ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಕೆಡ್ಡಸ ಕೂಟ

12:47 AM, Thursday, February 11th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
tulu world

ಬದಿಯಡ್ಕ: ಆಧುನಿಕ ವಿಚಾರ ಧಾರೆಗಳಿಗೆ ಮಾರುಹೋದ ಪರಿಣಾಮ ಯುವ ಸಮೂಹ ಪ್ರಾಚೀನ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ತುಳುವಳಿಕೆಯ ಕೊರತೆ ಎದುರಿಸುತ್ತಿದೆ.ಯುವ ಸಮೂಹಕ್ಕೆ ತುಳುನಾಡಿನ ಸಾಂಸ್ಕೃತಿಕತೆಯ ಅರಿವನ್ನು ಮೂಡಿಸುವಲ್ಲಿ ಕೆಡ್ಡಸ ಆಚರಣೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ .ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಬುಧವಾರ ಸಂಜೆ ಬದಿಯಡ್ಕದಲಲಿ ನಡೆದ ಕೆಡ್ಡಸ ಕೂಟ ಕಾರ್ಯಕ್ರಮವನ್ನು ಕೆಡ್ಡಸದ ವಿಶೇಷತೆಯಾದ ನವ ಧಾನ್ಯಗಳ ಮಿಶ್ರಣ ನನ್ನೇರಿಯನ್ನು ವಿತರಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ಯುವ ಜನಾಂಗ ನೂತನ ಅವಿಷ್ಕಾರಗಳು,ಪ್ಯಾಷನ್ ಗಳಿಂದ ಮೈಮರೆತು ಪಾರಂಪರಿಕತೆಯಿಂದ ದೂರ ಸರಿಯುತ್ತಿರುವುದು ಆತಂಕಕಾರಿ.ಪ್ರಾಚೀನ ಚಿಂತನೆ,ಆಚರಣೆಗಳು ವೈಜ್ಞಾನಿಕ ಆಧಾರಗಳಿಂದ ಕೂಡಿದ್ದು,ಅವುಗಳ ನಿರ್ಲಕ್ಷ್ಯ ಅಪಾಯಕಾರಿಯೆಂದುಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಾರಂಪಾಡಿ ಗುತ್ತು ಬಾಲಕೃಷ್ಣ ರೈ ಮಾತನಾಡಿ ಭಾಷಾಭಿಮಾನ,ಸಂಸ್ಕೃತಿಯ ಅಭಿಮಾನ ನಮ್ಮಲ್ಲಿದ್ದಷ್ಟು ಬದುಕು ಭಯ ರಹಿತವಾಗಿ ಸುಗಮವಾಗುತ್ತದೆ.ಸಂಸ್ಕೃತಿ ಮರೆತ ಜೀವನ ಅಸಂತುಷ್ಠಿಯಿಂದ ಅಸಮರ್ಪಕ ನಡೆಯೆಡೆಗೆ ಸಾಗುತ್ತದೆಯೆಂದು ತಿಳಿಸಿದರು. ಕಾಸರಗೋಡಿನ ಗಡಿನಾಡಲ್ಲಿಂದು ಕನ್ನಡ ಭಾಷೆಯ ಮೇಲೆ ಸಾಂಸ್ಕೃತಿಕ ಹೊಡೆತಗಳು ಬೀಳುತ್ತಿವೆ.ಕನ್ನಡದ್ದೇ ಭಾಗವಾದ ತುಳುವಿಗೂ ಬಾಧಿಸುವ ಕಾಲ ದೂರವಿಲ್ಲವೆಂದು ತಿಳಿಸಿದ ಅವರು ಸಾಂಸ್ಕೃತಿಕ ಹಿನ್ನೆಲೆಯ ಆಚರಣೆಗಳು ನಿತ್ಯ ನಡೆಯುತ್ತಿರಬೇಕೆಂದು ತಿಳಿಸಿದರು.

ಕುಂಬ್ಡಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆನಂದ ಕೆ.ಮವ್ವಾರು,ಬದಿಯಡ್ಕ ಸಹಕಾರಿ ಕಾಲೇಜಿನ ಪ್ರಾಂಶುಪಾಲ ಶಿವದಾಸ್,ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹರೈಸಿದರು.

ಪತ್ರಕರ್ತ ಜಯ ಮಣಿಯಂಪಾರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಂತೋಷ್ ರೈ ವಂದಿಸಿದರು. ತುಳು ವರ್ಲ್ಡ್ ನ ಕಾರ್ಯದರ್ಶಿ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.ಯಶೋಧಾ ಸ್ವಾಮಿಕೃಪಾ ಪ್ರಾರ್ಥನೆ ಹಾಡಿದರು.ಕಾರ್ಯಕ್ರಮದ ಬಳಿಕ ಕೆಡ್ಡಸದ ವಿಶೇಷ ತಿನಿಸುಗಳನ್ನು ವಿತರಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English