ಜನಪರ ಕೆಲಸಕ್ಕೆ ಸದಾ ಸಿದ್ಧವಾಗಿರುವ ತುಂಗಪ್ಪ ಬಂಗೆರಾ

6:46 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Tungappa Bangera

ಬಂಟ್ವಾಳ : ಪಿಲಾತಬೆಟ್ಟು ಮಂಡಲ ಪಂಚಾಯತ್ ಸದಸ್ಯ ಪಂಚಾಯತ್ ಉಪಾಧ್ಯಕ್ಷ ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಿಲ್ಲಾ ತೋಟಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಜಿಲ್ಲಾ ಪಂಚಾಯತ್ ಸದಸ್ಯ-ಉಪಾಧ್ಯಕ್ಷ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಹೀಗೆ ಸಮಾಜದ ಹತ್ತಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಗಾಗಿ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಎಂ.ತುಂಗಪ್ಪ ಬಂಗೇರಾ ಅವರು ಈ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಂಗಬೆಟ್ಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ನಾನು ಅಧಿಕಾರವಿದ್ದಾಗಲೂ ಇಲ್ಲದಾಗಲೂ ಸಮಾನವಾಗಿ ನನ್ನಿಂದ ಕೈಲಾದಷ್ಟು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೇ ಎಲ್ಲಾ ವರ್ಗದ ಜನತೆಯ ಶ್ರೇಯೋಭಿವ್ರದ್ಧಿಗೆ ಸ್ಪಂದಿಸಿದ್ದೇನೆ. ನನಗೆ ದೊರೆತ ಅವಕಾಶದಲ್ಲಿ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಸೇವೆ ಮಾಡಿದ್ದು ಆಡಳಿತಾವಧಿಯಲ್ಲಿ ಕ್ಷೇತ್ರದ ಜನತೆಗೆ ಕುಡಿಯುವ ನೀರು ಸಹಿತ ಮೂಲಭೂತ ಸೌಲಭ್ಯಗಳನ್ನುಒದಗಿಸಿಕೊಡುವಲ್ಲಿ ಶಕ್ತಿಮೀರಿ ಶ್ರಮಿಸಿದ್ದೇನೆ. ಊರಪರವೂರ ಬಹುತೇಕ ಸಾಮಾಜಿಕ ಸಹಕಾರಿ ಧಾರ್ಮಿಕ ಶೈಕ್ಷಣಿಕ ಸಂಘಟನೆಗಳಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಇದೀಗ ಪಕ್ಷದ ನಾಯಕರ ಅಪೇಕ್ಷೆಯಂತೆ ಕಾರ್ಯಕರ್ತರ ಬೇಡಿಕೆಯಂತೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದ ಜನತೆಯ ಸೇವೆ ಗೈಯಲು ನನಗೆ ಮತ್ತೊಮ್ಮೆ ಅವಕಾಶ ದೊರೆತಿದೆ. ಪ್ರಧಾನಿ ಮೋದಿಯವರ ಜನಪರ ಯೋಜನೆಗಳು ಕ್ಷೇತ್ರದ ಕಾರ್ಯಕರ್ತರ ಅಪರಿಮಿತ ಶ್ರಮವೇ ಗೆಲುವಿಗೆ ಪೂರಕವಾಗಲಿದೆ. ಎಲ್ಲಾ ಜನರು ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತೆ ಮಾಡುವುದೇ ನನ್ನ ಉದ್ದೇಶ ಎಂದಿದ್ದಾರೆ.

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾಗಿ ನಿರಂತರ ಜನೋಪಯೋಗಿ ಚಟುವಟಿಕೆಗಳೊಂದಿಗೆ ನಮ್ಮ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿ ರೂಪುಗೊಂಡಿದೆ. ಜಿಲ್ಲಾ ಮಟ್ಟದ ಕ್ರೀಡೋತ್ಸವ ಜಿಲ್ಲಾ ಮಟ್ಟದ ಯುವಜನಮೇಳ, ಜಿಲ್ಲಾ ಮಟ್ಟದ ಆರೋಗ್ಯ ಮೇಳ, ಜಿಲ್ಲಾ ಮಟ್ಟದ ನಾಟಕೋತ್ಸವ, ಸಾಮೂಹಿಕ ವಿವಾಹ ಸಮಾರಂಭ, ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ, ಪ್ರಧಾನ ಬಡವರಿಗೆ ಮನೆಯ ವ್ಯವಸ್ಥೆ ಮದುವೆಗೆ ನೆರವು, ಆರ್ಥಿಕ ದುರ್ಬಲರಿಗೆ ಸಹಾಯಧನ ಅರ್ಹ ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಯುವಕರ ಸಂಘಟನೆಯೊಂದಿಗೆ ನಡೆಸಲಾಗುತ್ತಿದೆ ಮುಂದೆಯೂ ಈ ಸೇವೆ ಮುಂದುವರಿಯಲಿದೆ ಎಂದು ಎಂ.ತುಂಗಪ್ಪ ಬಂಗೇರಾ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English