ಮಂಜೇಶ್ವರ: 1940ರಲ್ಲಿ ಕೇವಲ 14 ಮಂದಿ ಸದಸ್ಯರು ಮತ್ತು ರೂ.535 ಪಾಲು ಬಂಡವಾಳದೊಂದಿಗೆ ಸ್ಥಾಪನೆಗೊಂಡ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ 2015 ರಲ್ಲಿ 7500 ಸದಸ್ಯರನ್ನು ಹೊಂದಿ ರೂ.93 ಲಕ್ಷ ಪಾಲು ಬಂಡವಾಳ ಹೊಂದಿದೆ. 82 ಕೋಟಿ ಠೇವಣಿ ಸಂಗ್ರಹವಾಗಿದ್ದು ಒಟ್ಟು ದುಡಿಯುವ ಬಂಡವಾಳ 94 ಕೋಟಿಯನ್ನು ಮೀರಿದೆ. ಬ್ಯಾಂಕ್ ಕ್ಷಿಪ್ರಗತಿಯಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿದ್ದು ಕಳೆದ 10 ವರ್ಷಗಳಿಂದ ನಿರಂತರವಾಗಿ ಲಾಭಗಳಿಸುತ್ತಿದ್ದು ಬ್ಯಾಂಕಿನ ದಕ್ಷ ನಿರ್ವಹಣೆ, ಕರ್ತವ್ಯ ಬದ್ಧತೆಗೆ ಉದಾಹರಣೆ. ಬ್ಯಾಂಕ್ ಎ ತರಗತಿ ಸಹಕಾರಿ ಸಂಘವಾಗಿ ಇಲಾಖೆಯಿಂದ ಗುರುತಿಸಲ್ಪಟ್ಟಿದೆ ಹಾಗೂ ತನ್ನ ಸದಸ್ಯರಿಗೆ 2014-15 ನೇ ಸಾಲಿಗೆ ಶೇ.25 ಡಿವಿಡೆಂಡ್ ಘೋಷಿಸಿದೆ.
ಜನಪ್ರಿಯ ಪ್ರಾದೇಶಿಕ ನಾಯಕರಾಗಿದ್ದ ಅಮೃತಕೃಷ್ಣ ರಾವ್‌ರಿಂದ ಪ್ರಾರಂಭಿಸಲ್ಪಟ್ಟ ಬ್ಯಾಂಕ್ ಆ ಬಳಿಕ ಜನಪ್ರಿಯ ಶಾಸಕ ರಾಮಪ್ಪ ಮಾಸ್ಟರರ ಅಧಿಕಾರ ವ್ಯಾಪ್ತಿಗೆ ಬಂತು. ಪ್ರಬಲ ಸೈದ್ಧಾಂತಿಕವಾದಿಯೂ ಅನುಭವಿ ರಾಜಕಾರಣಿಯೂ ಆಗಿದ್ದ ಎಂ.ರಾಮಪ್ಪ ಮಾಸ್ಟರರು ತಮ್ಮ ರಾಜಕೀಯ ಆಪ್ತರಾಗಿದ್ದ ಡಾ.ಸುಬ್ಬರಾವ್‌ರೊಂದಿಗೆ ಈ ಬ್ಯಾಂಕನ್ನು ಬಹಳ ಶಿಸ್ತುಬದ್ಧವಾಗಿ ಬೆಳೆಸಿದರು. ದೀರ್ಘಕಾಲ ಬ್ಯಾಂಕ್ ಆಧ್ಯಕ್ಷರಾಗಿದ್ದ ಇವರು ಜಿಲ್ಲೆಯಲ್ಲೇ ಬ್ಯಾಂಕನ್ನು ಪ್ರಥಮ ಸ್ಥಾನದಲ್ಲಿ ಮುನ್ನಡೆಯುವಂತೆ ಮಾಡಿದರು. ಮಾಜಿ ಸಚಿವರಾಗಿದ್ದ ಡಾ.ಸುಬ್ಬರಾವ್‌ರವರು ಬ್ಯಾಂಕ್ ಆಧ್ಯಕ್ಷರಾಗಿ ಬ್ಯಾಂಕಿನ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರು. ರಾಮಪ್ಪ ಮಾಸ್ಟರರ ನಿಧನಾನಂತರ ಕೆಲಕಾಲ ಬ್ಯಾಂಕಿನ ಆಧ್ಯಕ್ಷರಾಗಿದ್ದ ಬಿ.ಎಂ.ಅಹಮ್ಮದ್ ಕುಂಞಿ ಹಾಜಿಯವರು ಬ್ಯಾಂಕಿನ ಸರ್ವತೋಮುಖ ಆಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ. ಇವರ ಮರಣಾನಂತರ ಬ್ಯಾಂಕಿನ ಆಡಳಿತ ಚುಕ್ಕಾಣಿಯು ಸರಕಾರಿ ಸೇವಾವಧಿಯಲ್ಲೇ ಆತ್ಯಂತ ದಿಟ್ಟ ಪ್ರಾಮಾಣಿಕ ಮತ್ತು ದೂರದೃಷ್ಟಿಯುಳ್ಳ ಅಧಿಕಾರಿಯೆಂದು ಗುರುತಿಸಲ್ಪಟ್ಟು ನಿವೃತ್ತರಾಗಿದ್ದ ಹಾಲಿ ಆಧ್ಯಕ್ಷ ಬಿ.ಎಂ.ಅನಂತರವರ ಕೈಗೆ ಬಂತು.ದೃಡ ಮತ್ತು ದೂರದರ್ಶಿ ತೀರ್ಮಾನಗಳು ಹಾಗೂ ವರ್ತಮಾನಕ್ಕೆ ಅನುಸರಿಸಿ ಬದಲಾವಣೆಗಳು. ನೌಕರರೊಂದಿಗಿನ ಸಹಕಾರ, ಎಲ್ಲಾ ವರ್ಗ ಪಂಗಡ ರಾಜಕೀಯ ವ್ಯಕ್ತಿಗಳಿಗೆ ಮುಕ್ತ ಬ್ಯಾಂಕ್ ವ್ಯವಹಾರ ಮತ್ತು ಸದಸ್ಯತ್ವಕ್ಕೆ ಅವಕಾಶ ಇದರಿಂದಾಗಿ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಇಂದು ಒಂದು ಜನಪರ ಬ್ಯಾಂಕ್ ಆಗಿ ಗುರುತುಸಲ್ಪಟ್ಟಿದೆ.
ಬ್ಯಾಂಕಿನ ಕಾರ್ಯವ್ಯಾಪ್ತಿ 5 ಗ್ರಾಮಗಳನ್ನೊಳಗೊಂಡು ಐದು ಶಾಖೆಗಳನ್ನು ಹೊಂದಿ ಸುಸಜ್ಜಿತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಬ್ಯಾಂಕಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣ ಗಣಕೀಕರಣಗೊಳಿಸಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಬ್ಯಾಂಕಿನ ಪ್ರಧಾನ ಕಚೇರಿ ಮತ್ತು ಎಲ್ಲಾ ಶಾಖೆಗಳಲ್ಲಿ ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್ ಸೌಲಭ್ಯ, ಹೊಸಂಗಡಿ, ಉದ್ಯಾವರ ಮತ್ತು ಬಡಾಜೆ ಶಾಖೆಗಳಲ್ಲಿ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬ್ಯಾಂಕಿನ ಎಲ್ಲಾ ಶಾಖೆಗಳ ಭದ್ರತೆಯ ಹಿತದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ, ಸೈರನ್ ವ್ಯವಸ್ಥೆ ಅಳವಡಿಸಲಾಗಿದೆ. ಕೋಯರ್ ಫೆಡ್ ಸಂಸ್ಥೆಯೊಂದಿಗಿನ ವ್ಯವಹಾರ ಒಪ್ಪಂದ ಆ ಸಂಸ್ಥೆಯ ಉತ್ಪನ್ನಗಳ ಮಾರಾಟ, ಸಂಸ್ಥೆಗೆ ಮತ್ತು ಜನರಿಗೆ ಬಹು ಉಪಕಾರಿಯಾಗಿದೆ. ಎಲ್ಲಾ ತರದ ಠೇವಣಿಗಳು, ಠೇವಣಿ ಖಾತರಿ ವಿಮಾ ಯೋಜನೆಗೆ ಒಳಪಟ್ಟಿದೆ. ತನ್ನ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ಠೇವಣಿ ಆಧಾರಿತ ಸಾಲ, ಜಮೀನು ಸಾಲ. ವೇತನ ಆಧಾರಿತ ಸಾಲ, ಗೃಹೋಪಯೋಗಿ ವಸ್ತು ಖರೀದಿ ಸಾಲ, ಸ್ವ ಸಹಾಯ ಸಂಘಗಳಿಗೆ ಸ್ವ ಉದ್ಯೋಗ ಸಾಲ, ಜಮೀನು ಆಡವು ಸಾಲಗಳಲ್ಲಿ ಗೃಹ ನಿರ್ಮಾಣ, ಗೃಹ ರಿಪೇರಿ, ಉದ್ಯಮ ಸಾಲಗಳನ್ನು ಅಳವಡಿಸಿಕೊಳ್ಳಲಾಗಿದೆ ಹಾಗೂ ಸರಕಾರ ನಿರ್ದೇಶಿಸಿದ ಸ್ಕೀಂ ಸಾಲಗಳನ್ನು ಯೋಗ್ಯ ರೀತಿಯಲ್ಲಿ ಪೂರೈಸಲು ಪ್ರಯತ್ನಿಸುತ್ತಿದೆ. ಎಲ್ಲಾ ಎ ಕ್ಲಾಸ್ ಸದಸ್ಯರಿಗೆ ಅಪಘಾತ ವಿಮಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್‌ದಾರರಿಗೆ ವಿಮೆ ಯೋಜನೆ, ರಿಸ್ಕ್ ಫಂಡ್ ಯೋಜನೆ ಹಾಗೂ ಠೇವಣಿ ವಿಮಾ ಗ್ಯಾರಂಟಿ ಯೋಜನೆಯನ್ನು ಕಲ್ಪಿಸಲಾಗಿದೆ. ಮಂಜೇಶ್ವರ ಪಂಚಾಯತ್‌ನ ಹೃದಯ ಭಾಗವಾದ ಹೊಸಂಗಡಿಯಲ್ಲಿ ದಿನಪೂರ್ಣ ಬ್ಯಾಂಕ್ ವ್ಯವಹಾರಕ್ಕಾಗಿ ವಿಶೇಷ ಶಾಖೆ ಪ್ರಾರಂಭಿಸಿದ್ದು ಇದು ಆತ್ಯಂತ ಯಶಸ್ವಿಯಾಗಿರುತ್ತದೆ. ಕುಂಜತ್ತೂರು ಪ್ರದೇಶದಲ್ಲಿ ಸದ್ಯದಲ್ಲಿಯೇ ಸಾಮಾನ್ಯ ಶಾಖೆ ತೆರೆಯುವ ಉದ್ದೇಶವಿದೆ.
ಬ್ಯಾಂಕು 2015 ರಲ್ಲಿ ತನ್ನ 75 ವರ್ಷಗಳ ಸಾರ್ಥಕ ಸೇವೆಯೊಂದಿಗೆ ಆಮೃತ ಮಹೋತ್ಸವ ಆಚರಿಸಿದೆ. ಕಾಸರಗೋಡು ಜಿಲ್ಲೆಯಲ್ಲಿಯೇ ಜನಪ್ರಿಯ ಸಹಕಾರಿ ಬ್ಯಾಂಕ್ ಎಂದು ಖ್ಯಾತಿ ಪಡೆದ ಈ ಬ್ಯಾಂಕ್ ಇತ್ತಿಚೇಗೆ ಸಹಕಾರಿ ಇಲಾಖೆಯಿಂದ ಸೂಪರ್ ಗ್ರೇಡ್ ಬ್ಯಾಂಕ್ ಆಗಿ ಪದವಿಗೇರಿದೆ.
ಪ್ರಸ್ತುತ ಆಡಳಿತ ಸಮಿತಿಯಲ್ಲಿ 1992 ರಿಂದ ಆಧ್ಯಕ್ಷರಾಗಿ 24 ವರ್ಷಗಳ ಸುದೀರ್ಘ ಅವಧಿಯಲ್ಲಿ ಬ್ಯಾಂಕಿನ ಸರ್ವತೋಮುಖ ಆಭಿವೃದ್ಧಿಗೆ ಶ್ರಮಿಸಿದ ಬಿ.ಎಂ.ಆನಂತ, ಕಾರ್ಯದರ್ಶಿಯಾಗಿ ಎಸ್.ರಾಮಚಂದ್ರ, ಉಪಾಧ್ಯಕ್ಷರಾಗಿ ಯೋಗೀಶ ಕೆ, ನಿರ್ದೇಶಕರಾದ ಬಿ.ವಿ.ರಾಜಗೋಪಾಲ, ಡಾ.ಕೆ.ಎ ಖಾದರ್, ಕೇಶವ.ಕೆ, ರಾಮದಾಸ.ಕೆ, ಗಣೇಶ್ ಸಿ.ಎಚ್, ರೇಖಾ, ಸುರೇಖಾ, ನತಾಲಿಯಾ ಮೊಂತೆರೋ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ.
ಬ್ಯಾಂಕಿನ ಸರ್ವತೋಮುಖ ಆಭಿವೃದ್ಧಿಯಲ್ಲಿ ಸಿಬ್ಬಂದಿಗಳ ಪರಿಶ್ರಮ ಮತ್ತು ಎಲ್ಲಾ ಸದಸ್ಯರ ಹಾಗೂ ಗ್ರಾಹಕರ ಸಹಕಾರ ಬ್ಯಾಂಕ್ ಸ್ಮರಿಸುತ್ತಿದೆ.
Click this button or press Ctrl+G to toggle between Kannada and English