ಮಂಜೇಶ್ವರ: ಎಲ್ಲಾ ಧರ್ಮಗಳೂ ಜಗತ್ತಿಗೆ ಶಾಂತಿ ಸಹಬಾಳ್ವೆಯನ್ನು ಬೋಧಿಸಿವೆ. ಶಾಂತಿ ಸೌಹಾರ್ದತೆಯನ್ನು ಮೈಗೂಡಿಸಿಕೊಂಡರೆ ಬದುಕು ಪರಿಪೂರ್ಣವಾಗುತ್ತವೆ ಎಂದು ಮಾಜೀ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.
ಅವರು ಇಲ್ಲಿನ ಮಚ್ಚಂಪಾಡಿ ಬಪ್ಪಂಕುಟ್ಟಿ ವಲಿಯುಲ್ಲಾಹೀ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ವಿಭಿನ್ನ ಸಂಸ್ಕ್ರತಿಯ ದೇಶವಾಗಿದ್ದು. ಇಲ್ಲಿ ಧಾರ್ಮಿಕ ಸೌಹಾರ್ದತೆ ಸಂಪನ್ನವಾಗಿದೆ,ಭಾರತದಷ್ಟು ವೈವಿಧ್ಯತೆಯಿರುವ ರಾಷ್ಟ್ರ ಜಗತ್ತಿನಲ್ಲಿ ಬೇರೊಂದಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಪಿ.ಎಚ್.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಚ್ಚಂಪಾಡಿ ಗ್ರಾಮೀಣ ಸಡಕ್ ಯೋಜನೆಯ ರಸ್ತೆಗೆ ದಶಕಗಳ ಹಿಂದೆ ಶ್ರಮಿಸಿದ ಆಸ್ಕರ್‌ರವರ ಕೊಡುಗೆಯನ್ನು ಅವರು ಶ್ಲಾಘಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ವರ್ಕಾಡಿ, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಮಾಅತ್ ಅಧ್ಯಕ್ಷ ಹುಸೈನಾರ್ ಹಾಜಿ , ಅಬ್ದುಲ್ಲ ಹಾಜಿ ಬಾಕಿಮಾರ್, ಅಜಿಜ್ ಕೋಡಿ, ಇಬ್ರಾಹಿಂ, ಅಬ್ದುಲ್ ಹಾಜಿ ಇಡಿಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ, ಪತ್ರಕರ್ತರಾದ ಆರಿಫ್ ಮಚ್ಚಂಪಾಡಿ, ಮೋಹನ್ ನಂಬ್ಯಾರ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English