ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿನ ಪಾವೂರು ಬಾಚಳಿಕೆ ಬಂಗಳೆ ಪ್ರದೇಶದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ವಿನೂತನ ಜೈವಕೃಷಿ ಯೋಜನೆಯನ್ನು ಜ್ಯಾರಿಗೊಳಿಸಲು ನಿಧರಿಸಿದ್ದು ಪ್ರಸ್ತುತ ಸ್ಥಳಕ್ಕೆ ಜಿಲ್ಲಾ ಪಂಚಾಯತು ಹಾಗೂ ಕಂದಾಯ ಅಧಿಕಾರಿಗಳ ನಿಯೋಗ ಭಟಿ ನೀಡಿತು.
ಕಾಸರಗೋಡು ಜಿಲ್ಲಾ ಪಂಚಾಯತಿನ ಬಹು ನಿರೀಕ್ಷೆಯ ಯೋಜನೆ ಇದಾಗಿದ್ದು, ಸಂಪೂರ್ಣವಾದ ಜೈವಕೃಷಿ ಯನ್ನೊಳಗೊಂಡ ಭತ್ತದ ಕೃಷಿ, ತರಕಾರಿ ಕೃಷಿಯನ್ನು ಅಳವಡಿಸಿ ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿನ ಸುಮಾರು 11.6 ಎಕರೆ ವಿಸ್ತಿರ್ಣದ ಸ್ಥಳವನ್ನು ಇದಕ್ಕಾಗಿ ಬಳಸಲಾಗುವುದು. ಕೃಷಿ ಸಂಘಗಳು, ಪಾಡಶೇಕರ ಸಮಿತಿ, ಆಹಾರ ಸುರಕ್ಷಾ ಸೇನೆಯನ್ನು ಉಪಯೋಗಿಸಿ ಫಲವತ್ತಾದ ಕೃಷಿ ಮಾಡಲಾಗುವ ಯೋಜನೆಯಾಗಿದ್ದು, ಇದರ ಪ್ರಾಥಾಮಿಕ ಹಂತಗಳು ಪೂರ್ತಿಗೊಂಡಿದೆ.
ಪ್ರಸ್ತುತ ಸ್ಥಳಕ್ಕೆ ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ, ಕಾಸರಗೋಡು ಎಡಿಎಂ ದಿನೇಶನ್, ಜಿಲ್ಲಾ ಪಂಚಾಯತು ಕಾರ್ಯದರ್ಶಿ ರಾಜಮೋಹನನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ನಂಬೀಶನ್ ವಿಜಯೇಶ್ವರಿ, ಸುಭಾಷ್, ಕೃಷಿ ಸಹಾಯಕ ಎಕ್ಷಿಕ್ಯೂಟಿವ್ ಇಂಜಿನಿಯರ್ ಪ್ರೀತಿ, ಕೃಷಿ ಅಸಿಸ್ಟೆಂಟ್ ಇಂಜಿನಿಯರ್ ಸುಹಾಸ್, ಅಶೋಕನ್,ಕೃಷಿ ಸಹಾಯಕ ನಿರ್ದೇಶಕ ಅಬೂಬಕ್ಕರ್, ಗ್ರಾಮಾಧಿಕಾರಿ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English