ಮಂಗಳೂರು : ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭಾನುವಾರ ನಡೆದ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹದಿನಾಲ್ಕು ಸ್ಥಾನಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದ ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಜೆಡಿಎಸ್ ಮೂರು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
14 ಕ್ಷೇತ್ರಗಳ ಪೈಕಿ ಮೂಲ್ಕಿ, ವಾಮಂಜೂರು, ಎಡಪದವು, ಬಜಪೆ, ಬೆಳುವಾಯಿ, ಸುರತ್ಕಲ್ ಹಾಗೂ ಪುತ್ತಿಗೆ(ಕಾಂಗ್ರೆಸ್ ಬೆಂಬಲಿತ ರೈತ ಸಂಘ) ಕ್ಷೇತ್ರಗಳು ಕಾಂಗ್ರೆಸ್‌ನ ಪಾಲಾಗಿವೆ.
ಕೋಟೆಕಾರ್, ವರ್ತಕರ ಕ್ಷೇತ್ರ, ಕೃಷಿ ಮಾರುಕಟ್ಟೆ ಸಹಕಾರಿ ಸಂಘ ಹಾಗೂ ಕೃಷಿ ಸಂಸ್ಕರಣಾ ಘಟಕದಲ್ಲಿ ಬಿಜೆಪಿ ಜಯಗಳಿಸಿದೆ. ಮೂಡಬಿದ್ರೆ, ಮಂಗಳೂರು ಹಾಗೂ ಶಿರ್ತಾಡಿ ಕ್ಷೇತ್ರಗಳು ಜೆಡಿಎಸ್‌ನ ಪಾಲಾಗಿವೆ.
Click this button or press Ctrl+G to toggle between Kannada and English