ಬಂಟ್ವಾಳ: ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ.ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಮೇಲುಗೈ ಸಾಧಿಸಿದೆ.ತಾಲೂಕು ಪಂಚಾಯತ್‍ನ 34 ಸ್ಥಾನಗಳ ಪೈಕಿ ಕಾಂಗ್ರೆಸ್ಸ್ 23 ಹಾಗೂ ಬಿಜೆಪಿ 11ರಲ್ಲಿ ಗೆಲುವು ಸಾಧಿಸಿದ್ದು, ಜಿ.ಪಂ.ನ 9 ಕ್ಷೇತ್ರಗಳ ಪೈಕಿ ಕಾಂಗ್ರೆಸ್ಸ್ 5 ಹಾಗೂ ಬಿಜೆಪಿ 4 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದೆ. ಬಂಟ್ವಾಳ ತಾಲೂಕು ಪಂಚಾಯತ್ ಆಡಳಿತ ಕೈ ವಶವಾಗಿದೆ.
ಜಿ.ಪಂ. ಕ್ಷೇತ್ರ: ಸಂಗಬೆಟ್ಟು – ತುಂಗಪ್ಪ ಬಂಗೇರ(ಬಿಜೆಪಿ), ಸರಪಾಡಿ- ಪದ್ಮಶೇಖರ್ ಜೈನ್(ಕಾಂಗ್ರೆಸ್), ಪುದು-ರವೀಂದ್ರ ಕಂಬಳಿ(ಬಿಜೆಪಿ), ಗೋಳ್ತಮಜಲು-ಕಮಲಾಕ್ಷಿ ಪೂಜಾರಿ(ಬಿಜೆಪಿ), ಮಾಣಿ – ಮಂಜುಳಾ ಮಾಧವ ಮಾವೆ(ಕಾಂಗ್ರೆಸ್), ಕೊಳ್ನಾಡು-ಎಂ.ಎಸ್.ಮಹಮ್ಮದ್(ಕಾಂಗ್ರೆಸ್), ಕುರ್ನಾಡು-ಮಮತಾಗಟ್ಟಿ(ಕಾಂಗ್ರೆಸ್), ಸಜಿಪಮುನ್ನೂರು -ಚಂದ್ರಪ್ರಕಾಶ ಶೆಟ್ಟಿ (ಕಾಂಗ್ರೆಸ್),ಪುಣಚ-ಜಯಶ್ರೀ ಕೋಡಂದೂರು(ಬಿಜೆಪಿ).
ತಾ.ಪಂ.ಕ್ಷೇತ್ರ: ಸಂಗಬೆಟ್ಟು -ಪ್ರಭಾಕರ ಪ್ರಭು(ಕಾಂಗ್ರೆಸ್), ಚೆನ್ನೈತ್ತೋಡಿ- ರತ್ನಾವತಿ ಜಯರಾಮ ಶೆಟ್ಟಿ(ಕಾಂಗ್ರೆಸ್), ಪಿಲಾತಬೆಟ್ಟು-ರಮೇಶ್ ಕುಡ್ಮೇರು(ಬಿಜೆಪಿ), ರಾಯಿ-ಮಂಜುಳಾ ಸದಾನಂದ(ಕಾಂಗ್ರೇಸ್),
ಪಂಜಿಕಲ್ಲು-ಪದ್ಮಾವತಿ ವಿ ಪೂಜಾರಿ(ಕಾಂಗ್ರೆಸ್), ಅಮ್ಟಾಡಿ-ಮಲ್ಲಿಕಾ ವಿ ಶೆಟ್ಟಿ(ಕಾಂಗ್ರೆಸ್), ಕಾವಳ ಮೂಡೂರು- ಧನಲಕ್ಷ್ಮೀ ಸಿ ಬಂಗೇರ(ಕಾಂಗ್ರೇಸ್), ಉಳಿ-ಬೇಬಿ(ಕಾಂಗ್ರೆಸ್), ಸರಪಾಡಿ-ಸ್ವಪ್ನ ವಿಶ್ವನಾಥ ಪೂಜಾರಿ(ಕಾಂಗ್ರೆಸ್), ಕರಿಯಂಗಳ-ಯಶವಂತ ಪೂಜಾರಿ(ಬಿಜೆಪಿ),
ಅಮ್ಮುಂಜೆ-ಶಿವಪ್ರಸಾದ್ ಕನಪಾಡಿ(ಕಾಂಗ್ರೆಸ್), ತುಂಬೆ-ಗಣೇಶ್ ಸುವರ್ಣ( ಬಿಜೆಪಿ), ನರಿಕೊಂಬು-ಗಾಯತ್ರಿ ರವೀಂದ್ರ ಸಫಲ್ಯ(ಕಾಂಗ್ರೆಸ್), ಪುದು-ಪದ್ಮಶ್ರೀ ದುರ್ಗೇಶ್ ಶೆಟ್ಟಿ(ಕಾಂಗ್ರೆಸ್), ಸಜಿಪಮುನ್ನೂರು-ನಸೀಮ ಬೇಗಂ(ಕಾಂಗ್ರೆಸ್),
ಕಡೇಶ್ವಾಲ್ಯ-ರಘು ಮಲ್ಲಡ್ಕ (ಬಿಜೆಪಿ),ಬಾಳ್ತಿಲ- ಲಕ್ಷ್ಮೀ ಗೋಪಾಲಾಚಾರ್ಯ (ಬಿಜೆಪಿ), ವೀರಕಂಭ-ಗೀತಾ ಚಂದ್ರಶೇಖರ(ಬಿಜೆಪಿ), ಸಜಿಪಮೂಡ- ಸಂಜೀವ ಪೂಜಾರಿ( ಕಾಂಗ್ರೆಸ್), ಸಜಿಪಪಡು-ಸವಿತ ಹೇಮಂತ ಕರ್ಕೇರಾ(ಕಾಂಗ್ರೆಸ್), ಗೋಳ್ತಮಜಲು- ಮಹಾಬಲ ಆಳ್ವ(ಬಿಜೆಪಿ),
ಕುರ್ನಾಡು- ನವೀನ ಪೂಜಾರಿ(ಬಿಜೆಪಿ), ಬಾಳೆಪುಣಿ-ಹೈದರ್ ಕೈರಂಗಳ(ಕಾಂಗ್ರೆಸ್), ಮಂಚಿ- ಅಬ್ಬಾಸ್ ಅಲಿ(ಕಾಂಗ್ರೆಸ್), ಮಾಣಿ- ಮಂಜುಳಾ ಕುಶಲ( ಕಾಂಗ್ರೆಸ್), ಕೆದಿಲ-ಆದಂ ಕುಂಞ(ಕಾಂಗ್ರೆಸ್), ವಿಟ್ಲಪಡ್ನೂರು-ಶೋಭಾ ರೈ (ಕಾಂಗ್ರೆಸ್), ಇಡ್ಕಿದು- ವನಜಾಕ್ಷಿ ಬಿ.(ಬಿಜೆಪಿ), ಕೊಳ್ನಾಡು-ನಾರಾಯಣ ಶೆಟ್ಟಿ ಕಲ್ಯಾರು(ಬಿಜೆಪಿ), ನರಿಂಗಾಣ-ಚಂದ್ರಹಾಸ ಕರ್ಕೇರಾ(ಕಾಂಗ್ರೆಸ್), ಕನ್ಯಾನ- ಕುಮಾರ ಭಟ್ ಬದಿಕೋಡಿ(ಕಾಂಗ್ರೆಸ್), ಕರೋಪಾಡಿ- ಉಸ್ಮಾನ್ ಕರೋಪಾಡಿ( ಕಾಂಗ್ರೆಸ್), ಪೆರುವಾಯಿ-ಮನೋಜ್ ಕುಮಾರ್(ಕಾಂಗ್ರೆಸ್), ಪುಣಚ- ಕವಿತಾ ಎಸ್.ನಾಯಕ್(ಬಿಜೆಪಿ).
ಸಜಿಪಮುನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ರಕಾಶ ಶೆಟ್ಟಿಯವರು ಬಿಜೆಪಿಯ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಿರುದ್ದ 2 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತನ್ಮೂಲಕ ಪ್ರಕಾಶ್ ಶೆಟ್ಟಿಯವರು ಎರಡನೇ ಬಾರಿಗೆ ಜಿಪಂ ಪ್ರವೇಶ ಪಡೆದಿದ್ದಾರೆ. ಸರಪಾಡಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮನಾಭ ಜೈನ್ ಅವರು ತಾಲೂಕಿನಲ್ಲೇ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ತಾಲೂಕಿನಲ್ಲಿಯೂ ಅತೀಹೆಚ್ಚು ನೋಟ ಚಲಾವಣೆಯಾಗಿದೆ.
Click this button or press Ctrl+G to toggle between Kannada and English