ಉತ್ತಮ ಆಡಳಿತ ನಿರ್ವಹಣೆಯ ಸಮರ್ಥ ನಾಯಕಿ ಕೆ.ಟಿ ಶೈಲಜಾ ಭಟ್

7:26 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Shailaja Bhat

ಬಂಟ್ವಾಳ : ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 15 ನೇ ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಭರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕೆ.ಟಿ ಶೈಲಜಾ ಭಟ್ ಇವರು ಸ್ಪರ್ಧಿಸುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಹಾಸ್ಯಗಾರ ದಿ. ಕೊಡಕ್ಕಲು ಗೋಪಾಲ ಕೃಷ್ಣ ಭಟ್‌ರವರ ಸುಪುತ್ರಿಯಾದ ಇವರು ಶ್ರೀ.ಕೆ.ಎಂ. ತಿರುಮಲೇಶ್ವರ ಭಟ್ ಕೊಂಕೋಡಿ ಮನೆ ಇವರ ಧರ್ಮಪತ್ನಿಯಾಗಿರುತ್ತಾರೆ ಬಿ.ಎ ವಿದ್ಯಾರ್ಥಿನಿ ದೆಸೆಯಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇದರ ಸಕ್ರೀಯ ಕಾರ್ಯಕರ್ತೆಯಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೈಕ್ಷಣಿಕ ಸಮಸ್ಯೆಗಳ ವಿರುದ್ದ ಸಕ್ರೀಯವಾದ ಹೋರಾಟವನ್ನು ನಡೆಸಿರುತ್ತಾರೆ. ಸಾಮಾಜಿಕವಾಗಿ ಇಡ್ಕಿದ್ದು ಗ್ರಾಮದ ಕೋಲ್ಪೆಯಲ್ಲಿ ಹಿಂದೂ ಸೇವಾ ಪ್ರತಿಷ್ಟಾನ ನಡೆಸುತ್ತಿರುವ ವಿಕಾಸ ಬಾಲ ಮಂದಿರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ರಾಜಕೀಯವಾಗಿ ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯೆಯಾಗಿ ತದ ನಂತರ ಅಧ್ಯಕ್ಷೆಯಾಗಿ ನೀರಿಂಗಿಸುವ ಕಾರ್ಯಕ್ರಮದ ಮೂಲಕ ಇಡ್ಕಿದು ಗ್ರಾಮ ಪಂಚಾಯತನ್ನು ಜಿಲ್ಲೆ ಹಾಗೂ ರಾಜ್ಯದಲ್ಲಿಯೇ ಪ್ರಸಿದ್ಧಿಯ ಗ್ರಾಮ ಪಂಚಾಯತ್ ಆಗುವಲ್ಲಿ ಶ್ರಮಿಸಿರುತ್ತಾರೆ. 5 ವರ್ಷಗಳ ಕಾಲ ಬಂಟ್ವಾಳ ಎ.ಪಿ.ಎಂ.ಸಿ ಯ ಸದಸ್ಯರಾಗಿರುತ್ತಾರೆ. ಬಳಿಕ ವಿಟ್ಲ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾಗಿ ಪ್ರಥಮ ಅವಧಿಯಲ್ಲಿಯೇ ಜಿಲ್ಲಾ ಪಂಚಾಯತ್ ಅಧಕ್ಷೆಯಾಗಿ ಆಯ್ಕೆ. ಈ ಸಂದರ್ಭದಲ್ಲಿ ಜಿಲ್ಲೆಗೆ ವಿಶೇಷ ರೂ.10 ಕೋಟಿ ಅನುದಾನ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿವೇಚನಾ ನಿಧಿ ರೂ.3 ಕೋಟಿಯನ್ನು ಸಮರ್ಪಕವಾಗಿ ಬಳಸಿಕೊಂಡು ಪಕ್ಷಬೇಧ ಮರೆತು ಎಲ್ಲಾ ಕ್ಷೇತ್ರಗಳಿಗೆ ವಿಂಗಡಿಸಿದ ಖ್ಯಾತಿ ಇವರದು ಅಲ್ಲದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಯತ್ನ ಕುಡಿಯುವ ನೀರು ಹಾಗೂ ಇತರ ಅನುದಾನಗಳಲ್ಲಿ ಒಟ್ಟು 300 ಕೋಟಿ ರೂಪಾಯಿಗಳ ಅನುದಾನವನ್ನು ದ.ಕ ಜಿಲ್ಲೆಗೆ ಸಮರ್ಪಕವಾಗಿ ಬಳಕೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದಾಗ ಮುಖ್ಯಮಂತ್ರಿ ಶ್ರೀ.ಬಿ.ಎಸ್ ಯಡಿಯೂರಪ್ಪನವರಿಂದ ರಾಜ್ಯ ನೈರ್ಮಲ್ಯ ಪುರಸ್ಕಾರ. ರಾಜ್ಯದಲ್ಲಿ ಪ್ರಥಮ ಸ್ಥಾನ ರಾಷ್ಟ್ರಪತಿ ಪ್ರತಿಭಾ ಪಾಟೇಲರಿಂದ ರಾಷ್ಟ್ರಮಟ್ಟದ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಪಂಚಾಯತ್ ರಾಜ್ ಸಚಿವ ಜೈರಾಮ್ ರಮೇಶ್ ರವರಿಂದ ಪಂಚಾಯತ್ ಸಶಕ್ತೀಕರಣ ಪುರಸ್ಕಾರ. ಪಾರದರ್ಶಕ ಹಾಗೂ ಉತ್ತಮ ಆಡಳಿತಕ್ಕಾಗಿ ಒಟ್ಟು ರೂ.1 ಕೋಟಿ 5 ಲಕ್ಷದ ಪ್ರಶಸ್ತಿ ಮೊತ್ತವನ್ನು ಜಿಲ್ಲಾ ಪಂಚಾಯತ್‌ಗೆ ಗಳಿಸಿಕೊಟ್ಟ ಖ್ಯಾತಿ ಇವರದ್ದು.

ಸಂಘಟನಾತ್ಮಕವಾಗಿ 3 ವರ್ಷಗಳ ಕಾಲ ಬಿ.ಜೆ.ಪಿ ಯ ಪುತ್ತೂರು ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕೆ, 3 ವರ್ಷಗಳ ಕಾಲ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ, ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿಯಾಗಿ 3 ವರ್ಷಗಳ ಕಾಲ ಸೇವೆ, ಪ್ರಸ್ತುತ್ತ 3 ವರ್ಷಗಳಿಂದ ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಥವಾಗಿ ಪಕ್ಷ ಸಂಘಟನೆಯನ್ನು ಮಾಡುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English