ಗಡಿನಾಡ ಕನ್ನಡಿಗರ ಕನ್ನಡ ಸೇವೆಗೆ ಸಾವಿರ ಸಲಾಮ್

12:11 AM, Monday, February 15th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kayyara Smaramanjali

ಬದಿಯಡ್ಕ: ಕಾಸರಗೋಡು ಕನ್ನಡದ ಗಡಿಭಾಗ. ಇಲ್ಲಿ ಕನ್ನಡದ ಉಳಿವಿಗಾಗಿ, ಬೆಳೆವಿಗಾಗಿ ನಿರಂತರ ಹೋರಾಟದ ಜೀವನವನ್ನೇ ನಡೆಸಿ ಕನ್ನಡದ ಬಾವುಟವನ್ನು ಹಾರಿಸಲು ಶ್ರಮವಹಿಸಿದವರು ಕಯ್ಯಾರ ಕಿಂಞಣ್ಣ ರೈಗಳು. ಇವರು ಕೃಷಿಕರಾಗಿದ್ದುಕೊಂಡೇ ಕನ್ನಡ ತಾಯಿಯ ಸೇವೆ ಮಾಡಿದ್ದು ಗಡಿನಾಡು ಕಾಸರಗೋಡು ಪ್ರದೇಶದಲ್ಲಿರುವುದು ಇಲ್ಲಿಯ ಕನ್ನಡಿಗರಿಗೆ ಹೆಮ್ಮೆ ಮತ್ತು ಕನ್ನಡದ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಕರ್ನಾಟಕ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಎನ್.ಮೂರ್ತಿ ಅವರು ಅಭಿಪ್ರಾಯಪಟ್ಟರು.

ಇವರು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಸಂಜೆ ನಡೆದ ಕಯ್ಯಾರರಿಗೆ ಸ್ವರಾಂಜಲಿ ವಿಶೇಷ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೇರಳದ ರಾಜ್ಯದಲ್ಲಿದ್ದುಕೊಂಡೇ ಕನ್ನಡದ ಬಗ್ಗೆ ಪ್ರೀತಿ, ವಿಶ್ವಾಸ, ಕಾಳಜಿಯನ್ನಿರಿಸಿಕೊಂಡು ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುತ್ತಿರುವ ಗಡಿ ನಾಡ ಕನ್ನಡಿಗರಿಗೆ ಸಾವಿರ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ,ಮುದುಡಿ ಹೋಗುತ್ತಿರುವ ಇಂದಿನ ಸಮಾಜಕ್ಕೆ ಕವಿ ಕಯ್ಯಾರರ ಜೀವನ ಮಾರ್ಗದರ್ಶಕ.ಕೃಷಿಕನಾಗಿ,ಅಧ್ಯಾಪಕನಾಗಿ,ಕವಿಯಾಗಿ,ರಾಜಕಾರಣಿಯಗಿ,ಹೋರಾಟಗಾರನಾಗಿ ಕಯ್ಯಾರರ ಜೀವನಾದರ್ಶ ರಾಷ್ಟ್ರಕ್ಕೇ ಮಾದರಿಯೆಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಧ್ಯಕ್ಷತೆ ವಹಿಸಿದ್ದರು.,ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ ಮುದ್ದುಕೃಷ್ಣ,ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಮಸೂದ್ ಫೌಝ್‌ದಾರ್, ಕರ್ನಾಟಕದ ನಿವೃತ್ತ ಪೋಲೀಸ್ ಮಹಾ ವರಿಷ್ಠ ಕೆ.ವಿ.ಆರ್.ಠಾಗೋರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಕಯ್ಯಾರ ಕಿಞಿಣ್ಣ ರೈಗಳ ಪುತ್ರ ಪ್ರದೀಪ್ ಕುಮಾರ್ ರೈ ಕಯ್ಯಾರ್,ಅಖಿಲ ಭಾರತ ಬ್ಯಾರಿ ಪರಿಷತ್ತಿನ ಗೌರವಾಧ್ಯಕ್ಷ ಡಾ.ಮುನೀರ್ ಬಾವಾ ಹಾಜಿ, ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ ಪಜಿಲ, ನಾಟಿ ವೈದ್ಯ ಅಬ್ದುಲ್ ರಜಿಮಾನ್ ತೋಟ ಭಾಗವಹಿಸಿದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ಜಯಪ್ರಕಶ ಪಜಿಲ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ವಿನೂತನ ಶೈಲಿಯಲ್ಲಿ ನಾಡೋಜ ಕವಿ ಕಯ್ಯಾರರ ಕವನಗಳ ಗಾಯನವನ್ನು ವಿದುಷಿ ಶೀಲಾ ದಿವಾಕರ್ ಪ್ರಸ್ತುತಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English