ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಚೇರಿಯ ದ್ವಿತೀಯ ಅಂತಸ್ತಿನ ಉದ್ಘಾಟನೆ

11:45 PM, Sunday, February 14th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Badiyadka Club

ಬದಿಯಡ್ಕ: ಕುದ್ರೆಪ್ಪಾಡಿಯ ರಚನಾದ ಆಶಯ, ಕಾರ್ಯಚಟುವಟಿಕೆಗಳು, ಸಾಧನೆಗಳು, ಸದಸ್ಯರುಗಳ ಅರ್ಪಣಾ ಮನೋಭಾವನೆಗಳು ಶ್ಲಾಘನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಚೇರಿಯ ದ್ವಿತೀಯ ಅಂತಸ್ತಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

ಸಂಘಟನೆಗಳು ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಕಾರ್ಯಶೀಲವಾಗುವುದರ ಜೊತೆಗೆ ಶಾಂತಿ ಸೌಹಾರ್ಧತೆಗೆ ಹೆಚ್ಚು ಮಹತ್ವ ನೀಡಬೇಕು.ಯುವ ಜನರ ಸಮಗ್ರ ಶ್ರೇಯೋಭಿವೃದ್ದಿಗೆ ಉತ್ತಮ ಯೋಜನೆಗಳನ್ನು ಸಿದ್ದಪಡಿಸಬೇಕು ಎಂದು ತಿಳಿಸಿದ ಅವರು ಇದರ ಜೊತೆಗೆ ಸಂಘಟನೆ ಸಹಜವಾಗಿ ಮೇಲ್ಮಟ್ಟಕ್ಕೇರುತ್ತದೆಯೆಂದು ಹಾರೈಸಿದರು.

ಖ್ಯಾತ ಉದಯೋನ್ಮುಖ ನವ ಕನ್ನಡ ನಾಯಕ ನಟ ಪೂರವ್ ಅಂಬಾರ್ ಕಟ್ಟಡವನ್ನು ಉದ್ಘಾಟಿಸಿ ತನ್ನ ಹಾಡು ಹಾಗೂ ವಿಶಿಷ್ಟ ನೃತ್ಯದ ಮೂಲಕ ಜನರನ್ನು ರಂಜಿಸಿದರು.

ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಪೆಜತ್ತಾಯ ಕುದ್ರೆಪ್ಪಾಡಿ ಅವರನ್ನು ಕೆ.ಎನ್.ಕೃಷ್ಣ ಭಟ್ ಸಮ್ಮಾನಿಸಿದರು. ಚಿತ್ರ ನಟ ಪೂರವ್ ಅಂಬಾರ್ ಅವರನ್ನು ರಾಮಚಂದ್ರ ಪೆಜತ್ತಾಯ ಸಮ್ಮಾನಿಸಿದರು. ಕ್ಲಬ್‌ನ ಗೌರವಾಧ್ಯಕ್ಷ ಸರ್ವೇಶ್ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಫಾ.ವಿನ್ಸೆಂಟ್ ಡಿ’ಸೋಜಾ, ಪ್ರಭಾಶಂಕರ್, ಅವಿನ್, ಡಿ.ದಾಮೋದರ, ವೀಜಿ ಕಾಸರಗೋಡು, ಶ್ಯಾಮ್ ಪ್ರಸಾದ್ ಮಾನ್ಯ, ರಾಹುಲ್ ಮಾಯಿಪ್ಪಾಡಿ, ಶ್ರೀಮತಿ ಟೀಚರ್, ಪಿ.ಎಸ್.ಕೃಷ್ಣ ಭಟ್, ಕ್ಲಬ್ ಅಧ್ಯಕ್ಷ ಕಿರಣ್ ಕುದ್ರೆಪ್ಪಾಡಿ ಉಪಸ್ಥಿತರಿದ್ದು ಶುಭಹಾರೈಸಿದರು.

ಕ್ಲಬ್ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೇಶ್ಮಾ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕ್ಲಬ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಚನಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಜರಗಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English