ಕಾಸರಗೋಡು: ಮಂದ ಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ ನಡೆಸಿ ಹಣ ಸಂಪಾದಿಸಲು ಹೊರಟ ತಾಯಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿಯ ಮರೈನ್ ಡ್ರೈವ್ನಲ್ಲಿರುವ ಆಡಂಬರ ಪ್ಲಾಟ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿದೆ. ಸೆರೆಗೀಡಾದವರೆಲ್ಲಾ ಕೊಲ್ಲಂ ಕೊಟ್ಟಾರಕ್ಕರ ಪರಿಸರ ನಿವಾಸಿಗಳಾಗಿದ್ದಾರೆ. ಕೊಚ್ಚಿ ಕೇಂದ್ರೀಕರಿಸಿ ಪ್ರಾಯ ಪೂರ್ತಿಯಾಗದ ಹಾಗೂ ಮಂದಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಕಲ್ಲಿಕೋಟೆ ನಿವಾಸಿಯಾದ ಮೀನು ವ್ಯಾಪಾರಿಯೆಂದು ತಿಳಿಸಿ ವೇಶ್ಯಾವಾಟಿಕೆ ದಂಧೆಯ ರೂವಾರಿಗಳನ್ನು ಪೊಲೀಸರು ಸಂಪರ್ಕಿಸಿದ್ದಾರೆ.
ಈ ವೇಳೆ ನಾಲ್ಕು ಲಕ್ಷ ರೂ. ನೀಡಿದರೆ ಬಾಲಕಿಯನ್ನು ಕೊಚ್ಚಿಯ ಪ್ಲಾಟ್ಗೆ ತಲುಪಿಸಿಕೊಡುವುದಾಗಿ ತಂಡ ತಿಳಿಸಿದೆ. ಇದರಂತೆ ಶನಿವಾರ ಮಧ್ಯಾಹ್ನ ಮೀನು ವ್ಯಾಪಾರಿಯ ವೇಷದಲ್ಲಿ ಮರೈನ್ ಡ್ರೈವ್ನ ಆಡಂಬರದ ಪ್ಲಾಟ್ಗೆ ತಲುಪಿದ ಪೊಲೀಸ್ ಅಧಿಕಾರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Click this button or press Ctrl+G to toggle between Kannada and English