ಜನರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸಿ ಜಾಗೃತಿ ಮೂಡಿಸಬೇಕು

9:52 PM, Saturday, April 30th, 2011
Share
1 Star2 Stars3 Stars4 Stars5 Stars
(No Ratings Yet)
Loading...

ನ್ಯಾಯಾಲಯ ಹಾಗೂ ನ್ಯಾಯಾಂಗ ಅಧಿಕಾರಿಗಳ ವಸತಿಗೃಹಕ್ಕೆ ಶಂಕುಸ್ಥಾಪನೆಮಂಗಳೂರು : ತನ್ನ ಸುತ್ತ ನಡೆಯುತ್ತಿರುವ  ಅನ್ಯಾಯ ಶೋಷಣೆ,ಭ್ರಷ್ಠಾಚಾರ,ಕೊಲೆಸುಲಿಗೆಗಳು ನಿಲ್ಲಬೇಕಾದರೆ ಪ್ರತಿಯೊಬ್ಬರೂ ಕಾನೂನಿನ ಅರಿವನ್ನು ಹೊಂದಬೇಕು.ಆಗ ಮಾತ್ರ ಭ್ರಷ್ಠಾಚಾರಿಗಳು,ಸ್ವಜನ ಪಕ್ಷಪಾತಿಗಳು,ಕೊಲೆಗಡುಕರು ಮುಂತಾದವರು ಸಮಾಜದಿಂದ ದೂರ ಹೋಗುತ್ತಾರೆ.ಇದರಿಂದ ಸಮಾಜದಲ್ಲಿ ನೆಮ್ಮದಿ ಶಾಂತಿ ಸೌಹಾರ್ಧತೆ ಮೂಡಿ ಜನರ ಜೀವನ ಸುಖಮಯವೂ,ಪ್ರಗತಿದಾಯಕವೂ ಆಗಿರುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀ ಎಚ್.ಎನ್.ನಾಗಮೋಹನದಾಸ್ ಅವರು ತಿಳಿಸಿದ್ದಾರೆ.
ಅವರು ಇಂದು ಮೂಡಬಿದ್ರೆಯಲ್ಲಿ ರೂ.4ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಿಕದಂಡಾಧಿಕಾರಿಗಳ ನ್ಯಾಯಾಲಯ ಹಾಗೂ ನ್ಯಾಯಾಂಗ ಅಧಿಕಾರಿಗಳ ವಸತಿಗೃಹಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು.
ನ್ಯಾಯಾಲಯಗಳು ಶೋಷಿತರಿಗೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಇರುವುದು,ನಾವು ನ್ಯಾಯಾಧೀಶರು,ನ್ಯಾಯಾಂಗ ಅಧಿಕಾರಿಗಳು ವಕೀಲರು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯಾಚರಿಸಿದಾಗ ಮತ್ತು ಉತ್ತಮ ನ್ಯಾಯದಾನ ಮಾಡಲು ಸಾಧ್ಯ ಎಂದರು.
ಇಂದು ಯಾವ ಕ್ಷೇತ್ರದಲ್ಲಿ ಅನ್ಯಾಯವಾಗುತ್ತಿದೆಯೋ ಅಲ್ಲಿಯೇ ತೀರ್ಮಾನ ತೆಗೆದುಕೊಳ್ಳುವ ಬದಲು ಕೋರ್ಟ್  ಮೆಟ್ಟಿಲೇರುತ್ತಿವೆ. ಇದರಿಂದ ಕೋರ್ಟ್ ಕಾರ್ಯಗಳು ಒತ್ತಡದಿಂದ ಕೂಡಿವೆ. ಒಬ್ಬ ತಾಯಿ ತನ್ನ ಕಂದನಿಗೆ ಹಾಲೂಡಿಸುವ ವಿಷಯ ಇರಬಹುದು.ಒಬ್ಬ ತಾಯಿ ತನ್ನ ಗರ್ಭವನ್ನು ಬಾಡಿಗೆಗೆ ಕೊಡುವುದಿರಬಹುದು ಇಂತಹ ವಿಶೇಷ ದೂರುಗಳು ಇಂದು ಕೋರ್ಟ್ ನಲ್ಲಿವೆ. ಇಂತಹ ಮೊಕದ್ದಮೆಗಳನ್ನು ಸವಾಲಾಗಿ ಸ್ವೀಕರಿಸಲು ವಕೀಲರು ತಮ್ಮ ಬುದ್ಧಿ ಕಾರ್ಯಕ್ಷಮತೆ ವೈಜ್ಞಾನಿಕ ಸಾಧನೆಗಳು ಮಾನವನ ಕಲ್ಯಾಣಕ್ಕೂ ನೆರವಾಗಿವೆ.ಹಾಗೆಯೇ ಮಾನವ ಸಂಬಂಧಗಳನ್ನು ಮುರಿಯುವಲ್ಲಿ ಸಹ ಪರಿಣಾಮ ಬೀರಿವೆಯೆಂದರು.ಜನ ರಾಜಕೀಯ ಜಂಜಾಟಗಳ ಬಗ್ಗೆ ಧ್ವನಿ ಎತ್ತದ ಹೊರತು ನಮಗೆ ಪ್ರಗತಿ ಸಾಧ್ಯವಿಲ್ಲ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಕಾನೂನು,ಮಾನವ ಹಕ್ಕುಗಳು ಹಾಗೂ ಪೌರಾಡಳಿತ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ಭಾಗವಹಿಸಿದ್ದರು.
ಸಮಾರಂಭದಲ್ಲಿ ನ್ಯಾಯಮೂರ್ತಿಗಳಾದ ಶ್ರೀ ಎಸ್.ಅಬ್ದುಲ್ ನಜೀರ್,ಶ್ರೀ ಬಿ.ವಿ.ಪಿಂಟೋ,ಹೆಚ್ಚುವರಿ ಅಡ್ವೋಕೇಟ್ ಜನರಲ್ ಶ್ರೀ ಎಂ.ಕೆ.ನಟರಾಜ್ ಮುಂತಾದವರು ಮಾತನಾಡಿದರು. ವಿಶೇಷ ಅಹ್ವಾನಿತರಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ನ ಉಪಾಧ್ಯಕ್ಷರಾದ ಶ್ರೀ ಪಿ.ಪಿ.ಹೆಗ್ಡೆ,ರಾಜ್ಯ ವಕೀಲರ ಪರಿಷತ್ನ ಸದಸ್ಯರಾದ ಶ್ರೀ ಟಿ.ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಮೂಡಬಿದ್ರೆ ಶಾಸಕರಾದ ಶ್ರೀ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎಚ್.ಆರ್.ದೇಶಪಾಂಡೆ ಸರ್ವರನ್ನು ಸ್ವಾಗತಿಸಿದರು.ಮೂಡಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಕೋಟ್ಯಾನ್ ಪ್ರಸ್ತಾವಿಕ ಭಾಷಣ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English