ಯಶಸ್ವಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂಎಸ್ ಮೊಹಮ್ಮದ್ ಮುಂದಿದೆ ಗೆಲುವು…

6:57 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 5 votes)
Loading...

MS mohammed

ವಿಟ್ಲ : ಪುಣಚ ಗ್ರಾಮದ ಮಣಿಲ ಎಂಬಲ್ಲಿ ಮಧ್ಯಮ ವರ್ಗದಲ್ಲಿ ಹುಟ್ಟಿದ ಎಂಎಸ್ ಮೊಹಮ್ಮದ್ ಅವರದ್ದು ಬಾಲ್ಯದಿಂದಲೂ ನಾಯಕತ್ವದ ಗುಣ. ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಗುರುತಿಸಿಕೊಂಡಿದ್ದ ಇವರಿಗೆ ಪಕ್ಷ ಕೂಡ ಯೋಗ್ಯ ಸ್ಥಾನಮಾನ ನೀಡಿ ಗೌರವಿಸಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿರುವ ಎಂಎಸ್ ಮೊಹಮ್ಮದ್ ಅವರ ಸಕ್ರಿಯ ರಾಜಕೀಯ ನಡೆಗಳನ್ನು ಗುರುತಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿಯನ್ನಾಗಿ ಮಾಡಿದರು. ಬಳಿಕ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿದ ಹಿರಿಯ ಮುಖಂಡರು ಮಾಣಿ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಅಲ್ಲಿ ಚುನಾವಣೆಯಲ್ಲಿ ಗೆದ್ದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಾಗುವ ಅವಕಾಶ ಸಿಕ್ಕಿತು. ಆಗ ಜಿಲ್ಲೆಯಲ್ಲಿಯೇ ಯಶಸ್ವಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎನ್ನುವ ಗೌರವಕ್ಕೆ ಪಾತ್ರರಾಗುವಂತೆ ಕೆಲಸ ನಿರ್ವಹಿಸಿದರು.

ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೊಳ್ನಾಡು ಪಂಚಾಯತ್ ನಲ್ಲಿ ಸ್ಪರ್ಧಿಸಲು ಬಿ.ರಮಾನಾಥ ರೈ ಅವರು ಸೂಚಿಸುವ ಮೂಲಕ ಎಂಎಸ್ ಮೊಹಮ್ಮದ್ ಅವರ ಮೇಲಿಟ್ಟ ವಿಶ್ವಾಸ ನಮಗೆ ಗೊತ್ತಾಗುತ್ತದೆ. ಎಲ್ಲಿ ನಿಂತರೂ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಗೆಲ್ಲುವ ಕುದುರೆಯಾಗಿರುವ ಎಂಎಸ್ ಮೊಹಮ್ಮದ್ ಕಳೆದ ಐದು ವರ್ಷಗಳಲ್ಲಿ ತನ್ನ ಕ್ಷೇತ್ರಕ್ಕೆ ಬಂದ ಅನುದಾನವನ್ನು ಸಮರ್ಥವಾಗಿ ಬಳಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಯಶಸ್ವಿ ಜಿಲ್ಲಾ ಪಂಚಾಯತ್ ಸದಸ್ಯ ಎನ್ನುವ ಬಿರುದನ್ನು ಕೂಡ ಸಂಪಾದಿಸಿದ್ದಾರೆ. ಕರ್ನಾಟಕ ಸರಕಾರದ ಯೋಜನೆಗಳ ಆಧಾರದ ಮೇಲೆ ಮತ ಕೇಳಿರುವ ಎಂಎಸ್ ಮೊಹಮ್ಮದ್ ಅವರಿಗೆ ಕೊಳ್ನಾಡು ಸುಲಭವಾಗಿ ಒಲಿಯುವ ಕ್ಷೇತ್ರವೆಂದರೆ ತಪ್ಪಲ್ಲ. ಜಾತಿ, ಮತ ಭೇದವಿಲ್ಲದೆ ಕೆಲಸ ಮಾಡುವ ಎಂಎಸ್ ಮೊಹಮ್ಮದ್ ಅವರಿಗೆ ಎಲ್ಲಾ ಧರ್ಮಿಯರ ಜನಪ್ರತಿನಿಧಿ ಎನ್ನುವ ಹೆಗ್ಗಳಿಕೆ ಇದೆ. ರಮಾನಾಥ ರೈ ಅವರ ಆರ್ಶೀವಾದ ಇವರನ್ನು ದಡ ಸೇರಿಸುವುದಕ್ಕೆ ಕ್ಷಣಗಣನೆ ಬಾಕಿ ಇದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English