನಿಂದ ಊರವರ ಸಹಾಯದೊಂದಿಗೆ ಬದಿಯಡ್ಕ ಪೋಲಿಸರು ಬಂಧಿಸಿ ಕೊಲೆಗೆ ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಸಿ.ಐ ತನಿಖೆ ನಡೆಸುತ್ತಿದ್ದಾರೆ.
ತರವಾಡು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವಾಸುದೇವ 7.15 ರ ವೇಳೆಗೆ ಮನೆಗೆ ತೆರಳಿದಾಗ ಅಣ್ಣ ತಮ್ಮಂದಿರ ಮಧ್ಯೆ ವಾಗ್ವಾದವಾಗಿ ಬಳಿಕ ಕತ್ತಿ ಇರಿತಕ್ಕೊಳಗಾದನ್ನೆಲಾಗಿದೆ.
ಬೊಬ್ಬೆ ಕೇಳಿ ಧಾವಿಸಿ ಬಂದ ನೆರೆಕರೆಯವರು ಗಂಭೀರ ಗಾಯಗೊಂಡಿದ್ದ ವಾಸುದೇವನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದರು. ವಾಸುದೇವರ ಕುತ್ತಿಗೆಯ ಎಡಭಾಗಕ್ಕೆ ಆಳವಾದ ಗಾಯವಾಗಿದೆ. ಮನೆಯ ಅಂಗಳ ಹಾಗೂ ಚಾವಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ.ಮನೆಯೊಳಗಡೆ ಕಪಾಟೊಂದು ಪುಡಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾಸುದೇವ , ತಂದೆ, ತಾಯಿ ಹಾಗೂ ಸಹೋದರ ಸಹೋದರಿಯರು ತರವಾಡು ಮನೆಯಿಂದ 100 ಮೀ ದೂರದ ನೂತನ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ನಿತ್ಯ ಸಹೋದರಳೊಗೆ ಜಗಳವಾಗುತ್ತಿದ್ದು, ಇವರಿಬ್ಬರೂ ಮಾನಸಿಕ ಅಸ್ವಸ್ಥರೆನ್ನಲಾಗಿದೆ. ತಂದೆಯ ಹೆಸರಿನಲ್ಲಿರುವ ಜಾಗವನ್ನು ಹಂಚಿಕೆ ಮಾಡಬೇಕು ಎಂದು ಮಕ್ಕಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು.ಮೃತ ವಾಸುದೇವ ಈ ಹಿಂದೆ ಸೀತಾಂಗೋಳಿಯ ಹೋಟೆಲ್‌ವೊಂದರಲ್ಲಿ ಕೆಲಸಕ್ಕಿದ್ದರು.
ಮೃತನಿಗೆ ತಾಯಿ,ಇಬ್ಬರು ಸಹೋದರರು ಹಾಗೂ 3ಮಂದಿ ಸಹೋದರಿಯರಿದ್ದಾರೆ. ಬದಿಯಡ್ಕ ಪೋಲಿಸರು ದೂರು ದಾಖಲಿಸಿ ಚಂದ್ರಹಾಸನನ್ನು ಬಂಧಿಸಿ ಬುಧವಾರ ನ್ಯಾಯಲಯಕ್ಕೆ ಹಾಜರು ಪಡಿಸಿದರು. ನ್ಯಾಯಲಯ ಈತನಿಗೆ ರಿಮಾಂಡ್ ವಿಧಿಸಿದೆ.
Click this button or press Ctrl+G to toggle between Kannada and English