ಛಲವಾದಿ ಹೋರಾಟಗಾರ ಸಿಪಿಐ(ಎಂ)ನ ಕೆ.ಯಾದವ ಶೆಟ್ಟಿ

6:38 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

Yadava Shetty

ಮೂಡಬಿದಿರೆ : ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮೀಣ ಅಬಿವೃದ್ಧಿ ಬಗ್ಗೆ ವಿಶೇಷವಾದ ಆಸಕ್ತಿ ಇರುವ ಸಿಪಿಐ(ಎಂ) ಪಕ್ಷದ ಕೆ.ಯಾದವ ಶೆಟ್ಟಿ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

21 ವರ್ಷ ಪ್ರಾಯದ ಯುವಕನಾಗಿದ್ದಾಗಲೇ ಮಂಡಲ ಪಂಚಾಯತ್ ಸದಸ್ಯನಾಗಿ ಮೂರು ಸಲ ಪಂಚಾಯತ್ ಸದಸ್ಯನಾಗಿ ಸಾಕ್ಷರತಾ ಆಂದೋಲನ ಶ್ರಮದಾನ ಆಂದೋಲನ ಗ್ರಾಮ/ವಾರ್ಡ್ ಅಭಿವೃದ್ಧಿ ಸಮಿತಿ ಮುಖಾಂತರ ಮಾಡಿದ ಕೆಲಸ ನೋಡಿ ಅಂದಿನ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಾಲಿನಿ ಗೋಯಲ್ ಸ್ಥಳದಲ್ಲೇ ಇವರಿಗೆ ಬಹುಮಾನ ಘೋಷಿಸಿದ್ದರು.

ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯನಾಗಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ಲಾರಿ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನಭವ ಇವರಿಗಿದೆ. ಸೌಹರ್ದತೆಯ ಸಮಾಜಕ್ಕಾಗಿ ಬದುಕಿನುದ್ದಕ್ಕೂ ಶ್ರಮಿಸಿರುವ ಯಾದವ ಶೆಟ್ಟಿ ಸೌಹರ್ದತೆಯ ಸಮಾಜ ನಿರ್ಮಾಣವೇ ನನ್ನ ಗುರಿಯಾಗಿದೆ ಎಂದಿದ್ದಾರೆ.

ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ 5 ಸೆಂಟ್ಸ್ ನಿಂದ ಹಿಡಿದು 5 ಎಕ್ರೆ ಸ್ಥಳವಿರುವವರಿಗೆ 80% ಕುಟುಂಬಗಳಿಗೆ ಉದ್ಯೋಗ ಖಾತರಿ, ಕ್ಷೇತ್ರದ ಎಲ್ಲಾ ಕುಟುಂಬಗಳಿಗೆ ಶುದ್ಧವಾದ ಕುಡಿಯುವ ನೀರು. ಈಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳಿಗೆ ಡಾಮರೀಕರಣ, ಮನೆ ನಿವೇಶನ ಹಕ್ಕುಪತ್ರ ಅಕ್ರಮ -ಸಕ್ರಮಕ್ಕಾಗಿ ಮತ್ತು ಕುಮ್ಕಿ ಹಕ್ಕಿಗಾಗಿ ಪ್ರಯತ್ನ ಮಾಡುವುದು ನನ್ನ ಗುರಿ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English