ಸಲಿಲಸಲಿಲ ಜಲ ಧಾರೆ- ಅದರಿಲ್ಲಿ ಬಾವಿಗೆ ಮಣ್ಣಿನ ಧಾರೆ

8:48 PM, Sunday, February 21st, 2016
Share
1 Star2 Stars3 Stars4 Stars5 Stars
(5 rating, 6 votes)
Loading...
mogral

ಕುಂಬಳೆ: ಶತಮಾನಗಳಿಂದ ನೂರಾರು ಜನರಿಗೆ ನೀರುಣಿಸುತ್ತಿದ್ದ ಸಾರ್ವಜನಿಕ ಬಾವಿಯೊಂದಕ್ಕೆ ಮಣ್ಣು ತುಂಬಿಸಿ ಮುಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೊಗ್ರಾಲ್ ಪೇರಾಲ್ ರಸ್ತೆ ಅಭಿವೃದ್ದಿಯ ಹೆಸರಲ್ಲಿ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿರುವ ಬಾವಿಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ.

1913ರಲ್ಲಿ ಸಾರ್ವಜನಿಕರಿಗೆ,ದಾರಿ ಹೋಕರಿಗೆ ನೀರಡಿಕೆಯನ್ನು ತಣಿಸಲು ಅಂದಿನ ಆಡಳಿತ ನಿರ್ಮಿಸಿದ್ದ ಶತಮಾನದ ಬಾವಿಯನ್ನು ಅಭಿವೃದ್ದಿಯ ಹೆಸರಲ್ಲಿ ಮುಚ್ಚಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರಾಕೃತಿಕ ಅಸಮತೋಲನದಿಂದ ಹದಗೆಟ್ಟ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ಕುಸಿಯುತ್ತಿರುವ ನೀರ ಸೆಲೆಗಳ ತೀವ್ರ ಆತಂಕಕಾರಿ ಸ್ಥಿತಿಯಲ್ಲೂ ಅಭಿವೃದ್ದಿಗೋಸ್ಕರ ಇಂತಹ ಹಾನಿಕಾರಕ ಕ್ರಮಗಳಿಗೆಳಸುವ ಆಡಳಿತ ವ್ಯವಸ್ಥೆಗೆ ಏನೆನ್ನಬೇಕೆಂಬುದು ಬಡ ಜನ ಸಾಮಾನ್ಯನ ಪ್ರಶ್ನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English