ಉಪ್ಪಳ: ಕಯ್ಯಾರು ಡೋನ್ ಬೊಸ್ಕೊ ಎಯುಪಿ ಶಾಲಾ ಇಕೋ ಕ್ಲಬ್‌ನ ನೇತೃತ್ವದಲ್ಲಿ ಅದರ ಶ್ರಮದಿಂದಾಗಿ ಒಂದು ಆಕರ್ಷಕ ಹಾಗೂ ಲಾಭದಾಯಕ ಮಾದರಿ ತರಕಾರಿ ತೋಟವನ್ನು ಶಾಲಾ ವಠಾರದಲ್ಲಿ ಬೆಳೆಸಲಾಗಿದೆ.
ವಿವಿದ ರೀತಿಯ ತರಕಾರಿಗಳಾದ ಬೆಂಡೆಕಾಯಿ, ಹಾಗಲ ಕಾಯಿ, ಕುಂಬಳ ಕಾಯಿ, ಪಡುವಲ ಕಾಯಿ, ಬದನೆ ಕಾಯಿ ಮುಂತಾದ ತರಕಾರಿಗಳು ಬೆಳೆದು ನಿಂತಿದೆ. ಈ ತರಕಾರಿಗಳನ್ನು ಮಧ್ಯಾಹ್ನದ ಊಟಕ್ಕೆ ಬಳಸಲಾಗುತ್ತಿದೆ. ಶಾಲಾ ಇಕೋ ಕ್ಲಬ್‌ನ ಸದಸ್ಯರು ತಮ್ಮ ಬಿಡುವಿನ ಸಮಯದಲ್ಲಿ ತರಕಾರಿ ತೋಟಕ್ಕೆ ಭೇಟಿ ನೀಡಿ ಅದಕ್ಕೆ ಗೊಬ್ಬರ, ನೀರು ಹಾಕುತ್ತಾರೆ ಹಾಗೂ ತರಕಾರಿಗಳು ಕೊಯ್ಯುತ್ತಾರೆ. ಇಕೋ ಕ್ಲಬ್‌ನ ಸಂಚಾಲಕಿ ಸಾಬಿದ ಟೀಚರ್ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದು,ಯುವ ಮನಸ್ಸುಗಳಿಗೆ ನಿತ್ಯೋಪಯೋಗಿ ತರಕಾರಿಗಳಂತಹ ಸರಳ ಬೆಳೆ ನಿರ್ವಹಣೆಯ ಉಮೇದು ಹತ್ತಿಸುವುದು ಒಟ್ಟು ಯೋಜನೆಯ ಉದ್ದೇಶವೆಂದು ಟೀಚರ್ ತಿಳಿಸುತ್ತಾರೆ. ಮಕ್ಕಳ ಸಾಧನೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
Click this button or press Ctrl+G to toggle between Kannada and English