ಬದಿಯಡ್ಕ: ಜಿಲ್ಲಾಧಿಕಾರಿಗಳು ಪಾಲ್ಗೊಂಡ ಅದಾಲತ್ ನಲ್ಲಿ ಭೂದಾಖಲೆಗಳು ಇಲ್ಲದ 7 ಪರಿಶಿಷ್ಟ ಜಾತಿ ಕುಟುಂಬಗಳಿಗೆ ಭೂ ದಾಖಲೆಗಳನ್ನು ವಿತರಿಸಲಾಯಿತು.
ಕುಟುಂಬಶ್ರೀ ಜಿಲ್ಲಾ ಮಿಶನ್ ಹಾಗೂ ಜಿಲ್ಲಾಡಳಿತಗಳ ನೇತೃತ್ವದಲ್ಲಿ ಬುಧವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಾಡು,ಪೆರಿಯಡ್ಕ,ಮಾರ್ಪನಡ್ಕ,ಕಾಡಮನೆ,ಪೆರಡಾಲ,ಮುಂಡಿತ್ತಡ್ಕ ಕಾಲೊನಿಗಳ ನೂರಾರು ಜನರು ಪಾಲ್ಗೊಂಡ ಕಾರ್ಯಕ್ರಮದಲ್ಲಿ 10ಮಂದಿಗೆ ಮನೆ ನಿರ್ಮಾಣ,ಚಿಕಿತ್ಸಾ ಸಹಾಯ ಹಾಗೂ 11 ನೂತನ ಆಧಾರ್ ಕಾರ್ಡ್‌ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.ಕಾರ್ಯಕ್ರಮದಲ್ಲಿ 150 ದೂರುಗಳನ್ನು ಪರಿಹರಿಸಲಾಯಿತು.ಜೊತೆಗೆ ಹೊಸತಾದ 70 ದೂರುಗಳನ್ನು ಸ್ವೀಕರಿಸಲಾಯಿತು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅದಾಲತ್ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸಾ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ದಂಡಾಧಿಕಾರಿ (ಎಡಿಎಂ)ಎಚ್ ದಿನೇಶನ್,ಹೆಚ್ಚುವರಿ ಜಿಲ್ಲಾಧಿಕರಿ ಡಾ.ಪಿ.ಕೆ.ಜಯಶ್ರೀ,ಕುಟುಂಬಶ್ರೀ ಜಿಲ್ಲಾ ಸಂಯೋಜಕ ಅಬ್ದುಲ್ ವಮಜೀದ್ ಚೆಂಬರಿಕೆ,ತಹಶೀಲ್ದಾರ್ ಅಂಬುಜಾಕ್ಷನ್,ಹೆಚ್ಚುವರಿ ತಹಶೀಲ್ದಾರ್ ವಿ.ಜಯರಾಜ್,ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ಯಾಂ ಪ್ರಸಾದ್ ಮಾನ್ಯ,ಅನ್ವರ್ ಓಝೋನ್,ಸದಸ್ಯರಾದ ಬಾಲಕೃಷ್ಣ ಶೆಟ್ಟಿ,ಬಿ.ಎ.ಮೊಹಮ್ಮದ್, ಜಯಶ್ರೀ,ಎಂ.ಕೆ.ಪ್ರಸನ್ನ,ಪ್ರೇಮ ಕುಮಾರಿ,ವಿಶ್ವನಾಥ ಪ್ರಭು,ಟಿ.ಜಯನ್,ಶಾಂತಾ ಮೊದಲಾದವರು ಉಪಸ್ಥಿತರಿದ್ದರು.ಸ್ಥಳೀಯಾಡಳಿತ,ಕಂದಾಯ,ನಾಗರಿಕ ಪೂರೈಕೆ,ವಿದ್ಯಾಭ್ಯಾಸ ಇಲಾಖೆ,ಆರೋಗ್ಯ ಇಲಾಖೆ,ವಿದ್ಯುತ್ ಇಲಾಖೆ,ಹಿಂದುಳಿದ ಜಾತಿ,ನೀರು ಪೂರೈಕೆ ಮೊದಲಾದ ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English